ತಾಯ್ಮಾತಿನ ಶಿಕ್ಶಣ ಯಾಕೆ?

Date: 09-11-2024

Location: ಬೆಂಗಳೂರು


"ಮಕ್ಕಳು ಹುಟ್ಟಿನಿಂದ ಎಲ್ಲವನ್ನೂ ಗ್ರಹಿಸುವ, ಕಲಿಯುವ, ಪಡೆಯುವ ಸಾಮರ್‍ತ್ಯವನ್ನು ಹೊಂದಿರುತ್ತವೆ ಮತ್ತು ನಿರಂತರ ಆ ಪ್ರಕ್ರಿಯೆಯಲ್ಲಿ ಇರುತ್ತವೆ ಎಂಬುದು ನಿಜವಾದರೂ ಅವರಿಗೆ ತಾವು ಕಲಿಯುತ್ತಿರುವುದು, ಪಡೆಯುತ್ತಿರುವುದು ಮತ್ತು ಅದಕ್ಕೆ ಪೂರಕವಾಗಿ ತಮಗೆ ಇರಬಹುದಾದ ಸಾಮರ್‍ತ್ಯ ಈ ಯಾವುಗಳ ಅರಿವೂ ಇರುವುದಿಲ್ಲ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ತಾಯ್ಮಾತಿನ ಶಿಕ್ಶಣ ಯಾಕೆ?’ ಕುರಿತು ಬರೆದಿರುವ ಲೇಖನ.

ತಾಯ್ಮಾತಿನ ಶಿಕ್ಶಣದಿಂದ ಆಗುವ ಕೆಲವು ಅತ್ಯಂತ ಮಹತ್ವದ ಉಪಯೋಗಗಳನ್ನು ಕುರಿತು ಇಲ್ಲಿ ಮಾತನಾಡಿದೆ. ತಾಯ್ಮಾತಿನ ಶಿಕ್ಶಣದಿಂದ ವಿದ್ಯರ‍್ತಿಗಳಿಗೆ, ಶಿಕ್ಶಣ ಕ್ಶೇತ್ರಕ್ಕೆ, ಸಮಾಜ-ದೇಶಕ್ಕೆ, ಆಯಾ ಬಾಶೆಗಳಿಗೆ ಹೀಗೆ ಹಲವಾರು ಆಯಾಮಗಳಲ್ಲಿ ಅನೇಕಾನೇಕ ಅನುಕೂಲಗಳು ಆಗುತ್ತವೆ. ಇವುಗಳಲ್ಲಿ ಅತ್ಯಂತ ಮಹತ್ವದವಾದ ಕೆಲವನ್ನು ಮಾತ್ರ ಇಲ್ಲಿ ಮಾತನಾಡಲಾಗುತ್ತಿದೆ.

ಮಕ್ಕಳಿಗೆ ಅವರ ಮನೆ, ತಾಯಿ-ತಂದೆ, ಮನೆಯವರು ಒಂದು ಜಗತ್ತು ಆಗಿರುತ್ತಾರೆ. ಮಕ್ಕಳು ಶಾಲೆಗೆ ಬಂದಾಗ ಅದೊಂದು ಬಿನ್ನವಾದ ಜಗತ್ತು ಅಗಿರುತ್ತದೆ. ಹಾಗಾಗಿ ಮಕ್ಕಳು ಇದುವರೆಗೆ ಪರಿಚಿತವಾದ ಜಗತ್ತಿನಿಂದ ಅಪರಿಚಿತವಾದ ಇನ್ನೊಂದು ಜಗತ್ತಿಗೆ ಬಂದಾಗ ಸಹಜವಾಗಿಯೆ ಎಲ್ಲವೂ ಹೊಸದಾಗಿರುತ್ತದೆ ಮತ್ತು ಆ ಜಗತ್ತು ಮಕ್ಕಳಿಗೆ ಹಿತವಾಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಮಕ್ಕಳು ಹುಟ್ಟಿನಿಂದ ಎಲ್ಲವನ್ನೂ ಗ್ರಹಿಸುವ, ಕಲಿಯುವ, ಪಡೆಯುವ ಸಾಮರ್‍ತ್ಯವನ್ನು ಹೊಂದಿರುತ್ತವೆ ಮತ್ತು ನಿರಂತರ ಆ ಪ್ರಕ್ರಿಯೆಯಲ್ಲಿ ಇರುತ್ತವೆ ಎಂಬುದು ನಿಜವಾದರೂ ಅವರಿಗೆ ತಾವು ಕಲಿಯುತ್ತಿರುವುದು, ಪಡೆಯುತ್ತಿರುವುದು ಮತ್ತು ಅದಕ್ಕೆ ಪೂರಕವಾಗಿ ತಮಗೆ ಇರಬಹುದಾದ ಸಾಮರ್‍ತ್ಯ ಈ ಯಾವುಗಳ ಅರಿವೂ ಇರುವುದಿಲ್ಲ. ಹಾಗಾಗಿ ಕಲಿಕೆ-ಗಳಿಕೆ ಪ್ರಕ್ರಿಯೆ ಮಕ್ಕಳ ಇಚ್ಚೆಯ ಆಚೆಗೆ ಅಂದರೆ ಅಪ್ರಗ್ನಾಪೂರಕವಾಗಿ ನಡೆಯುತ್ತಿರುತ್ತದೆ. ಇಂತಾ ಸಂದರ‍್ಬದಲ್ಲಿ ಮಕ್ಕಳಿಗೆ ಅವರ ಮನೆ ವಾತಾವರಣದಿಂದ ಸಂಪೂರ‍್ಣವಾಗಿ ಹೊರತಂದರೆ ಮಕ್ಕಳು ಸಹಜವಾಗಿ ವಿಚಲಿತರಾಗುತ್ತಾರೆ. ತಮಗೆ ಇದುವರೆಗೆ ದಕ್ಕಿದ್ದು ಮತ್ತು ಶಾಲಾ ವಾತಾವರಣದಲ್ಲಿ ದೊರೆಯುತ್ತಿರುವುದು ಇವುಗಳ ನಡುವೆ ಬಹು ವ್ಯತ್ಯಾಸವಾಗುತ್ತದೆ. ಬಾಶೆಯ ಬದಲಾವಣೆ ಕೇವಲ ಬಾಶಿಕ ಬದಲಾವಣೆ ಆಗಿರದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆಯೂ ಆಗಿರುತ್ತದೆ. ಇದನ್ನು ಗಮನಿಸಿದಾಗ ಮಕ್ಕಳು ಅನುಬವಿಸಬಹುದಾದ ಸ್ತಿತಿಯನ್ನು ಊಹಿಸಿಕೊಳ್ಳಬಹುದು.

ಮಕ್ಕಳಿಗೆ ಪರಿಚಿತವಾದ ಬಾಶೆಯಲ್ಲಿ ಶಾಲಾ ವಾತಾವರಣವನ್ನು ಕೊಡುವುದಾದರೆ ಸಹಜವಾಗಿ ಮಕ್ಕಳು ಉಲ್ಲಸಿತವಾಗಿರುತ್ತವೆ. ಬಾಶೆಯೆ ಅರ‍್ತವಾಗದಿದ್ದರೆ ಬಾಶೆಯಲ್ಲಿ ಕೊಡುವ ಎಲ್ಲವೂ ಅರ‍್ತವಾಗುವುದಿಲ್ಲ. ಇಂತಾ ಪರಿಸರದಲ್ಲಿ ಮಕ್ಕಳು ಹೆಚ್ಚು ಬಾಶೆಯ ಕಡೆಗೆ ಗಮನ ಹರಿಸುತ್ತಿರುತ್ತಾರೆ. ಅದರಿಂದ ಆ ಬಾಶೆಯ ಮೂಲಕ ಮಗುವಿಗೆ ಕೊಡಬಹುದಾದ ವಿಶಯ ಮಕ್ಕಳಿಗೆ ದಕ್ಕುವುದಿಲ್ಲ. ಬಾಶೆಯನ್ನು ಪಡೆದುಕೊಂಡು ಇಲ್ಲವೆ ಕಲಿತು ಆನಂತರ ಅದರ ಮೂಲಕ ವಿಶಯವನ್ನು ಕಲಿಯುವುದಕ್ಕೆ ತುಸು ಸಮಯ ಹಿಡಿಯುತ್ತದೆ. ಹೀಗೆ ಮಗು ಬಾಶೆಯನ್ನು ಕಲಿಯುವ ವೇಳೆಗೆ ಸಮಯ ಒಂದಶ್ಟು ದಾಟಿಬಿಟ್ಟಿರುತ್ತದೆ. ಹಾಗಾಗಿ ಮಗು ಶಿಕ್ಶಣದಲ್ಲಿ ಹಿಂದುಳಿಯುವ ಸಾದ್ಯತೆಗಳು ಹೆಚ್ಚಾಗಿಬಿಡುತ್ತವೆ. ಆಗ ಮಕ್ಕಳು ಕಂಟಪಾಟ ಮಾಡುವ ಕಡೆಗೆ, ನೆನಪಿಟ್ಟುಕೊಳ್ಳುವ ಕಡೆಗೆ ಹೆಚ್ಚು ಗಮನ ಹರಿಸುತ್ತವೆ. ಕಂಟಪಾಟ ಮತ್ತು ನೆನಪಿಟ್ಟುಕೊಳ್ಳುವುದು ತುಂಬಾ ಕಡಿಮೆ ಮಟ್ಟದ ಮತ್ತು ಬವುದ್ದಿಕ ವಿಕಸನಕ್ಕೆ ಪೂರಕವಲ್ಲದ ಬದಲಿಗೆ ಎರವಾಗುವ ಒಂದು ಪ್ರಕ್ರಿಯೆ. ಇದರಿಂದ ಮಕ್ಕಳು ವಿಶಯವನ್ನು ಅನುಬವಿಸಲಾರರು. ವಿಶಯವು ಮಕ್ಕಳ ಅನುಬವಕ್ಕೆ ಬಾರದೆ ಅದು ಅವರ ಮನೋವಿಕಾಸಕ್ಕೆ ಪೂರಕ ಆಗಲಾರದು.

ಮಕ್ಕಳು ಕಂಟಪಾಟ ಮಾಡುವ ಮತ್ತು ನೆನಪಿಟ್ಟುಕೊಳ್ಳುವ ಪ್ರಕ್ರಿಯೆಗಿಂತ ವಿಶಯವನ್ನು ಅರ‍್ತ ಮಾಡಿಕೊಳ್ಳುವುದು ಮತ್ತು ಅದನ್ನು ಅನುಬವಿಸುವುದು ಬಹುಮುಕ್ಯವಾದದ್ದು. ಇದರಿಂದ ಮಾತ್ರ ಮಕ್ಕಳು ಮಾನಸಿಕವಾಗಿ ಮುಕ್ತವಾಗಿ ಇರಲು ಸಾದ್ಯ. ಹೀಗೆ ಮಾನಸಿಕ ವಿಕಸನಕ್ಕೆ ದಾರಿಯಾಗುತ್ತದೆ. ಇದು ಮಕ್ಕಳನ್ನು ಮಾನಸಿಕವಾಗಿ ಗಟ್ಟಿಗರನ್ನಾಗಿಸುತ್ತದೆ ಕೂಡ.

ಇನ್ನು ಕೆಲವು ಸಹಜ ಕಣ್ಣಿಗೆ ಕಾಣಬಹುದಾದ ವಿಚಾರಗಳನ್ನು ಇಲ್ಲಿ ಸುಮ್ಮನೆ ಅವಲೋಕಿಸೋಣ. ತುಸು ಬಾವುಕವಾಗಿರುವುದನ್ನೂ ಗಣನೆಗೆ ತೆಗೆದುಕೊಳ್ಳಬೇಕಿದೆ. ಈ ಬಾವುಕ ವಿಚಾರಗಳು ತರ‍್ಕಿಕವಾಗಿದ್ದು ಇವುಗಳು ಮಗುವಿನ ಮಾನಸಿಕ ಬೆಳವಣಿಗೆಯಲ್ಲಿ ಗಂಬೀರವಾದ ಪ್ರಬಾವವನ್ನು ಬೀರುತ್ತವೆ. ಹಲವಾರು ಸಂಶೋದಕರು ಮಕ್ಕಳ ಬದುಕಿನಲ್ಲಿ ಈ ಬಾವುಕತೆ ವಹಿಸುವ ಪಾತ್ರದ ಕುರಿತು ಅನೇಕಾನೇಕ ಅದ್ಯಯನಗಳನ್ನು ಮಾಡಿದ್ದಾರೆ. ಮಕ್ಕಳ ಸಾಮಾಜಿಕತೆ ಅವರ ಬವಿಶ್ಯದ ಉತ್ತಮ ಬದುಕಿಗೆ ಸೂಕ್ತ ಆದಾರವನ್ನು ಒದಗಿಸುತ್ತದೆ. ಮಕ್ಕಳು ಎಳವೆಯಲ್ಲಿ, ಬಾಲ್ಯದಲ್ಲಿ ಪಡೆಯುವ ಹಾಡು, ಕುಣಿತ, ಸಂಗೀತ, ಸಂಬಂದಗಳು, ಕತೆಗಳು, ಕತೆಗಳಲ್ಲಿನ ರೋಚಕತೆ ಮೊದಲಾದವು ಮಕ್ಕಳ ಮನೋವಿಕಾಸಕ್ಕೆ ಅತ್ಯವಶ್ಯಕವಾದವು. ಇಲ್ಲಿ ಗಮನಿಸಿ, ಇಂತವುಗಳನ್ನು ಪೆರಮಾತಿನಲ್ಲಿ ಮಕ್ಕಳಿಗೆ ಕೊಡುವುದಕ್ಕೆ ಸಾದ್ಯವೆ ಇಲ್ಲ. ಯಾಕೆಂದರೆ ಈ ಮೊದಲೆ ಹೇಳಿದಂತೆ ಮಕ್ಕಳ ತಾಯ್ಮಾತಿನ ರಚನೆಯೆ ಅವರ ಮಾನಸಿಕ ಮತ್ತು ಸಾಮಾಜಿಕ ರಚನೆಯನ್ನು ಗಟ್ಟಿಯಾಗಿ ಪ್ರಬಾವಿಸುತ್ತಿರುತ್ತದೆ. ಇದರಿಂದ ಹೊರ ತರುವುದು ಮಕ್ಕಳ ಬೆಳವಣಿಗೆಯನ್ನು ಅಶ್ಟುಮಟ್ಟಿಗೆ ಬಾದಿಸಿದಂತೆ ಆಗುತ್ತದೆ. ಹಾಗಾಗಿ ಮಕ್ಕಳಿಗೆ ತಾಯ್ಮಾತಿನಿಂದ ದೂರಕ್ಕೆ ಕರೆದುಕೊಂಡು ಹೋಗುವ ಯಾವುದೆ ಅವಕಾಶವನ್ನು ಸಾದ್ಯವಿರುಶ್ಟು ಕಡಿಮೆ ಮಾಡಬೇಕು. ಇದು ಬದುಕಿನ ಉದ್ದಕ್ಕೂ ಆಗಬೇಕು. ಆದರೆ, ಬಾಲ್ಯದಲ್ಲಿ ಮಾತ್ರ ಕಂಡಿತವಾಗಿ ತಾಯ್ಮಾತಿನ ವಾತಾವರಣದಿಂದ ಮಕ್ಕಳನ್ನು ದೂರ ತರಬಾರದು.

ಎಲ್ಲ ಬಗೆಯ ಸಾಮಾಜಿಕ ಅನುಬವಗಳನ್ನು ಮಕ್ಕಳು ಯಾರೊ ಹೇಳಿಕೊಡುವ ಮೂಲಕ ಕಲಿಯುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಅಳುವುದು, ನಗುವುದು, ಸಿಟ್ಟಾಗುವುದು, ಒಲವು ತೋರುವುದು, ಕೊಂಕುವುದು, ನಾಟಕ ಮಾಡುವುದು ಇವೆಲ್ಲವನ್ನು ಯಾವ ಮಕ್ಕಳಿಗೂ ಯಾರೂ ಹೇಳಿಕೊಡುವುದಿಲ್ಲ. ನಮಸ್ಕರಿಸುವುದು, ಗವುರವಿಸುವುದು, ಸಂಬಂದದ ಬೆಲೆ ಮೊದಲಾದವನ್ನು ತಾಯಿ-ತಂದೆ ಇಲ್ಲವೆ ಮನೆಯವರು, ಇತರರು ಹೇಳಿಕೊಟ್ಟದ್ದರಿಂದ ಕಲಿಯುವುದಕ್ಕಿಂತ ಹೆಚ್ಚು ತಮ್ಮ ಸುತ್ತಲಿನ ವಾತಾವರಣವನ್ನು ಅವಲೋಕಿಸುತ್ತಾ ಮಕ್ಕಳು ಕಲಿಯುತ್ತಾರೆ. ಇವೆಲ್ಲವೂ ಮಕ್ಕಳ ಬದುಕನ್ನು ರೂಪಿಸುತ್ತವೆ. ಇದಕ್ಕಾಗಿಯೆ ತಾಯ್ಮಾತು ಮಕ್ಕಳ ಮಾನಸಿಕತೆ ಮತ್ತು ಸಾಮಾಜಿಕತೆಯನ್ನು ಒಟ್ಟೊಟ್ಟಿಗೆ ರೂಪಿಸುತ್ತವೆ ಎಂಬುದು ಒಂದು ವಾಸ್ತವ.

ಈ ಅಂಕಣದ ಹಿಂದಿನ ಅಂಕಣಗಳು
ತಾಯ್ಮಾತಿನ ಶಿಕ್ಶಣ: ಎಲ್ಲಿತನಕ
ಮಗುವಿನ ಮನೋವಿಕಾಸ, ಸಾಮಾಜಿಕತೆ ಮತ್ತು ಕಲಿಕೆ
ಮಗು ಮತ್ತು ಬಾಶಾಗಳಿಕೆ
ತಾಯ್ಮಾತು-ತಾಯಿ ಮಾತು-ಗುರ‍್ತಿಕೆ
ಮನುಶ್ಯ ದೇಹರಚನೆ ಮತ್ತು ಬಾಶಾ ಗಳಿಕೆ
ಬಾಶೆ ಮತ್ತು ಮಾತು
ಲಂಬಾಣಿ ಮತ್ತು ಇತರ ಉತ್ತರ ಬಾರತದ ಬಾಶೆಗಳ ಸಹಸಂಬಂದ
ಮಲಯಾಳಂ, ಕೊಡವ ಮತ್ತು ಇತರ ದ್ರಾವಿಡ ಬಾಶೆಗಳೊಂದಿಗನ ಸಹಸಂಬಂದ
ಮರಾಟಿ, ಉರ‍್ದು ಮತ್ತು ಇತರ ದಕ್ಶಿಣದ ಬಾಶೆಗಳೊಡನೆಯ ಸಹಸಂಬಂದ
ಕನ್ನಡ ಮತ್ತು ತಮಿಳು ಸಹಸಂಬಂದ
ತುಳುವಿನೊಡನೆ ಸಹಸಂಬಂದ
ಕನ್ನಡ ಮತ್ತು ತೆಲುಗು ಸಹಸಂಬಂದ
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ
ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?
ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?
ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ
ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?
ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು
ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ
ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ
ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

MORE NEWS

ತ.ರಾ.ಸು ಅವರ ೦-೦=೦ ಕಥೆಯಲ್ಲಿ ಸಾವಿನ ಸೂಕ್ಷ್ಮ ನೋಟ

26-12-2024 ಬೆಂಗಳೂರು

"ತ.ರಾ‌. ಸು ಅವರು “ಕಾದಂಬರಿಯನ್ನು ಬರೆಯುವುದಕ್ಕಿಂತ ಸಣ್ಣ ಕಥೆಯನ್ನು ಬರೆಯುವುದು ಕಠಿಣವಾದ ಮಾರ್ಗ ಎ...

ಬರಹಗಾರ ವಸ್ತುನಿಷ್ಠವಾಗಿ ಹೇಳದೇ ಹೋದರೆ...

25-12-2024 ಬೆಂಗಳೂರು

"ಈ ಕಾಲವನ್ನು ಅದು ಹೇಗೆ ಸಾರ್ಥಕ ಮಾಡಬಲ್ಲೆನೆಂಬುದು ಅವರ ಸಾಪೇಕ್ಷ ಸದಿಚ್ಛೆ ಮತ್ತು ನಿರೀಕ್ಷೆ. ಹೌದು ಸವಾಲು ಎಂಬಂ...

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...