Date: 08-09-2024
Location: ಬೆಂಗಳೂರು
ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಶ್ರೀಮತಿ ಎಚ್. ಆರ್. ಲಕ್ಷ್ಮಮ್ಮ ಮತ್ತು ಶ್ರೀ ಎ. ಬಿ ಮಾರೇಗೌಡ ಸ್ಮರಣಾರ್ಥ ಹಮ್ಮಿಕೊಂಡಿದ್ದ 'ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿ ಬಾ ಫುಲೆ' ಪ್ರಶಸ್ತಿ ಪ್ರದಾನ ಕಾರ್ಯಕ್ರಮವು 2024 ಸೆ. 08 ಭಾನುವಾರದಂದು ನಗರದ ಬಿಎಂಶ್ರೀ ಕಲಾಭಾವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ. ಚಿ ಬೋರಲಿಂಗಯ್ಯ, "ಶಿಕ್ಷಕರ ದಿನಾಚರಣೆ ಎಂದಾಗ ನನಗೆ ತಕ್ಷಣ ನೆನಪಾಗುವುದು ನನ್ನ ಪ್ರೈಮರಿ ತರಗತಿಯ ಮೇಷ್ಟ್ರು. ಯಾಕೆಂದರೆ ಸುಮಾರು 16 ವರ್ಷಗಳ ಕಾಲ ಅವರು ತಮ್ಮ ಸೇವೆಯನ್ನು ನನ್ನೂರಿಗೆ ನೀಡಿದ್ದಾರೆ. ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ಕೂಡ ತಮ್ಮ ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿದ್ದರು. ಪ್ರತೀ ವಾರ ಶನಿವಾರದಂದು ಊರಿನ ಜನರನ್ನು ಕಟ್ಟಿಕೊಂಡು ಸ್ವಚ್ಛತೆಯನ್ನು ಕೂಡ ಮಾಡಿಸುತ್ತಿದ್ದರು. ನಿಜವಾಗಿಯೂ ಶಿಕ್ಷಕರು ವಿದ್ಯಾರ್ಥಿಗಳ್ಳನ್ನು ರೂಪುಗೊಳ್ಳುವ ಬಗ್ಗೆ ಅನನ್ಯವಾದುದು," ಎಂದು ತಿಳಿಸಿದರು.
'ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿ ಬಾ ಫುಲೆ' ಪ್ರಶಸ್ತಿಯನ್ನು ಹಿರಿಯ ಕವಿ, ನಿವೃತ್ತ ಶಿಕ್ಷಕ ಚಂದ್ರಶೇಖರ ಹಡಪದ ಅವರಿಗೆ ಹಿರಿಯ ಕವಯತ್ರಿ ಡಾ. ಕೆ. ಷರೀಫಾ ಅವರು ಪ್ರಧಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಂಘರ್ಷ ಸಮಿತಿಯ ಎ. ಎಸ್. ನಾಗರಾಜಸ್ವಾಮಿ ಅವರು ವಹಿಸಿದ್ದರು.
ವೇದಿಕೆಯಲ್ಲಿ ಕನ್ನಡ ಹೋರಾಟಗಾರ, ಹಿರಿಯ ಪತ್ರಕರ್ತ ರಾಮಣ್ಣ ಎಚ್. ಕೊಡಿಹೊಸಹಳ್ಳಿ ಅವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಲವಾರು ಗಣ್ಯರು, ಸಾಹಿತ್ಯಾಸಕ್ತರು ಸೇರಿದ್ದರು.
ಬೆಂಗಳೂರು: ನ್ಯೂವೇವ್ ಬುಕ್ಸ್ ವತಿಯಿಂದ ಹಾಸ್ಯ ಲೇಖಕಿ, ಕಥೆಗಾರ್ತಿ ನಳಿನಿ ಟಿ. ಭೀಮಪ್ಪ ಅವರ ‘ಚಿತ್ತ ಬಕ್ಕ&rsqu...
"ಸರಳ ಸಜ್ಜನ ವ್ಯಕ್ತಿತ್ವದ ಸ್ನೆಹಮಯಿ ಕೆಕೆಜಿಯವರ ಅನರಿಕ್ಷಿತ ನಿಧನ ಕನ್ನಡ ಮಾತ್ರವಲ್ಲದೆ ಮಲೆಯಾಳ ಸಾಂಸ್ಕೃತಿಕ ಲೊ...
“ಅನುವಾದಗಳ ಮೂಲಕ ಅನ್ಯಭಾಷಾ ಸಂಸ್ಕೃತಿಗಳ ಸಂಪರ್ಕವೇ ವಾಹಕವಾಗಿ ಭಾಷೆ ಮತ್ತು ಸಾಹಿತ್ಯ ಅಭಿವೃದ್ಧಿಯಾಗುತ್ತದೆ ಎಂಬ...
©2025 Book Brahma Private Limited.