ಸರ‍್ವನಾಮಗಳು

Date: 11-02-2023

Location: ಬೆಂಗಳೂರು


''ಕನ್ನಡದಾಗ ನಾನು, ನಾವು ಎನ್ನುವ ಉತ್ತಮ ಪುರುಶ ಸರ‍್ವನಾಮಗಳು ಇವೆ. ಇವು ಮಾತಾಡುವವರನ್ನು ಉಲ್ಲೇಕಿಸುತ್ತವೆ. ಅದರೊಟ್ಟಿಗೆ ಮದ್ಯಮ ಪುರುಶಗಳಾದ ನೀನು, ನೀವು ಎಂಬುವು ಮಾತಾಡುವವರು ಯಾರನ್ನು ಉದ್ದೇಶಿಸಿ ಮಾತನಾಡುತ್ತಿರುವರೊ ಅವರನ್ನು ಹೇಳುತ್ತವೆ'' ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ‘ಸರ‍್ವನಾಮಗಳು’ ವಿಚಾರದ ಕುರಿತು ಬರೆದಿದ್ದಾರೆ.

ಸರ‍್ವನಾಮ ಎನ್ನುವುದು ಬಹುತೇಕ ಬಾಶೆಗಳಲ್ಲಿ ಒಂದು ಮಹತ್ವದ ಪದವರ‍್ಗ. ಸಾಮಾನ್ಯವಾಗಿ ಇದು ಮುಚ್ಚಿದ ಪದವರ‍್ಗ. ಅಂದರೆ, ಹೊಸ ಹೊಸ ನಾಮಪದಗಳು ಬೆಳೆಯುವ ಹಾಗೆ ಸರ‍್ವನಾಮಗಳು ಬೆಳೆಯುವುದಿಲ್ಲ. ಹಾಗಾಗಿ ಇವು ಮುಚ್ಚಿದ ಪದಕೋಶದ ವರ‍್ಗ. ಸಾಮಾನ್ಯವಾಗಿ ಮೂರು ಬಗೆಯ ಸರ‍್ವನಾಮಗಳನ್ನು ಮಾತಾಡಲಾಗುತ್ತದೆ. ಇವುಗಳನ್ನು ಉತ್ತಮ ಪುರುಶ (ನಾನು, ನಾವು), ಮದ್ಯಮ ಪುರುಶ (ನೀನು, ನೀವು) ಮತ್ತು ಪ್ರತಮ ಪುರುಶ (ಅವನು, ಅವಳು, ಅದು, ಅವರು ಮತ್ತು ಅವು) ಎಂದು ಕರೆಯಾಗುತ್ತದೆ. ಇವುಗಳನ್ನು ಯುರೋಪಿನ ಪರಂಪರೆಯಲ್ಲಿ ಕ್ರಮವಾಗಿ ಪ್ರತಮ ಪುರುಶ (ಪಸ್ಟ್ ಪರ‍್ಸನ್), ದ್ವಿತಿಯ ಪುರುಶ (ಸೆಕೆಂಡ್ ಪರ‍್ಸನ್) ಮತ್ತು ತ್ರುತಿಯ ಪುರುಶ (ತರ‍್ಡ್ ಪರ‍್ಸನ್) ಎಂದು ಕರೆಯಲಾಗುತ್ತದೆ. ಇಂದಿನ ದಿನಗಳಲ್ಲಿ ಬಾರತೀಯ ಪಾರಂಪರಿಕ ಪದಗಳನ್ನು ಮತ್ತು ಯುರೋಪಿನ ಪರಂಪರೆಯ ಪದಗಳನ್ನು ಒಟ್ಟೊಟ್ಟಿಗೆ ಬಳಸುತ್ತಿರುವುದು ಕಾಣಿಸುತ್ತದೆ. ಇದು ಸಾಮಾನ್ಯ ಕಲಿಯುವವರಲ್ಲಿ ಗೊಂದಲವನ್ನು ತರುತ್ತದೆ. ಯಾಕೆಂದರೆ ಪ್ರತಮ ಪುರುಶ ಎಂದರೆ ಬಾರತೀಯ ಪರಂಪರೆಯಲ್ಲಿ ‘ಅವನು’, ‘ಅವಳು’, ‘ಅದು’ ಆಗುತ್ತವೆ ಮತ್ತು ಯುರೋಪಿನ ಪರಂಪರೆಯಲ್ಲಿ ‘ನಾನು’, ‘ನಾವು’ ಆಗುತ್ತವೆ. ಇದು ಗಮನದಲ್ಲಿ ಇರಬೇಕು. ಈ ಬರಹದಲ್ಲಿ ಬಾರತೀಯ ಪರಂಪರೆಯ ಪದಗಳನ್ನು ಬಳಸಿದೆ.

ಸಾಮಾನ್ಯವಾಗಿ ಮಾತಾಡುವವರನ್ನು ಉತ್ತಮ ಪುರುಶ ಎಂದು ಮತ್ತು ಎದುರಿನವರನ್ನು ಅಂದರೆ ಮಾತಾಡುವವರು ಯಾರನ್ನು ಉದ್ದೇಶಿಸಿರುವರೊ ಅವರನ್ನು ಉತ್ತಮ ಪುರುಶ ಎಂದು ಕರೆಯಲಾಗುತ್ತದೆ. ಮಾತಿನಲ್ಲಿ ನೇರವಾಗಿ ಅಂದರೆ ಆಡುವ ಮತ್ತು ಉದ್ದಿಶ್ಟ ಪಾತ್ರವನ್ನು ವಹಿಸದೆ ಮಾತಾಡುವವರ ಮೂಲಕ ನಿರ‍್ದೇಶಗೊಳ್ಳುವವರನ್ನು ಪ್ರತಮ ಪುರುಶ ಎಂದು ಕರೆಯಲಾಗುತ್ತದೆ.

ಇವುಗಳನ್ನು, ಅಂದರೆ ವಿವಿದ ಸರ‍್ವನಾಮಗಳ ಪರಿಕಲ್ಪನೆಯನ್ನು ಕನ್ನಡದ ಸರ‍್ವನಾಮ ಪದಗಳನ್ನು ಬಳಸಿಕೊಂಡು ಸರಳವಾಗಿ ಮಾತಾಡಬಹುದು.

ಕನ್ನಡದಾಗ ನಾನು, ನಾವು ಎನ್ನುವ ಉತ್ತಮ ಪುರುಶ ಸರ‍್ವನಾಮಗಳು ಇವೆ. ಇವು ಮಾತಾಡುವವರನ್ನು ಉಲ್ಲೇಕಿಸುತ್ತವೆ. ಅದರೊಟ್ಟಿಗೆ ಮದ್ಯಮ ಪುರುಶಗಳಾದ ನೀನು, ನೀವು ಎಂಬುವು ಮಾತಾಡುವವರು ಯಾರನ್ನು ಉದ್ದೇಶಿಸಿ ಮಾತನಾಡುತ್ತಿರುವರೊ ಅವರನ್ನು ಹೇಳುತ್ತವೆ. ಸಾಮಾನ್ಯವಾಗಿ ಮದ್ಯಮ ಪುರುಶ ಎಂದರೆ ಎದುರು ಇರುವವರು ಎಂದು ಹೇಳುವುದನ್ನು ಕೇಳಿರಬಹುದು. ಆದರೆ, ಮೂಲಬೂತವಾಗಿ ಅದು ಮಾತಿನಲ್ಲಿ ಯಾರನ್ನು ಉದ್ದೇಶಿಸಲಾಗಿದೆಯೊ ಅವರನ್ನು ಹೇಳುತ್ತದೆ. ಇದನ್ನು ಸ್ಪಶ್ಟಗೊಳಿಸಿಕೊಳ್ಳುವುದಕ್ಕೆ ಒಂದು ವಾತಾವರಣವನ್ನು ಕಲ್ಪಿಸಿಕೊಳ್ಳಬಹುದು. ನಾಲ್ಕು ಮಂದಿ ಇರುವ ಒಂದು ಗುಂಪಿನಲ್ಲಿ ಕ ಎನ್ನುವವರು ಗ ಅವರೊಂದಿಗೆ ಮಾತನಾಡುತ್ತಿದ್ದಾರೆ ಮತ್ತು ಚ ಮತ್ತು ಜ ಎಂಬ ಇನ್ನಿಬ್ಬರು ಸುಮ್ಮನೆ ಕುಳಿತಿದ್ದಾರೆ. ಕ ಇವರು ಚ ಮತ್ತು ಜ 'ಇವರನ್ನು ಮನೆಗೆ ಕರೆದುಕೊಂಡು ಹೋಗಿ’ ಎಂದು ಗ ಅವರಿಗೆ ಹೇಳುತ್ತಾರೆ. ಆಗ ಬಳಸುವ ವಾಕ್ಯ, ನೀವು ಅವರನ್ನು ಮನೆಗೆ ಕರೆದುಕೊಂಡು ಹೋಗಿ. ವಾಸ್ತವದಲ್ಲಿ ಯಾರಿಗೆ ಕರೆದುಕೊಂಡು ಹೋಗಲು ಹೇಳುತ್ತಿದ್ದಾರೆಯೊ ಅವರು ಮತ್ತು ಯಾರನ್ನು ಕರೆದುಕೊಂಡು ಹೋಗಲು ಹೇಳಲಾಗುತ್ತಿದೆಯೊ ಅವರು ಎದುರಿಗೆನೆ ಇದ್ದಾರೆ. ಅಂದರೆ ಇಲ್ಲಿ ಸ್ಪಶ್ಟವಾಗುವುದೇನೆಂದರೆ ಯಾರನ್ನು ಉದ್ದೇಶಿಸಲಾಗಿದೆಯೊ ಅವರು ಮದ್ಯಮಪುರುಶ.

ಇದೆ ಉದಾಹರಣೆಯನ್ನು ಗಮನಿಸಿದಾಗ ‘ಅವಳು’, ‘ಅವನು’, ‘ಅದು’, ‘ಅವರು’, ‘ಅವು’ ಎಂಬ ಪ್ರತಮ ಪುರುಶ ಸರ‍್ವನಾಮಗಳನ್ನೂ ಅರಿತುಕೊಳ್ಳಬಹುದು. ಮಾತಿನೊಳಗೆ ಯಾರನ್ನು ಉಲ್ಲೇಕಿಸಲಾಗುತ್ತದೆಯೊ ಅವರನ್ನು ಪ್ರತಮ ಪುರುಶ ಎಂದು ಹೇಳಲಾಗುತ್ತದೆ. ಈ ಮೇಲಿನ ಬಳಕೆಯಲ್ಲಿ ಚ ಮತ್ತು ಜ ಇವರು ಮಾತನಾಡುತ್ತಿಲ್ಲ ಮತ್ತು ಕ ಅವರು ಮಾತನಾಡುವಾಗ ಅವರನ್ನು ನೇರವಾಗಿ ಉದ್ದೇಶಿಸಿಲ್ಲ. ಆದರೆ, ಅವರನ್ನು ಮಾತನಾಡುವಾಗ ಹೆಸರಿಸುತ್ತಾರೆ ಇಲ್ಲವೆ ಉಲ್ಲೇಕಿಸುತ್ತಾರೆ. ಅಂದರೆ ನಡೆಯುತ್ತಿರುವ ಮಾತಿನಲ್ಲಿ ಅವರು ನೇರ ಬಾಗಿಗಳಲ್ಲ, ಬದಲಿಗೆ ಅವರನ್ನು ಉಲ್ಲೇಕಿಸಲಾಗಿದೆ. ಹೀಗೆ ಮಾತಿನಲ್ಲಿ ಉಲ್ಲೇಕಗೊಳ್ಳುವವರು ಪ್ರತಮ ಪುರುಶ ಎನಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಪ್ರತಮ ಪುರುಶ ಎಂದರೆ ಎದುರಿಗೆ ಇಲ್ಲದವರು ಎಂದು ಹೇಳುವುದೂ ಇದೆ. ಆದರೆ, ಈ ಮೇಲಿನ ಉದಾಹರಣೆಯಲ್ಲಿ ಚ ಮತ್ತು ಜ ಅವರು ಮಾತಾಡುವವರ ಎದುರಿಗೆ ಇದ್ದರೂ ಅವರನ್ನು ‘ಅವರು’ ಎಂದು ಕರೆಯಲಾಗಿದೆ. ಹಾಗೆಯೆ ಪ್ರತಮ ಪುರುಶ ಇದನ್ನು ದೂರ ಇರುವವರು ಎಂದೂ ಕೆಲವೊಮ್ಮೆ ಹೇಳಲಾಗುತ್ತದೆ. ಆದರೆ, ದೂರ ಎಂಬುದನ್ನು ಬವುತಿಕ ದೂರ ಎಂದು ತೆಗೆದುಕೊಳ್ಳಬಾರದು.

ಇಲ್ಲಿ ಕನ್ನಡದ ಸರ‍್ವನಾಮಗಳ ಲಿಂಗ ಮತ್ತು ವಚನ ಇವುಗಳನ್ನು ಗಮನಿಸಬಹುದು. ಉತ್ತಮ ಪುರುಶ ಮತ್ತು ಮದ್ಯಮ ಪುರುಶ ಇವುಗಳಲ್ಲಿ ಒಂದು ಜೋಡಿಗುಣ ಇದೆ. ಅಂದರೆ ಇವೆರಡೂ ಏಕವಚನ 'ನಾನು','ನೀನು' ಮತ್ತು ಬಹುವಚನ 'ನಾವು', ನೀವು' ಎಂದು ಎರಡು ವಚನಗಳಲ್ಲಿ ಎರಡು ರೂಪಗಳನ್ನು ಹೊಂದಿವೆ. ಕನ್ನಡದಾಗ ಏಕವಚನ ಮತ್ತು ಬಹುವಚನ ಎಂಬ ಎರಡು ವಚನಗಳು ಇರುವುದರಿಂದ ಇಲ್ಲಿ ಎರಡು ರೂಪಗಳು ಸಹಜವಾಗಿ ಇವೆ. ಆದರೆ, ಉತ್ತಮ ಮತ್ತು ಮದ್ಯಮ ಇವು ಲಿಂಗವನ್ನು ಹೊಂದಿಲ್ಲ. ಗಮನಿಸಿ, ನಾನು ಪುಸ್ತಕ ಓದಿದೆ. ಇದರಲ್ಲಿ 'ನಾನು' ಎಂಬುದರ ಲಿಂಗ ಯಾವುದು ಎಂದು ಗೊತ್ತಾಗುವುದಿಲ್ಲ. ಹಾಗೆಯೆ 'ನೀನು' ಎಂಬುದಕ್ಕೂ ಕೂಡ. ಗಮನಿಸಿ, ನೀನು ಪುಸ್ತಕ ಓದು.

ಆದರೆ, ಪ್ರತಮ ಪುರುಶಕ್ಕೆ ಬಂದಾಗ ಅಲ್ಲಿ ವಚನ ಮತ್ತು ಲಿಂಗ ಈ ಎರಡೂ ಸ್ಪಶ್ಟವಾಗಿ ಗೊತ್ತಾಗುತ್ತವೆ. ಗಮನಿಸಿ,
ಏಕವಚನ-ಪುಲ್ಲಿಂಗ ಅವಳು ಪುಸ್ತಕ ಓದಿದನು
ಏಕವಚನ-ಸ್ತ್ರೀಲಿಂಗ ಅವನು ಪುಸ್ತಕ ಓದಿದಳು
ಏಕವಚನ-ನಪುಂಸಕ ಲಿಂಗ ಅದು ಪುಸ್ತಕ ಓದಿತು
ಬಹುವಚನ-ಮಾನವ ಅವರು ಪುಸ್ತಕ ಓದಿದರು
ಬಹುವಚನ-ಮಾನವ ಅಲ್ಲದ ಅವರು ಪುಸ್ತಕ ಓದಿದವು

ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬಹುದು. ಏಕವಚನದಲ್ಲಿ ಮೂರು ರೂಪಗಳು ಮತ್ತು ಬಹುವಚನದಲ್ಲಿ ಎರಡು ರೂಪಗಳು ಇವೆ. ಇದಕ್ಕೆ ಕಾರಣವೆಂದರೆ, ಕನ್ನಡದಲ್ಲಿ ಬಹುವಚನದಲ್ಲಿ ಸ್ತ್ರೀಲಿಂಗ ಮತ್ತು ಪುಲ್ಲಿಂಗ ಎಂಬ ಬಿನ್ನತೆ ಇರುವುದಿಲ್ಲ. ಹಾಗಾಗಿ ಆ ವ್ಯತ್ಯಾಸ ಸರ‍್ವನಾಮಗಳಲ್ಲಿಯೂ ಕಾಣಿಸುವುದಿಲ್ಲ.

ಸರ‍್ವನಾಮಗಳನ್ನು ಸಾಮಾನ್ಯವಾಗಿ ನಾಮಪದದ ಬದಲಿಗೆ ಬಳಸುವಂತವು ಎಂದು ಹೇಳುವುದೂ ಇದೆ. ಆದರೆ, ಕಳಗಿನ ವಾಕ್ಯದಲ್ಲಿ ಗಮನಿಸಿ,
ನಾನು ಪುಸ್ತಕ ಬರೆದೆ
ನೀನು ಪುಸ್ತಕ ಬರೆದೆ

ಈ ಎರಡೂ ವಾಕ್ಯಗಳಲ್ಲಿ 'ನಾನು' ಮತ್ತು 'ನೀನು' ಇವು ಯಾವ ನಾಮಪದವನ್ನು ಬದಲಿಸಿ ಬಳಕೆಯಾಗಿವೆ ಎಂಬುದು ಗೊತ್ತಾಗುವುದಿಲ್ಲ. ಬದಲಿಗೆ, ಅವು ನೇರವಾಗಿ ಬಳಕೆಯಾಗುತ್ತವೆ. ಇವು ನೇರವಾಗಿ ಬಳಕೆಯಾಗುವುದಕ್ಕೆ ಕಾರಣ 'ನಾನು' ಎನ್ನುವುದು ಮಾತಾಡುವುದು ಮತ್ತು 'ನೀನು' ಎನ್ನುವುದು ಮಾತಿನಲ್ಲಿ ಉದ್ದೇಶಿಸಿರುವುದು ಆಗಿರುತ್ತವೆ. ಹಾಗಾಗಿ, ಅದು ನೇರವಾಗಿ ಅವರನ್ನು ಉಲ್ಲೇಕಿಸುತ್ತಿದೆ. ಆದರೆ, ಪ್ರತಮ ಪುರುಶದಲ್ಲಿ ಇದು ತುಸು ಬಿನ್ನ, ಗಮನಿಸಿ,

ಅಂಬಮ್ಮ ಹಾಡಿದಳು, ಅವಳು ನಿನ್ನೆ ಊರಿಗೆ ಬಂದಿದ್ದಳು.

ಇಲ್ಲಿ, ಅಂಬಮ್ಮ ಎಂಬ ನಾಮಪದವನ್ನು ಮತ್ತೊಮ್ಮೆ ಉಲ್ಲೇಕಿಸಬೇಕಾದ ಸಂದರ‍್ಬದಲ್ಲಿ ಆ ನಾಮಪದವನ್ನು ತರದೆ ಅದನ್ನು ಉಲ್ಲೇಕಿಸುವುದಕ್ಕೆಂದು 'ಅವಳು' ಎಂಬ ಸರ‍್ವನಾಮವನ್ನು ಬಳಸಲಾಗುತ್ತದೆ. ಆದರೆ, ಈ ರೀತಿಯಲ್ಲಿ 'ನಾನು' ನೀನು' ಇವುಗಳನ್ನು ಬಳಸಲು ಆಗುವುದಿಲ್ಲ. ಹಾಗಾಗಿ, ಉತ್ತಮ ಮತ್ತು ಮದ್ಯಮ ಇವುಗಳನ್ನು ಮತ್ತು ಪ್ರತಮ ಪುರುಶ ಇವುಗಳನ್ನು ಪ್ರತ್ಯೇಕವಾಗಿ ನೋಡಬೇಕೆಂಬ ವಿಚಾರ ಇದೆ.

ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ

MORE NEWS

ಬನಶಂಕರಿಯ ನಾಟಕಗಳ ಜಾತ್ರೆ : ವೃತ್ತಿ ರಂಗಭೂಮಿಯ ಕುಂಭಮೇಳ

27-01-2025 ಬೆಂಗಳೂರು

"ಬನಶಂಕರಿಯ ಮೈತುಂಬಾ ತೀಡಿದ ತಂಗಾಳಿಭರಿತ ಹಿತವಾದ ಚುರುಕು ಬಿಸಿಲು. ಜನಜಂಗುಳಿಯ ಬಾದಾಮಿಯ ಬನಶಂಕರಿ ಮಹಾಜಾತ್ರೆಯೊಳ...

ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ವಿಶಯದಲ್ಲಿ ಸೋಲು

26-01-2025 ಬೆಂಗಳೂರು

"ಬಾಶೆಯ ಮೂಲಕ ಕೊಡುವುದರ ಕಡೆಗೆ ಅವರ ಗಮನ ಹರಿಯುವುದು ಕಶ್ಟವಾಗುತ್ತದೆ. ಇದರಿಂದ ಮಕ್ಕಳು ವಿಶಯವನ್ನು ಅನುಬವಿಸಲು ಸ...

ಕನ್ನಡ ವಿಮರ್ಶೆ 4 (ಮುಂದುವರೆದ 4ನೆ ಭಾಗ)  

24-01-2025 ಬೆಂಗಳೂರು

"ನಾಡು ಕಟ್ಟುವ, ಸಂಸ್ಕೃತಿಯನ್ನು ಪುನರುಜ್ಜೀವಿಸುವ ಕೆಲಸವನ್ನು ಕೈಗೆತ್ತಿಗೊಂಡ ಬರಹಗಾರರಲ್ಲಿ ನಾವೆಲ್ಲರು ಒಂದಾಗಿ ...