Date: 07-11-2024
Location: ಬೆಂಗಳೂರು
ಬೆಂಗಳೂರು: ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾರದ ಕಲಾ ಕಾಲೇಜು - ಬಂಡೆಪ್ಪ ಬಾಚಯ್ಯ ಸಂಗನಗೌಡ ಸಂಯುಕ್ತವಾಗಿ, ಸಂವಿಧಾನ ಕುರಿತ ಪ್ರಬಂಧ ಸ್ಪರ್ಧೆಯನ್ನು ರಾಜ್ಯ ಮಟ್ಟದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ದಿಸೆಯಲ್ಲಿ ಈ ಸ್ಪರ್ಧೆ ನಿಗದಿಯಾಗಿದೆ.
ಸ್ಪರ್ಧೆಯು ದಿನಾಂಕ: 16-11-2024, ಬೆಳಿಗ್ಗೆ 11:00 ಗಂಟೆಗೆ, ಬಂಡೆಪ್ಪ ಬಾಚಯ್ಯ ಸಂಗನಗೌಡ, ಸರ್ಕಾರದ ಕಲಾ ಕಾಲೇಜು, ಬೆಂಗಳೂರು - 01 (ಸೆಂಟ್ರಲ್ ಕಾಲೇಜು ಮೆಟ್ರೋ ಕಾಲೇಜು ಬಳಿ) ನಡೆಯಲಿದೆ.
ಬಹುಮಾನಗಳ ವಿವರ:
* ಪ್ರಥಮ ಬಹುಮಾನ: ರೂ. 15,000/-
* ದ್ವಿತೀಯ ಬಹುಮಾನ: ರೂ. 10,000/-
* ತೃತೀಯ ಬಹುಮಾನ: ರೂ. 5,000/-
* ಸಮಾಧಾನಕರ ಬಹುಮಾನ: ರೂ. 1,000/- (ಮೂವತ್ತು ಜನರಿಗೆ)
ಪ್ರಬಂಧದ ವಿಷಯಗಳು:
1. ಸಂವಿಧಾನ ಮತ್ತು ಪ್ರಜಾಸತ್ತಾತ್ಮಕತೆ
2. ಸಂವಿಧಾನ ಮತ್ತು ಮಹಿಳೆಯರು
3. ಸಂವಿಧಾನ ಮತ್ತು ಸಾಮಾಜಿಕ ನ್ಯಾಯ
4. ಸಂವಿಧಾನ ಮತ್ತು ಧರ್ಮನಿರಪೇಕ್ಷತೆ
ಸ್ಪರ್ಧೆಯ ನಿಯಮಗಳು:
1 ಒಂದು ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸುವುದು.
2 ಕರ್ನಾಟಕದಲ್ಲಿನ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಬಹುದು.
3 ನೀಡಿರುವ ನಾಲ್ಕು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಕುರಿತು ಕನ್ನಡ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಪ್ರಬಂಧವನ್ನು ಬರೆಯುವುದು.
4 ನಿಗದಿಪಡಿಸಿದ ದಿನದಂದು. ನಿಗದಿಪಡಿಸಿದ ಸ್ಥಳದಲ್ಲಿ ಮಾತ್ರ ಪ್ರಬಂಧವನ್ನು ಬರೆಯುವುದು. ಬರೆಯಲು ಹಾಳೆಗಳನ್ನು ಸ್ಥಳದಲ್ಲಿ ಒದಗಿಸಲಾಗುವುದು.
5 ಪ್ರಸ್ತುತ ಪದವಿ ಅಧ್ಯಯನ ವಿದ್ಯಾರ್ಥಿಗಳಾಗಿರಬೇಕು ಮತ್ತು ಕಾಲೇಜಿನ ಪ್ರಾಂಶುಪಾಲರ ದೃಢೀಕರಣ ಪತ್ರವನ್ನು ತರುವುದು ಕಡ್ಡಾಯ.
6 ಪ್ರಯಾಣ ಭತ್ಯೆ, ವಸತಿ ವ್ಯವಸ್ಥೆಯನ್ನು ಆಯಾ ಕಾಲೇಜು / ವಿದ್ಯಾರ್ಥಿಗಳೇ ಭರಿಸಿಕೊಳ್ಳುವುದು.
7 ತೀರ್ಪುಗಾರರ ತೀರ್ಮಾನವೇ ಅಂತಿಮ.
8. ದಿನಾಂಕ 13-11-2024 ರ ಒಳಗೆ ಭಾಗವಹಿಸುವ ವಿದ್ಯಾರ್ಥಿಗಳ ದೃಢೀಕರಣ ಪತ್ರವನ್ನು ಮೇಲ್ಕಂಡ ವಿಳಾಸಕ್ಕೆ ಕಳುಹಿಸಿ ಕೊಡುವುದು.
ಬಹುಮಾನಿತ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಸಂಚಾಲಕರು, ಕನ್ನಡ ಸಂಘ, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು-560001. ವಾಟ್ಸಪ್ ಸಂಖ್ಯೆ : 9060400677 ಸಂಚಾಲಕರು, ಸಂವಿಧಾನ ಅಭಿಯಾನ-ಕರ್ನಾಟಕ, ನಂ.184, 36ನೇ ಬಿ ಕ್ರಾಸ್, 7ನೇ ಬ್ಲಾಕ್, ಜಯನಗರ, ಬೆಂಗಳೂರು -79 ದೂರವಾಣಿ ಸಂಖ್ಯೆ: 7483950580 : janaprakashana@gmail.com
ಬೆಳಗಾವಿ: ಸುಪ್ರಸಿದ್ದ ಕವಯಿತ್ರಿ ಹಾಗೂ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕಿ ಆಶಾ ಕಡಪಟ್ಟಿ ಇಂದು ಮುಂಜಾನೆ 7.5...
ಬೆಂಗಳೂರು: 'ಕರ್ನಾಟಕ ಸುವರ್ಣ ಸಂಭ್ರಮ-50ರ ಭಾಗವಾಗಿ ರಾಜ್ಯದ 50 ಮಹಿಳಾ ಸಾಧಕರ ಬಗ್ಗೆ ಪುಸ್ತಕಗಳನ್ನು ಹೊರತರಲಾಗುತ...
ಬೆಂಗಳೂರು: ದಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕವು ಇದೇ 8 ಮತ್ತು 9 ರಂದು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲ...
©2024 Book Brahma Private Limited.