Date: 14-11-2024
Location: ಬೆಂಗಳೂರು
ಬೆಂಗಳೂರು: ಸಾಹಿತ್ಯ ಅಕಾದೆಮಿ ವತಿಯಿಂದ ‘ಸಾಹಿತ್ಯಕ ಕಾರ್ಯಕ್ರಮಗಳು ಮತ್ತು ಪುಸ್ತಕ ಪ್ರದರ್ಶನ-ರಿಯಾಯಿತಿ ಮಾರಾಟ ಕಾರ್ಯಕ್ರಮ’ವು 2024 ನಂ. 14 ರಿಂದ ನಂ.20 ರವರೆಗೆ ಮಲ್ಲತ್ತಹಳ್ಳಿಯ ಸಾಹಿತ್ಯ ಅಕಾದೆಮಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ನಂ. 14 ರಂದು ಪ್ರಸಿದ್ದ ಕನ್ನಡದ ಲೇಖಕ ವೆಂಕಟೇಶ್ ನೆಲ್ಲುಕುಂಟೆ ಅವರು ಉದ್ಘಾಟಿಸಿದರು.
ನಂತರದಲ್ಲಿ ಮಾತನಾಡಿದ ಅವರು, "ಸಾಹಿತ್ಯ ಅಕಾದೆಮಿಯಲ್ಲಿ ಈಗ ಹೆಚ್ಚು ಮಾರಾಟವಾಗುವುದು ತೇಜಸ್ವಿ, ಭೈರಪ್ಪ ಹಾಗೂ ಕುವೆಂಪು ಅವರ ಕೃತಿಗಳು. ಇವುಗಳಿಂದಲೇ ನಾವು ಓದುಗರ ಮನಸ್ಥಿತಿಯನ್ನು ಅರಿಯಬಹುದು. ಇನ್ನು ಪ್ರಸ್ತುತ ಜಗತ್ತಿನಲ್ಲಿ ಸದ್ದು ಮಾಡುತ್ತಿರುವ ಮತ್ತು ಓದುಗರನ್ನು ಸೆಳೆಯುತ್ತಿರುವ ಪ್ರಕಾರ ಸಾಂಸ್ಕೃತಿಕ ಬರಹಗಳು ಮತ್ತು ಇತಿಹಾಸ. ಯಾಕೆ ಇಂತಹ ಪರಿಸ್ಥಿತಿಗಳು ಉದ್ಭವಾಗುತ್ತದೆ ಎಂದು ಗೊತ್ತಿಲ್ಲ. ಇಂತಹ ಪರಿಸ್ಥಿತಿಯಿಂದ ಕೆಲವೊಂದು ಸಾಹಿತ್ಯಿಕ ಪ್ರಕಾರಗಳ ಪ್ರಾಮುಖ್ಯತೆ ಕಳೆದುಕೊಳ್ಳುವಂತಾಗುತ್ತಿದೆ," ಎಂದರು.
"ರಾಷ್ಟ್ರನಿರ್ಮಾಣದಲ್ಲಿ ಇತಿಹಾಸಕಾರರು, ಪುರಾತತ್ವಶಾಸ್ತ್ರಜ್ಞರು ಮತ್ತು ಕವಿಗಳು ಬಹು ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆಧುನಿಕ ಜಗತ್ತಿನ ಇತಿಹಾಸದಲ್ಲಿ ಕಳೆದ 70-ವರ್ಷಗಳಲಮಾ ಇವರ ಕೊಡುಗೆ ಹೆಚ್ಚಾಗಿದೆ. ಯಾಕೆ ಇವರು ಪಾಲು ಬಹು ದೊಡ್ಡದಿದೆ ಎಂದರೆ, ಯಾವ ರೀತಿಯ ರಾಷ್ಟ್ರ ನಮ್ಮದಾಗಬೇಕು ಎನ್ನುವ ಆಶಯವನ್ನು ಕವಿಗಳು ಕಟ್ಟುತ್ತಾ ಹೋದರೆ, ನಮ್ಮ ನೆನಪುಗಳು ಯಾವುದು ಎಂಬುವುದನ್ನು ಇತಿಹಾಸಕಾರರು, ಪುರಾತತ್ವಶಾಸ್ತ್ರಜ್ಞರು ನೆನಪು ಮಾಡಿಕೊಳ್ಳುತ್ತಾ ಹೋಗಿದ್ದಾರೆ. ರಾಷ್ಟ್ರ ಅನ್ನುವುದು ನೆನಪುಗಳ ನಿರ್ಮಾಣವಾಗಿರುವುದರಿಂದ ಯಾವ ರೀತಿಯ ನೆನಪುಗಳನ್ನು ಕೊಟ್ಟಿದ್ದಾರೆ ಎನ್ನುವುದು ಬಹು ಮುಖ್ಯವಾಗುತ್ತದೆ," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತ್ಯ ಅಕಾದೆಮಿಯ ಕನ್ನಡ ಸಲಹಾ ಮಂಡಳಿಯ ಸಂಪಾದಕ ಬಸವರಾಜ ಕಲ್ಗುಡಿ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಕವನ ವಾಚನವನ್ನು ಟಿ. ಯಲ್ಲಪ್ಪ(ಕನ್ನಡ), ಚೈತ್ರಾ ಶಿವಯೋಗಿಮಠ(ಕನ್ನಡ), ಸಿನಾ ಕೆ.ಎಸ್(ಮಲೆಯಾಳಂ ಮತ್ತು ಇಂಗ್ಲಿಷ್), ಕೆ. ನಲ್ಲತಂಬಿ(ತಮಿಳು), ಸಿ. ಭವಾನಿ ದೇವಿ(ತೆಲುಗುಓ, ಎಂ. ಅಜಂ ಶಾಹಿದ್(ಉರ್ದು) ಅವರು ಮಾಡಿದರು.
ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...
ಬೆಂಗಳೂರು: ನಮ್ಮನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...
ಬೆಂಗಳೂರು: ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ...
©2024 Book Brahma Private Limited.