ಬೆಂಗಳೂರು: ರಾಜ್ಯ ಸರ್ಕಾರವು ಕನ್ನಡ ಸಂಸ್ಕೃತಿ ಇಲಾಖೆಗೆ ಸಾವಿರ ಕೋಟಿ ರೂ. ಅನುದಾನ ನೀಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ನಾಡೋಜ ಡಾ. ಮನುಬಳಿಗಾರ್ ಅವರು ಅವರು ಸರ್ಕಾರವನ್ನು ಒತ್ತಾಯಿಸಿದರು.
ಅವರು ನಗರದ ಕೆಎಲ್ಇ ಪದವಿ ಕಾಲೇಜಿನಲ್ಲಿ ನಡೆದ ರಂಗ ಸಮಾಜ ಸಾಂಸ್ಕೃತಿಕ ಸಂಸ್ಥೆ ನಡೆಸಿಕೊಟ್ಟ ಕವಿ ಮುರಲಿಕೃಷ್ಣ ಬೆಳಾಲು ಅವರ ‘ಭಾವ ಬೆಸುಗೆ’ ಕವನಗಳ ಬಂದ ಕೃತಿ ಬಿಡುಗಡೆ, ‘ಆಸೆಮುಗಿಲು ದೃಶ್ಯಗೀತೆ’ಗಳ ಲೋಕಾರ್ಪಣೆ ಹಾಗೂ ರಾವನ ಮಾತೃಭಕ್ತಿ ಮತ್ತು ವೀರಯೋಧ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.
"ಸಾಹಿತ್ಯ ಸಂಸ್ಕೃತಿ ಇಲಾಖೆ ಯಾವಾಗಲೂ ಕಲಾ ಪೋಷಕವಾಗಿದ್ದು, ಈಗ ಆ ಸಂಸ್ಥೆಗೆ ಅನುದಾನದ ಕೊರತೆಯಿದೆ. ಆಗಾಗಿ ಸರ್ಕಾರವು ಈ ವರ್ಷ ಕನ್ನಡ ಸಂಸ್ಕೃತಿ ಇಲಾಖೆಗೆ ಒಂದು ಸಾವಿರ ಕೋಟಿ ರೂ. ಕೊಡಬೇಕೆಂದು ಒತ್ತಾಯಿಸಿದರು.
ಇಂದು ವಿಷಮ ಮನಸ್ಸುಗಳನ್ನು, ಮುರಿದ ಮನಸ್ಸುಗಳನ್ನು ಪರಿಶುದ್ದ ಮಾಡುವ, ಕೂಡಿಸುವ ಕಾರ್ಯವನ್ನು ಸಾಹಿತ್ಯ, ಕಲೆ, ಸಂಸ್ಕೃತಿ, ರಂಗಭೂಮಿ ಮಾಡುತ್ತಿದೆ. ಆದ್ದರಿಂದ ಈಗ ಕನ್ನಡ ಸಂಸ್ಕೃತಿ ಇಲಾಖೆ ಮಹತ್ವದ್ದಾಗಿದೆ," ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕವಿ ಮುರಲಿಕೃಷ್ಣ ಬೆಳಾಲು ಅವರ ‘ಭಾವ ಬೆಸುಗೆ’ ಕೃತಿಯ ಪರಿಚಯವನ್ನು ಕರ್ನಾಟಕ ಕಲಾಶ್ರೀ ಡಾ. ಜಯಶ್ರೀ ಅರವಿಂದ್ ಮಾಡಿದರು. ವಿದುಷಿ ಚಂದ್ರಿಕಾ ರಾಜಾರಾಮ್ ರಾಗ ಸಂಯೋಜಿಸಿ ಹಾಡಿರುವ ಆಸೆಮುಗಿಲು ದೃಶ್ಯಗೀತೆಗಳು ಸಾಲ್ಬ್ ಸಾಂಗ್ಸ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕೆಎಲ್ಇ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಮದನ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ನೃತ್ಯ ನಿರ್ದೇಶಕಿ ಎ.ಎಸ್. ಆರತಿ ಸುರೇಶ್ ನಿರ್ದೇಶನದ ಗೋಕುಲ ಯಾನ ನೃತ್ಯ ರೂಪಕ ಹಾಗೂ ವೀರಯೋಧ ನಾಟಕ ಹಾಗೂ ರಂಗ ಸಮಾಜ ಸಾಂಸ್ಕೃತಿಕ ಸಂಸ್ಥೆಯ ಎಸ್. ತಿಲಕ್ ರಾಜ್ ನಿರ್ದೇಶನ, ಪರಿಕಲ್ಪನೆಯ ರಾವಣನ ಮಾತೃಭಕ್ತಿ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು ಅಲ್ಲದೆ ಕವಿ ಮುರಲಿಕೃಷ್ಷ ಬೆಳಾಲು ರಚನೆಯ ಗೀತೆಗಳು ಮತ್ತು ವರನಟ ಡಾ.ರಾಜ್ ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ಅವರ ಗೀತಗಾಯನ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಅಲ್ಲದೆ ಹಲವು ಸಾಧಕರನ್ಮು ಈ ಸಂದರ್ಭದಲ್ಲಿ ಗೌರವಿಸಲಾಯಿತು.
“ನಮಸ್ಕಾರ, ನಾನು ಚೆನ್ನಗಿರಿ ಕೇಶವ ಮೂರ್ತಿ, ಕ್ರಿಕೆಟ್ ಅಂಕಿಅಂಶ ಬರೆಯುತ್ತೇನೆ,” ಎಂದರು. ವಿನಿಯವ...
"ಈ ಹೊತ್ತಗೆಯಲ್ಲಿ ಹಿಂದೂ ಧರ್ಮ, ಹಿಂದುತ್ವ, ಸನಾತನ ಧರ್ಮ ಇವೆಲ್ಲವೂ ಒಂದೇ ಆಗಿದೆ ಎಂದು ತರ್ಕಶುದ್ಧವಾಗಿ ಸಮನ್ವಯಗ...
"'ಹವೇಲಿ ದೊರೆಸಾನಿ 'ಕಥಾ ಸಂಕಲನದ ಮೊದಲ ಕಥೆ,'ಅನ್ಪಡ ಕಂಟೆವ್ವ ', ಊರಿಗೆ ಶಾಲೆ ಬರಬೇಕೆಂದು ಊರ...
©2025 Book Brahma Private Limited.