Date: 23-12-2024
Location: ಬೆಂಗಳೂರು
ಬೆಂಗಳೂರು: ಸಾಹಿತ್ಯ ಮತ್ತು ಸಿನಿಮಾ ಒಂದು ಉತ್ತಮವಾದ ಕಾಂಬಿನೇಷನ್. ಕನ್ನಡ ಚಿತ್ರ ರಂಗದ ಇತಿಹಾಸ ತಗೆದು ನೋಡಿದರೆ ಗೊತ್ತಾಗುತ್ತೆ ಪುಸ್ತಕವನ್ನು ಆಧರಿಸಿ ಮಾಡಿದ ಸಿನಿಮಾಗಳು ಹೆಚ್ಚು ಕಲೆಕ್ಷನ್ ಮಾಡಿದೆ. ನಾಗರಹಾವು, ಬಂಗಾರದ ಮನುಷ್ಯು, ಬಂಧನ ಉದಾಹರಣೆ. ಕಂಟೆಂಟ್ ಚೆನ್ನಾಗಿದ್ರೆ ಸಿನಿಮಾ ಚೆನ್ನಾಗಿ ಬರುತ್ತೆ. ಆದರೆ, ಈಗ ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಹೋದರೆ ನಟರು ಕಥೆ ಕೇಳುವುದಿಲ್ಲ. ನಮ್ಮವರಿಗೆ ಪ್ಯಾನ್ ಇಂಡಿಯಾದ ಭೂತ ಹಿಡಿದಿದೆ ಎಂದು ರಾಜೇಂದ್ರ ಸಿಂಗ್ ಬಾಬು ಚಂದನವನದ ಸ್ಥಿತಿಯ ಬಗ್ಗೆ ವಿಷಾದದ ಮಾತುಗಳನ್ನಾಡಿದರು.
ನಾಡೋಜ ಡಾ. ಬರಗೂರು ಪ್ರತಿಷ್ಠಾನ (ರಿ.) ಬೆಂಗಳೂರು ಅವರ ಆಶ್ರಯದಲ್ಲಿ ಪ್ರತಿವರ್ಷ ಸಿನಿಮಾ ಮತ್ತು ಸಾಹಿತ್ಯ ಕ್ಷೇತ್ರದ ತಲಾ ಒಬ್ಬರಿಗೆ "ನಾಡೋಜ ಬರಗೂರು ಪ್ರಶಸ್ತಿ" ನೀಡಲಾಗುತ್ತಿದ್ದು, ಇಂದು (23-12-2024) 2023 ಮತ್ತು 2024ನೇ ಸಾಲಿನ ಪ್ರಶಸ್ತಿಗಳನ್ನು ಒಟ್ಟಿಗೆ ಕೊಡಲಾಯಿತು. ಈ ಸಂದರ್ಭದಲ್ಲಿ 2023ರ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಶಸ್ತಿ ಸ್ವೀಕರಿಸಿದ ರಾಜೇಂದ್ರಸಿಂಗ್ ಬಾಬು ಚಿತ್ರರಂಗ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿದರು.
2023ನೇ ಸಾಲಿನ ಸಾಹಿತ್ಯ ಕ್ಷೇತ್ರದ ಪ್ರಶಸ್ತಿಯನ್ನು ಬಸವರಾಜ ಕಲ್ಗುಡಿ ಅವರಿಗೆ ಕೊಟ್ಟರೆ, 2024ರ ಸಿನಿಮಾ ಕ್ಷೇತ್ರದ ಪ್ರಶಸ್ತಿ ಸುಧಾರಾಣಿ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಕರೀಗೌಡ ಬೀಚನಹಳ್ಳಿ ಅವರಿಗೆ ಕೊಟ್ಟು ಗೌರವಿಸಲಾಯಿತು. ಈ ನಾಲ್ವರಿಗೆ ಹಿರಿಯ ಸಾಹಿತಿ ನಾಡೋಜ ಹಂಪ ನಾಗರಾಜಯ್ಯ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಬರುಗೂರು ರಾಮಚಂದ್ರಪ್ಪ ಉಪಸ್ಥಿತರಿದ್ದರು. ಸುಂದರ ರಾಜ ಅರಸು ಅವರು ಸ್ವಾಗತ ಭಾಷಣ ಮತ್ತು ನಿರೂಪಣೆಯನ್ನು ನಿರ್ವಹಿಸಿದರು.
ಕಳೆದ ವರ್ಷ ‘ಕರಟಕ ದಮನಕ’ ಚಿತ್ರದಲ್ಲಿ ಕಾಣಿಸಿಕೊಂಡು ಮರೆಯಾಗಿದ್ದ ಬಹುಭಾಷಾ ನಟಿ ಪ್ರಿಯಾ ಆನಂದ್, ಇ...
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ಶಿವರಾಜಕುಮಾರ್, ಇದೀಗ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಹೊಸ ವರ್ಷದ ಮೊದಲ ದಿನ ...
ಬೆಂಗಳೂರು: ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕ...
©2025 Book Brahma Private Limited.