ಭಾರತದಂತಹ ದೇಶವನ್ನು ಅಳೆಯುವುದು ಸಾಮಾನ್ಯ ಸಂಗತಿಯಲ್ಲ


“ಬ್ರಿಟಿಷರ ಶೋಷಣೆ, ಸರ್ವಾಧಿಕಾರಿ ಧೋರಣೆ ಜೊತೆಗೆ ಅವರ ಸಹಕಾರ, ಸಹಬಾಳ್ವೆ ಗುಣಗಳನ್ನು.. ಭಾರತೀಯ ಧಾರ್ಮಿಕತೆ ಅದರ ವಿರೋಧಾಬಾಸಗಳು, ಭಾರತೀಯ ಆಧ್ಯಾತ್ಮಿಕ ಚಿಂತನೆ ಹೀಗೆ ಹಲವು ವಿಷಯಗಳನ್ನು ಪೋಣಿಸಿರುವ ರೀತಿ ಅನನ್ಯವಾದದು,” ಎನ್ನುತ್ತಾರೆ ಸಂಜಯ್‌ ಮಂಜುನಾಥ್‌. ಅವರು ಗಜಾನನ ಶರ್ಮ ಅವರ "ಪ್ರಮೇಯ" ಕೃತಿ ಕುರಿತು ಬರೆದ ವಿಮರ್ಶೆ.

ತಲುಪುವ ಸ್ಥಳಕ್ಕೆ ಎಷ್ಟು ದೂರ ಆಗುತ್ತೆ ಅನ್ನೋದನ್ನ ಗೂಗಲ್ ಮ್ಯಾಪ್ ಹಾಕಿ ನೋಡುವ ನಾವು, ಅದೇ ಮ್ಯಾಪ್ ಅದರಲ್ಲೂ ಭಾರತದಂತಹ ಭೌಗೋಳಿಕ ವೈವಿಧ್ಯತೆಯಿಂದ ಕೂಡಿರುವ ದೇಶದ ಮ್ಯಾಪ್ ನ್ನ ಅಳೆದುಕೊಟ್ಟವರ ಸಾಹಸ ಕಾರ್ಯವನ್ನು ಊಹಿಸಲು ಅಸಾಧ್ಯ ನಮಗೆ. ಅಂತಹ ಸಾಹಸ ಕಾರ್ಯವನ್ನು ನಮ್ಮ ಕಣ್ಮುಂದೆ ನಿಲ್ಲಿಸಿರುವ ಕೃತಿ ಪ್ರಮೇಯ.

ಭಾರತದಂತಹ ದೇಶವನ್ನು ಅಳೆಯುವುದು ಸಾಮಾನ್ಯ ಸಂಗತಿಯಲ್ಲ. ಬಯಲು ಪ್ರದೇಶಗಳು, ಘಟ್ಟ ಪ್ರದೇಶಗಳು, ದಟ್ಟ ಅಡವಿ, ನದಿ ತೀರ ಪ್ರದೇಶಗಳು, ಬೆಟ್ಟಗುಡ್ಡಗಳು, ಯಾವುದೇ ಋತಮಾನದಲ್ಲೂ ಮಳೆ ಬೀಳುವಂತಹ ಪ್ರದೇಶಗಳು, ಹೂಡಿರುವ ಶಿಬಿರಗಳನ್ನು ಎತ್ತೊಯ್ಯವ ಮಾರುತಗಳು, ಮೈ ಕೊರೆಯುವ ಚಳಿ, ಮೈ ಆವರಿಸುವ ಮಲೇರಿಯ-ಕಾಲರದಂತಹ ರೋಗಗಳು, ಇನ್ನೂ ಆಗಾಗ ತೊಂದರೆ ಕೊಡುವ ನರಭಕ್ಷಕ ಪ್ರಾಣಿಗಳು, ವಿಷ ಜಂತುಗಳು ಇವುಗಳನ್ನೆಲ್ಲ ಎದುರಿಸಿ ಸುಮಾರು 60 70 ವರ್ಷಗಳ ಕಾಲ ನಡೆಸಿದ ಮಹಾ ಸರ್ವೆಕಾರ್ಯವಾದ ಟ್ರಿಗ್ನಾಮೆಟ್ರಿಕ್ ಸರ್ವೆಯನ್ನು ಓದಿಯೇ ಅನುಭವಿಸಬೇಕು.

ವಿಲಿಯಂ ಲ್ಯಾಂಬ್ಟನ್ ನಿಂದ ಆರಂಭವಾದ ಸರ್ವೆಕಾರ್ಯ.. ಮಹಾ ಮುಂಗೋಪಿಯಾದ ಜಾರ್ಜ್ ಎವರೆಸ್ಟ್ ನೊಂದಿಗೆ ಸಾಗಿ, ಸಜ್ಜನಿಕೆಯ ವ್ಯಕ್ತಿಯಾದ ಮಾಂಟ್ಗೋಮರಿರವರೊಂದಿಗೆ ಜೊತೆಯಾಗಿ, ಅವರಿಗೆ ಸಿಕ್ಕ ಪಂಡಿತ ನಂಬರ್ ಒನ್ ಎನಿಸಿದ, ಭಾರತದ ಬಂಗಾರದ ಗಡಿಯಾರ ನೈನ್ ಸಿಂಗ್ ನು ಅಸಾಧ್ಯ ತಾಳ್ಮೆ, ಸಾಹಸಗಳಿಂದ ಸಾವಿರಾರು ಮೈಲಿಗಳನ್ನು ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟಿ ಪೂರ್ಣಗೊಳಿಸುವುದರೊಂದಿಗೆ.. ಮುಕ್ತಾಯವಾಗುತ್ತದೆ.

ಎವರೆಸ್ಟ್ ಶಿಖರವನ್ನ ಅಳೆದ ರಾಧಾನಾಥ ಸಿಕ್ದರ cameo ಎವರೆಸ್ಟ್ ಶಿಖರದಷ್ಟೇ ದೊಡ್ಡದು.

ಬ್ರಿಟಿಷರ ಶೋಷಣೆ, ಸರ್ವಾಧಿಕಾರಿ ಧೋರಣೆ ಜೊತೆಗೆ ಅವರ ಸಹಕಾರ, ಸಹಬಾಳ್ವೆ ಗುಣಗಳನ್ನು.. ಭಾರತೀಯ ಧಾರ್ಮಿಕತೆ ಅದರ ವಿರೋಧಾಬಾಸಗಳು, ಭಾರತೀಯ ಆಧ್ಯಾತ್ಮಿಕ ಚಿಂತನೆ ಹೀಗೆ ಹಲವು ವಿಷಯಗಳನ್ನು ಪೋಣಿಸಿರುವ ರೀತಿ ಅನನ್ಯವಾದದು.

ಇತಿಹಾಸವನ್ನು ಹೇಳುತ್ತಾ ಅದಕ್ಕೆ ಹದವಾಗಿ ಕಲ್ಪನೆಯನ್ನು, ಭಾರತೀಯತೆಯನ್ನು ಮಿಶ್ರಣ ಮಾಡಿ ಅತ್ಯುತ್ತಮ ಪಾಕವನ್ನ ಉಣ ಬಡಿಸಿರುವ ಲೇಖಕರಾದ ಗಜಾನನ ಶರ್ಮರವರಿಗೆ ವಂದನೆಗಳು.

ಅತ್ಯುತ್ತಮ ಕೃತಿ.

MORE FEATURES

ಒಂದು ಕಾಲದ ಯುಗಧರ್ಮವು ಎಲ್ಲ ಕಾಲಕ್ಕೂ ಸಲ್ಲಬೇಕೆಂದೇನೂ ಇಲ್ಲ

01-05-2025 ಬೆಂಗಳೂರು

“ಒಟ್ಟು ಕಾದಂಬರಿಯಲ್ಲಿ ಕಾಲಾವಧಿಯನ್ನು (ಟೈಮ್ ಲ್ಯಾಪ್ಸ್) ನಿರ್ವಹಿಸುವಲ್ಲಿ ಲೇಖಕರು ಇನ್ನಷ್ಟು ಜಾಣೆ ತೋರಬೇಕಿತ್...

ಆಧುನಿಕ ಮೈಸೂರು ರಾಜ್ಯದ ರೂವಾರಿ ಹೈದರಾಲಿ

01-05-2025 ಬೆಂಗಳೂರು

“ಬೃಹತ್ ಆಕರ ಗ್ರಂಥಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿ ಇರುವ ಸಾರವನ್ನು ಹೀರಿ ತಮ್ಮದೇ ದಾಟಿಯಲ್ಲಿ ಓದುಗರಿಗೆ ಉಣಬಡ...

ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದು ಸಮೃದ್ಧ ಆಕರ ಗ್ರಂಥ

30-04-2025 ಬೆಂಗಳೂರು

"ಪ್ರತಿಯೊಂದು ಲೇಖನವು ಕೃತಿಯ ಸಂಕ್ಷಿಪ್ತ ವಿವರಣೆಯನ್ನು ಕೊಟ್ಟು ಕಾದಂಬರಿಯ ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅದರ ...