ನೂರು ಕೃತಿಯಿಂದ ಲಕ್ಷ ಸ್ನೇಹಿತರನ್ನು ಗಳಿಸಿದೆ: ಜೋಗಿ

Date: 17-11-2024

Location: ಬೆಂಗಳೂರು


ಬೆಂಗಳೂರು: "ಜೋಗಿ ಬಲ, ಪ್ರಕಾಶ್ ರಾಜ್ ಎಡ ಅದು ಹೇಗೆ ಅವರಿಬ್ಬರು ಸ್ನೇಹಿತರು ಎಂಬ ಮಾತು ಇತ್ತೀಚೆಗೆ ಕೇಳಿದೆ. ಆದರೆ ಆ ಮಾತು ಆಡಿದ ವ್ಯಕ್ತಿ ನನ್ನ ಮತ್ತು ಜೋಗಿಯ ಪ್ರಪಂಚ ಕಂಡಿಲ್ಲ. ಅವರ ಮನೆ, ಮಗಳು, ಮಡದಿ ಇರುವ ಆ ಪ್ರಪಂಚ ನೋಡಿಲ್ಲ. ನಾನು ಆ ರೀತಿಯ ಸ್ನೇಹವನ್ನು ಹೊಂದಿರುವವನು," ಎಂದು ಪ್ರಕಾಶ್ ರಾಜ್ ಹೇಳಿದರು.

ನಗರದ ಬಿ ಪಿ ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ವೇದಿಕೆಯಲ್ಲಿ ಭಾನುವಾರ (ನ. 17) ಜೋಗಿ ಅವರ ನೂರನೇ ಕೃತಿ ಇಳಂಗೋವನ್ ಮತ್ತು ಸಾವಣ್ಣ ಪ್ರಕಾಶನದ ಹದಿನೈದನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶತಕ ಕೃತಿ ಲೇಖಕ ಜೋಗಿ ಮಾತನಾಡಿ, "ನೂರು ಅಂತ ನಾನು ಹೇಳಲಾರೆ. ಮೊದ ಮೊದಲು ನನಗೆ ಕೃತಿ ಪ್ರಕಟಿಸುವ ಆಸಕ್ತಿ ಇರಲಿಲ್ಲ. ರಾಜ‌ಚಂಡೂರು ಅವರು ನನ್ನ ಮೊದಲ ಕೃತಿ ಪ್ರಕಟಿಸಿದರು. ಆ ಮೊದಲ ಮೂರು ಕೃತಿಗಳು ಈಗ ಲಭ್ಯವಿಲ್ಲ. ನೂರು ಕೃತಿಗಳಿಂದ ಲಕ್ಷ ಸ್ನೇಹಿತರನ್ನು ಗಳಿಸಿದೆ," ಎಂದು ಹೇಳಿದರು.

ಟಿ ಎನ್ ಸೀತಾರಾಮ್ ಜೋಗಿ ಅವರ ಸೂಟ್ ಕವಿತೆಯನ್ನು ವಾಚಿಸಿದರು. ಬಿಆರೆಲ್ ಅವರು ಜೋಗಿ ಅವರ ಎರಡು ಕವಿತೆಗಳನ್ನು ವಾಚಿಸಿದರು.

"ಜೋಗಿ ಅವರ ಬರವಣಿಗೆಯೇ ಆಕರ್ಷಣೆ. ಪತ್ತೇದಾರಿ ಅಲ್ಲದಿದ್ದರೂ ಅವರ ಕಥನಗಳು ಓದಿಸುತ್ತದೆ. ಅವರು ಕೊಪ ಮಾಡಿಕೊಳ್ಳೋದು ಕಡಿಮೆ. ಆದರೆ ಕೊನೆಯ ದಿನದ ವರೆಗೆ ಹಸ್ತಪ್ರತಿ ಕೊಡದೇ ನಮಗೆ ಕೊಪ ಬರಿಸುತ್ತಾರೆ," ಎಂದು ಪ್ರಕಾಶ್ ಕಂಬತ್ತಳ್ಳಿ ಜೋಗಿ ಜೊತೆಗಿನ ಒಡನಾಟ," ನೆನೆದರು.

"ಜೋಗಿ ಅವರನ್ನು ಒತ್ತಾಯಿಸಿ ನಾನೆ ನೂರನೇ ಪುಸ್ತಕ ಬರೆಸಿದೆ. ಜೋಗಿ ಅವರು ನನ್ನ ಪಬ್ಲಿಕೇಶನ್ ಆರಂಭದ ದಿನದಿಂದ ಸಹಕಾರ ನೀಡುತ್ತಾ ಬಂದಿದ್ದಾರೆ," ಎಂದು ಜಮೀಲ್ ಸಾವಣ್ಣ ಹೇಳಿದರು.

MORE NEWS

ಪಿ. ಶೇಷಾದ್ರಿ ಸಿನಿಮಾವಲೋಕನಕ್ಕೆ 'ಮುನ್ನುಡಿ'

21-11-2024 ಬೆಂಗಳೂರು

ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...

ವಿಜಯ ರಾಘವೇಂದ್ರ ನಟನೆಯ 'ರುದ್ರಾಭಿಷೇಕಂ' ಚಿತ್ರಕ್ಕೆ ಚಾಲನೆ

21-11-2024 ಬೆಂಗಳೂರು

ಬೆಂಗಳೂರು: ನಮ್ಮ‌ನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...

87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೊ. ರು. ಚನ್ನಬಸಪ್ಪ ಆಯ್ಕೆ

20-11-2024 ಬೆಂಗಳೂರು

ಬೆಂಗಳೂರು: ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ...