ಕವಿ ಗವಿಸಿದ್ಧ ಎನ್. ಬಳ್ಳಾರಿ - ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿಗಳ ಆಹ್ವಾನ

Date: 17-03-2022

Location: ಬೆಂಗಳೂರು


ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಕೊಪ್ಪಳ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ -ಕಲಾ -ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಕೊಪ್ಪಳ ಇವುಗಳ ಸಂಯುಕ್ತಾಶ್ರಯದಲ್ಲಿ 2022ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ - ಕಾವ್ಯ ಪ್ರಶಸ್ತಿಗೆ ಹಸ್ತಪ್ರತಿಗಳನ್ನು ಆಹ್ವಾನಿಸಿದೆ.  

ಕವಿ ಗವಿಸಿದ್ಧ ಎನ್. ಬಳ್ಳಾರಿ ಸ್ಮರಣೆ ದಿನ ಮಾರ್ಚ್ 14ರಂದು ಹಸ್ತಪ್ರತಿ ಆಹ್ವಾನ ಘೋಷಣೆ ಮತ್ತು ಕವಿ ಗವಿಸಿದ್ಧ ಎನ್. ಬಳ್ಳಾರಿ ಜನ್ಮ ದಿನ ಜೂನ್ 17ರಂದು ವಿಜೇತರ ಘೋಷಣೆ ಮಾಡಲಾಗುತ್ತದೆ ಮತ್ತು ಕೊಪ್ಪಳದಲ್ಲಿ ನಡೆಯುವ ಕವಿ ಗವಿಸಿದ್ಧ ಎನ್. ಬಳ್ಳಾರಿ - ಸಾಹಿತ್ಯೋತ್ಸವ -2022ರಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. 

ಪ್ರಶಸ್ತಿಯು ರೂ.6000 ನಗದು ಬಹುಮಾನ ಮತ್ತು ಫಲಕ ಒಳಗೊಂಡಿದೆ. ಹಸ್ತಪ್ರತಿಗಳು ತಲುಪಲು ಕೊನೆಯ ದಿನಾಂಕ 25-04-2022.

ನಿಯಮಗಳು: ಹಸ್ತಪ್ರತಿಯಲ್ಲಿ ಕನಿಷ್ಟ 35 ಕವಿತೆಗಳಿರಬೇಕು. ಅನುವಾದಿತ ಕವನಗಳ ಹಸ್ತಪ್ರತಿಗಳನ್ನು ಸ್ವೀಕರಿಸುವುದಿಲ್ಲ. ಸ್ಪರ್ಧೆಗೆ ವಯಸ್ಸಿನ ಮಿತಿಯಿಲ್ಲ. ಹಸ್ತಪ್ರತಿಯನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವುದಿಲ್ಲ. ತೀರ್ಪುಗಾರರ ತೀರ್ಮಾನವೇ ಅಂತಿಮ. ಈ ಕಾವ್ಯ ಪ್ರಶಸ್ತಿಯ ವಿಝೇತರು ಮುಂದಿನ ಮೂರು ವರ್ಷಗಳ ಕಾಲ ಸ್ಪರ್ಧಿಸುವಂತಿಲ್ಲ. ಆಸಕ್ತ ಕವಿಗಳು ತಮ್ಮ ಕಾವ್ಯದ ಹಸ್ತಪ್ರತಿಯನ್ನು ನಿಗದಿತ ದಿನಾಂಕದೊಳಗೆ ಕಳುಹಿಸಬಹುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಹಸ್ತಪ್ರತಿ ಕಳುಹಿಸಬೇಕಾದ ವಿಳಾಸ: ಮಹೇಶ ಬಳ್ಳಾರಿ, ಜವಾಹರ ರಸ್ತೆ, ಕೊಪ್ಪಳ- 583 231

ಮಾಹಿತಿಗಾಗಿ ಸಂಪರ್ಕಿಸಿ: ಮಹೇಶ ಬಳ್ಳಾರಿ 9008996624/ ರಮೇಶ ಸಿ. ಬನ್ನಿಕೊಪ್ಪ 9902746235

 

MORE NEWS

2025ನೇ ಸಾಲಿನ ಬುಕ್‌ ಬ್ರಹ್ಮ ಕಥಾ ಸ್ಪರ್ಧೆ - ಕಾದಂಬರಿ ಪುರಸ್ಕಾರಕ್ಕೆ ಆಹ್ವಾನ

30-03-2025 ಬೆಂಗಳೂರು

ʻಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2025 ಮತ್ತು ಕಾದಂಬರಿ ಪುರಸ್ಕಾರ 2025ʼ ರೂ. 2 ಲಕ್ಷ 69 ಸ...

ಮಾಲತಿ ಪಟ್ಟಣಶೆಟ್ಟಿ, ಎಸ್.ಜಿ.ಸಿದ್ದರಾಮಯ್ಯ ಅವರಿಗೆ `ಗುರುಲಿಂಗ ಕಾಪಸೆ ಸಾಹಿತ್ಯ ಪ್ರಶಸ್ತಿ'

27-03-2025 ಬೆಂಗಳೂರು

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಗುರುಲಿಂಗ ಕಾಪಸೆ ದತ್ತಿಯಡಿ ನೀಡಲಾಗುವ ಗುರುಲಿಂಗ ಕಾಪಸೆ ಸಾಹಿತ್ಯ ಪ್ರ...

ಭಾನುಪ್ರಕಾಶ್ ಶರ್ಮ ಮತ್ತು ಶ್ರೀಧರ ದೀಕ್ಷಿತ್ ಗೆ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿ ಪ್ರದಾನ 

25-03-2025 ಬೆಂಗಳೂರು

ಮೈಸೂರಿನ ಶ್ರೀ ವಾಸುದೇವ ಮಹಾರಾಜ್ ಫೌಂಡೇಶನ್ ವತಿಯಿಂದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಶ್ರೀ ವಾಸುದೇವ ಮಹಾರಾಜ 88...