Date: 28-03-2023
Location: ಬೆಂಗಳೂರು
ಅವ್ವ ಪುಸ್ತಕಾಲಯ ಹಾಗೂ ಸಾಹಿತ್ಯ ಮೈತ್ರಿ ಅಂತರ್ಜಾಲ ಪತ್ರಿಕೆ ಬಳಗಗಳ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ನ್ಯಾನೋ ಕಥಾ ಸ್ಪರ್ಧೆ : 250 ಪದಮಿತಿಯ ಕತೆ ರಚಿಸಬೇಕು. ಕತೆ ಈ ಮುಂಚೆ ಎಲ್ಲಿಯೂ ಪ್ರಕಟವಾಗಿರಬಾರದು.
ಸ್ವರಚಿತ ಕವನ ಸ್ಪರ್ಧೆ : 25 ಸಾಲುಗಳ ಮಿತಿಯ ಕವಿತೆ ರಚಿಸಬೇಕು. ಕವಿತೆ ಈ ಮುಂಚೆ ಎಲ್ಲಿಯೂ ಪ್ರಕಟವಾಗಿರಬಾರದು.
ಮಂಕುತಿಮ್ಮನ ಕಗ್ಗ ವಾಚನ ಸ್ಪರ್ಧೆ : ನಿಮಗಿಷ್ಟವಾದ ಯಾವುದಾದರೊಂದು ಕಗ್ಗವನ್ನು ಆಯ್ಕೆ ಮಾಡಿಕೊಂಡು, ಅದನ್ನು ವಾಚಿಸಿದ (ಕೇವಲ ವಾಚನ ಮಾತ್ರ, ನಿರೂಪಣೆ ಇಲ್ಲ) ವೀಡಿಯೋವನ್ನು ನಮಗೆ ಕಳಿಸಿಕೊಡಬೇಕು.
ಮೂರು ಸ್ಪರ್ಧೆಗಳಿಗೂ ಯಾವುದೇ ವಯಸ್ಸಿನ ಮತ್ತು ವಿಷಯದ ಮಿತಿ ಇಲ್ಲ. ಏಪ್ರಿಲ್ 15 ರೊಳಗೆ ಈ ಕೆಳಗೆ ಸೂಚಿಸಿರುವ ಇ- ಮೇಲ್ ವಿಳಾಸಕ್ಕೆ ನುಡಿ ಅಥವಾ ಯೂನಿಕೋಡ್ ನಲ್ಲಿ ಟೈಪ್ ಮಾಡಿದ ಕತೆ ಮತ್ತು ಕವಿತೆಯನ್ನು ಪಿಡಿಎಫ್ ರೂಪದಲ್ಲಿ ಹಾಗೂ ಕಗ್ಗ ವಾಚನವನ್ನು ವೀಡಿಯೋ ರೂಪದಲ್ಲಿ ಕಳಿಸಬೇಕು. ಸ್ಪರ್ಧೆಗಳಿಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ 3000 ರೂಪಾಯಿ ಮೌಲ್ಯದ ಪುಸ್ತಕ ಬಹುಮಾನ ನೀಡಲಾಗುವುದು ಹಾಗೂ ಇ- ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು.
ನಿಮ್ಮ ಕತೆ, ಕವಿತೆ ಹಾಗೂ ಕಗ್ಗ ವಾಚನದ ವೀಡಿಯೋಗಳನ್ನು ಕಳಿಸಬೇಕಾದ ಈಮೇಲ್ ವಿಳಾಸ : avvapustakaalaya@gmail.com
ಹೆಚ್ಚಿನ ಮಾಹಿತಿಗಾಗಿ ಸಾಹಿತ್ಯ ಮೈತ್ರಿ ಚಂದ್ರು ಅವರ ಮೊಬೈಲ್ ಸಂಖ್ಯೆ : 8310259489 ಸಂಪರ್ಕಿಸಬಹುದು.
ಬಳ್ಳಾರಿಯ ಸಂಗಂ ಟ್ರಸ್ಟ್ ವತಿಯಿಂದ 2025ನೇ ಸಾಲಿನ ಸಂಗಂ ಸಾಹಿತ್ಯ ಕಾದಂಬರಿ ಪುರಸ್ಕಾರ ಕೃತಿಗಳನ್ನು ಆಹ್ವಾನಿಸಿದ್ದು, ಪ...
"ಯೌವ್ವನದ ಆರಂಭದಲ್ಲಾದ ಪ್ರೇಮವೊಂದು ಬದುಕಿನ ಪೂರ್ತಿ ಅದೇ ಪ್ರೇಮಕ್ಕೆ ಹಂಬಲಿಸುವ ಕಥೆ ಮಾಂಡೋವಿ. ಪ್ರೀತಿ ಒಬ್ಬ ಮನ...
ಕುಂದಾಪುರ: ಮಣಿಪಾಲ ಅಕಾಡೆಮಿ ಆಡಳಿತಾಧಿಕಾರಿಯಾಗಿದ್ದ ಸ್ವಪ್ನಶಿಲ್ಪಿ ಡಾ. ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಕುಂದಾಪು...
©2025 Book Brahma Private Limited.