ಕರ್ನಾಟಕದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅವರು ಮುಟ್ಟದೇ ಇರುವಂತಹ ಕ್ಷೇತ್ರವೇ ಇಲ್ಲ; ಮಹೇಶ ಜೋಶಿ

Date: 15-09-2024

Location: ಬೆಂಗಳೂರು


ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರದರ್ಶನ ಫಲಕಗಳ ಅನಾವರಣ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಆಧಾರಸ್ತಂಭಗಳಲ್ಲಿ ಒಬ್ಬರಾದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಹಾಗೂ ದತ್ತಿ ಪ್ರದಾನ ಸಮಾರಂಭವು 2024 ಸೆ. 15 ಭಾನುವಾರದಂದು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ನಡೆಯಿತು.

‘ಗೌರಮ್ಮ ಗಂಗಾಧರಯ್ಯ ಮಕ್ಕಳ ಸಿಬ್ಭಂದಿ ಸೇವಾ ದತ್ತಿ’ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿಭಂಡಾರದಲ್ಲಿ 20 ವರ್ಷಗಳಿಂದ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿದ ಎಂ.ಎನ್. ಸತೀಶ್ ಕುಮಾರ್ ಅವರಿಗೆ ನೀಡಲಾಯಿತು.

ಶ್ರೀಮತಿ ರಮಾದೇವಿ ವಿಶ್ವೇಶ್ವರಯ್ಯ ದತ್ತಿ ಪ್ರಶಸ್ತಿಯನ್ನು 25 ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ಎಂ.ಶ್ರೀ ಅಚ್ಚುಕೂಟದಲ್ಲಿ ಬೈಂಡರ್ ಆಗಿ ಕಾರ್ಯನಿರ್ವಹಿಸಿದ ದಯಾನಂದ ಮೂರ್ತಿ ಅವರಿಗೆ ನೀಡಲಾಯಿತು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಮಾತನಾಡಿ, "ಕರ್ನಾಟಕದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅವರು ಮುಟ್ಟದೇ ಇರುವಂತಹ ಕ್ಷೇತ್ರವೇ ಇಲ್ಲ. ಕೈಗಾರೀಕರಣವಾಗಲು ಮೂಲ ಕಾರಣೀಕರ್ತರು ಸರ್ ಎಂ. ವಿಶ್ವೇಶ್ವರಯ್ಯ. ಇನ್ನು ದತ್ತಿ ಪ್ರಶಸ್ತಿಯನ್ನು ಇಡಬೇಕಾದರೆ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಬಹಳ ಗೌರವದಿಂದ ದತ್ತಿಯನ್ನು ತಮ್ಮ ಬಂಧು ಬಳಗದವರ ಅಕಾಲಿಕ ಅಗಲಿಕೆಯ ಉದ್ದೇಶದಿಂದ ಅವರ ಭಾವನಾತ್ಮಕ ನೆನಪಿಗಾಗಿ ಇಡಲಾಗುತ್ತದೆ. ದತ್ತಿ ಇಟ್ಟವರನ್ನು ಕೂಡ ಪ್ರತಿವರ್ಷ ಕಾರ್ಯಕ್ರಮಕ್ಕೆ ಗೌರವದಿಂದ ಆಹ್ವಾನಿಸುವುದು ನಮ್ಮ ಕರ್ತವ್ಯ. ಕಸಾಪ ಅಂತಹ ಕೆಲಸವನ್ನು ಕೂಡ ಮಾಡುತ್ತಿದೆ. ಇನ್ನು ಸರ್ ಎಂ. ವಿಶ್ವೇಶ್ವರಯ್ಯ ಅವರ ಕುರಿತು ಉಪನ್ಯಾಸವನ್ನು ನೀಡಲು ಅವರ ಬಗ್ಗೆ ಆಳವಾದ ಅಧ್ಯಯನ ಮಾಡಿದಂತಹ ವ್ಯಕ್ತಿಯೇ ಆಗಬೇಕು. ಅಂತಹ ಆಳವಾದ ಅಧ್ಯಯನವನ್ನು ಗಜಾನನ ಶರ್ಮಾ ಅವರು ಮಾಡಿರುತ್ತಾರೆ. ವಿಶ್ವೇಶ್ವರಯ್ಯ ಅವರ ಕುರಿತ ಹಲವಾರು ವಿಚಾರಗಳನ್ನು ಇಂದು ಅವರು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ," ಎಂದರು.

ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

MORE NEWS

Kerala Literature festival- 2025; ನಾಳೆ ಏಷ್ಯಾದ ಅತಿ ದೊಡ್ಡ ಸಾಹಿತ್ಯ ಉತ್ಸವಕ್ಕೆ ಚಾಲನೆ

22-01-2025 ಬೆಂಗಳೂರು

’ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: ಏಷ್ಯಾದ ಅತಿ ದೊಡ್ಡ ಸಾಹಿತ್ಯೋತ್ಸವ ಎಂದೇ ಹೆಸರುವಾಸಿಯಾಗಿ...

ನಳಿನಿ ಟಿ. ಭೀಮಪ್ಪ ಹಾಗೂ ಸುಮಾ ರಮೇಶ್ ಅವರ ಕೃತಿಗಳ ಲೋಕಾರ್ಪಣಾ ಸಮಾರಂಭ

20-01-2025 ಬೆಂಗಳೂರು

ಬೆಂಗಳೂರು: ನ್ಯೂವೇವ್ ಬುಕ್ಸ್ ವತಿಯಿಂದ ಹಾಸ್ಯ ಲೇಖಕಿ, ಕಥೆಗಾರ್ತಿ ನಳಿನಿ ಟಿ. ಭೀಮಪ್ಪ ಅವರ ‘ಚಿತ್ತ ಬಕ್ಕ&rsqu...

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಅನುವಾದಕ ಕೆ.ಕೆ.ಗಂಗಾಧರನ್ ನಿಧನ

19-01-2025 ಬೆಂಗಳೂರು

"ಸರಳ ಸಜ್ಜನ ವ್ಯಕ್ತಿತ್ವದ ಸ್ನೆಹಮಯಿ ಕೆಕೆಜಿಯವರ ಅನರಿಕ್ಷಿತ ನಿಧನ ಕನ್ನಡ ಮಾತ್ರವಲ್ಲದೆ ಮಲೆಯಾಳ ಸಾಂಸ್ಕೃತಿಕ ಲೊ...