ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪುಸ್ತಕ ಬಹುಮಾನ ವಿಜೇತರ ಪಟ್ಟಿ

Date: 07-11-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ 2021 ರಲ್ಲಿ ಪ್ರಕಟವಾದ ವಿವಿಧ 19 ಸಾಹಿತ್ಯ ಪ್ರಕಾರದ ಕೃತಿಗಳಿಗೆ ವಿಮರ್ಶಕ ಅಭಿಪ್ರಾಯಗಳನ್ನು ಆಧರಿಸಿ ವರ್ಷದ ಅತ್ಯುತ್ತಮ ಕೃತಿಗಳೆಂದು ಪರಿಗಣಿಸಿ ಬಹುಮಾನವನ್ನು ನೀಡಲಾಗುತ್ತಿದೆ.

ಪ್ರಶಸ್ತಿಯು ಇಪ್ಪತ್ತೈದು ಸಾವಿರ ರೂಪಾಯಿಗಳ ಬಹುಮಾನ, ಫಲಕ, ಶಾಲು, ಹಾರ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ ಎಂದು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎಲ್. ಮುಕುಂದರಾಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2021ನೇ ವರ್ಷದ ಪುಸ್ತಕ ಬಹುಮಾನ ವಿಜೇತರು: ಕಾವ್ಯ ಪ್ರಕಾರದಲ್ಲಿ ಚೀಮನಹಳ್ಳಿ ರಮೇಶಬಾಬು ಅವರ ‘ರಾಗಿ ಕಾಳು’, ನವಕವಿಗಳ ಪ್ರಥಮ ಸಂಕಲನ ವಿಭಾಗದಲ್ಲಿ ಡಾ. ಶೈಲೇಶ್ ಕುಮಾರ್ ಅವರ ‘ದಡ ಸೇರಿದ ಕನಸು’, ಕಾದಂಬರಿ ವಿಭಾಗದಲ್ಲಿ ಡಾ. ಗಜಾನನ ಶರ್ಮ ಅವರ ‘ಚೆನ್ನಭೈರಾದೇವಿ ಕರಿಮೆಣಸಿನ ರಾಣಿಯ ಅಕಳಂಕ ಚರಿತೆ’, ಸಣ್ಣಕತೆ ಪ್ರಕಾರದಲ್ಲಿ ಜಿ.ವಿ. ಆನಂದಮೂರ್ತಿ ಅವರ ‘ಗುಣಸಾಗರಿ ಮತ್ತು ಇತರ ಕತೆಗಳು’, ನಾಟಕ ಪ್ರಕಾರದಲ್ಲಿ ಬಿ.ಅರ್. ಪೊಲೀಸ್ ಪಾಟೀಲ ಅವರ ‘ಮಹಾ ಮಹಿಮ ಎಡೆಯೂರು ಸಿದ್ಧಲಿಂಗ ಶಿವಯೋಗಿ’, ಲಲಿತ ಪ್ರಬಂಧ ವಿಭಾಗದಲ್ಲಿ ಭಾರತಿ ಬಿ.ವಿ ಅವರ ‘ಎಲ್ಲಿಂದಲೋ ಬಂದವರು’, ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಡಾ.ಎಸ್.ಬಿ. ಪದ್ಮಪ್ರಸಾದ್ ಅವರ ‘ಬುದ್ಧಭಕ್ತರ ನಾಡಿನಲ್ಲಿ’, ಜೀವನ ಚರಿತ್ರೆ/ಆತ್ಮಕಥೆ ವಿಭಾಗದಲ್ಲಿ ಡಾ. ಡೊಮಿನಿಕ್ ಡಿ. ಅವರ ‘ಅಕ್ಕಯ್’, ಸಾಹಿತ್ಯ ವಿಮರ್ಶೆ ವಿಭಾಗದಲ್ಲಿ ಡಾ.ಎಚ್.ಎಸ್. ಸತ್ಯನಾರಾಯಣ ಅವರ ‘ಕಣ್ಣೋಟ’, ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಸಿ.ವಿ. ಶೇಷಾದ್ರಿ ಹೊಳವನಹಳ್ಳಿ ಅವರ ‘ವಜ್ರದ ಕಿರೀಟ’, ವಿಜ್ಞಾನ ಸಾಹಿತ್ಯ ಪ್ರಕಾರದಲ್ಲಿ ಡಾ. ಕಿರಣ್ ವಿ.ಎಸ್ ಅವರ ‘ಸೆರೆಂಡಿಪಿಟಿ ವೈದ್ಯಲೋಕದ ಅದ್ಭುತ ಆಕಸ್ಮಿಕಗಳು’, ಮಾನವಿಕ ಪ್ರಕಾರದಲ್ಲಿ ಡಾ.ಕೆ.ಎಸ್. ನಾಗರಾಜ ಅವರ ‘ಸಂಕೇತ ವ್ಯಾಕರಣ ಮತ್ತು ಪದಕೋಶ’, ಸಂಶೋಧನೆ ಪ್ರಕಾರದಲ್ಲಿ ಡಾ.ಎ.ಎಸ್. ಪ್ರಭಾಕರ ಅವರ ‘ಚಹರೆಗಳೆಂದರೆ ಗಾಯಗಳೂ ಹೌದು’, ಅನುವಾದ-1(ಭಾರತೀಯ ಭಾಷೆಯಿಂದ ಕನ್ನಡಕ್ಕೆ ಅನುವಾದ) ವಿಭಾಗದಲ್ಲಿ ದಾದಾಪೀರ್ ಜೈಮನ್ ಅವರ ‘ಪರ್ದಾ&ಪಾಲಿಗಮಿ’, ಅಂಕಣ ಬರಹ/ವೈಚಾರಿಕ ಬರಹ ಪ್ರಕಾರದಲ್ಲಿ ಮುಜಾಫರ್ ಅಸಾದಿ ಅವರ ‘ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’, ಸಂಕೀರ್ಣ ಪ್ರಕಾರದಲ್ಲಿ ಡಾ.ಜಿ. ಕೃಷ್ಣಪ್ಪ ಅವರ ‘ವಚನ ದೀಪಿಕೆ’, ಲೇಖಕರ ಮೊದಲ ಸ್ವತಂತ್ರ ಕೃತಿ ಪ್ರಕಾರದಲ್ಲಿ ಯಶಸ್ವಿನಿ ಕದ್ರಿ ಅವರ ‘ಊರು ಹೇಳದ ಕಥೆ’ ಕೃತಿಗಳು ಪಟ್ಟಿಯಲ್ಲಿವೆ.

 

MORE NEWS

ಪಿ. ಶೇಷಾದ್ರಿ ಸಿನಿಮಾವಲೋಕನಕ್ಕೆ 'ಮುನ್ನುಡಿ'

21-11-2024 ಬೆಂಗಳೂರು

ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...

ವಿಜಯ ರಾಘವೇಂದ್ರ ನಟನೆಯ 'ರುದ್ರಾಭಿಷೇಕಂ' ಚಿತ್ರಕ್ಕೆ ಚಾಲನೆ

21-11-2024 ಬೆಂಗಳೂರು

ಬೆಂಗಳೂರು: ನಮ್ಮ‌ನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...

87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೊ. ರು. ಚನ್ನಬಸಪ್ಪ ಆಯ್ಕೆ

20-11-2024 ಬೆಂಗಳೂರು

ಬೆಂಗಳೂರು: ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ...