Date: 09-11-2024
Location: ಬೆಂಗಳೂರು
ಬೆಂಗಳೂರು: ‘ಇವತ್ತಿನ ದಿನ ನೋಡುವ ಸಮಯ ಕಡಿಮೆಯಾಗುತಿದ್ದು, ಕರ್ನಾಟಕದ ಕಲಾ ಪ್ರಕಾರಗಳು ಈ ವಿಧಾನಕ್ಕೆ ಹೊಂದಿಕೊಳ್ಳುತ್ತಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ ಹೊಂದಿಕೊಂಡು ಹೋಗಬೇಕು,’ ಎಂದು ಟಿ. ಎಸ್. ನಾಗಾಭರಣ ಹೇಳಿದರು.
ಕರ್ನಾಟಕ 180ಕ್ಕೂ ಹೆಚ್ಚು ಕಲಾಪ್ರಕಾರಗಳನ್ನು ಹೊಂದಿರುವ ನೆಲವಾಗಿದ್ದು, ಅತೀ ಹೆಚ್ಚು ಕಲಾ ಪ್ರಕಾರವನ್ನು ಹೊಂದಿರುವ ರಾಜ್ಯ ಎಂದೇ ಗುರುತಿಸಲಾಗಿದೆ. ಈಗ ಎಷ್ಟು ಕಲಾಪ್ರಕಾರಗಳು ಉಳಿದಿದೆ ಗೊತ್ತಿಲ್ಲ. ಆದರೆ ನಾವು ಉಳಿಸಿಕೊಂಡು ಸಾಗಬೇಕಿದೆ. ಈಗ ರಿಂದ ಪ್ಯಾಡ್ ಗಳು ಬಂದಿರಬಹುದು, ಆದರೆ ಮೂಲ ವಾದ್ಯಗಳ ಸೊಗಡು, ಶಬ್ದವೇ ಬೇರೆ ಎಂದು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯುತ್ತಿರುವ 'ಕೃಷ್ಣೆಯಿಂದ ಕಾವೇರಿವರೆಗೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರಣಿ ದೇವಿ ಮಾಲಗತ್ತಿ ಮಾತನಾಡಿ, "ರಾಜ್ಯೋತ್ಸವದ ಜತೆಯಲ್ಲಿ, ಕರ್ನಾಟಕ ನಾಮಕರಣವಾಗಿ 50 ವರ್ಷ ತುಂಬಿದ ಸಂಭ್ರಮವನ್ನೂ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ಪೊಟ್ಟಿ ಶ್ರೀರಾಮುಲು ಭಾಷಾವಾರು ರಾಜ್ಯಗಳ ರಚನೆಗಾಗಿ ಉಪವಾಸ ಮಾಡಿ ಮರಣ ಹೊಂದಿದರು. ನಂತರ ಅವರ ಹೋರಾಟ ಫಲವಾಗಿ ಆಂಧ್ರ ಪ್ರದೇಶ ನಿರ್ಮಾಣವಾಯಿತು. ಕರ್ನಾಟಕದಲ್ಲಿ ಭಾಷಾವಾರು ರಾಜ್ಯಗಳ ರಚನೆ ಕುರಿತು ಅದರಗುಂಚಿ ಶಂಕರಗೌಡ ಉಪವಾಸ ಸತ್ಯಾಗ್ರಹ ಮಾಡಿದ್ದರು. ಪಾಟೀಲ ಪುಟ್ಟಪ್ಪ ಅವರು ಹೋರಾಡಿದ್ದರು. ಕುವೆಂಪು ಅವರು ಅಖಂಡ ಕರ್ಣಾಟಕ ಎಂಬ ಕವಿತೆಯಲ್ಲಿ ಕರ್ನಾಟಕ ಎಂಬ ನಾಮಕರಣದ ಕುರಿತಾಗಿ 'ಅಲ್ತೋ ನಮ್ಮ ಕೂಗಾಟದ ರಾಜಕೀಯ ನಾಟಕ!' ಎಂಬ ಕವಿತೆಯಲ್ಲಿ ನಾಡನ್ನು ಎಚ್ಚರಿಸಿದ್ದರು ಎಂದು ರಾಜ್ಯ ರಚನೆಯ ಘಟನಾವಳಿಗಳನ್ನು," ನೆನೆದರು.
"ಕರ್ನಾಟಕ ಏಕತಾನತೆ ಹೊಂದಿರುವ ರಾಜ್ಯ ಅಲ್ಲ. ಇದು ವೈವಿದ್ಯತೆಯ ನೆಲ. ಕನ್ನಡದ ಜತೆಯಲ್ಲಿ ಬಹಳಷ್ಟು ಸಹೋದರ ಭಾಷೆಗಳಿವೆ. ಅವುಗಳ ಜೊತೆಯಲ್ಲಿ ಒಂದಾಗಿ ಸಾಗುತ್ತಿರುವ ರಾಜ್ಯ ನಮ್ಮದು. ಈ ಬಗ್ಗೆ ಕಯ್ಯಾರ ಕಿಞ್ಞಣ್ಣ ರೈ, "ನನ್ನ ತುಳುನಾಡು ಕರ್ನಾಟಕದಲ್ಲಿ ಅಂತರ್ಗತ ಆಗಿದೆ. ಕರ್ನಾಟಕ ಭಾರತದಲ್ಲಿ ಅಂತರ್ಗತ ಆಗಿದೆ’ ಎಂದಿದ್ದರು," ಎಂದು ಹೇಳಿದರು.
ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಕೃಷ್ಣಾ ಮತ್ತು ಕಾವೇರಿವರೆಗೆ ಎಂಬ ಕಾರ್ಯಕ್ರಮ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ನಡೆಯುತ್ತಿದೆ. ಇಲ್ಲಿ ಕೃಷ್ಣಾ ಮತ್ತು ಕಾವೇರಿ ನದಿಗಳಂತೆ ನಮ್ಮ ನಾಡಿನ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂಭ್ರಮಿಸುವ ಎರಡು ದಿನಗಳ ಸಾಂಸ್ಕೃತಿಕ ಉತ್ಸವ ಇದಾಗಿದೆ. ಎರಡು ದಿನಗಳ ಕಾರ್ಯಕ್ರಮದ ಪಟ್ಟಿ ಈ ಕೆಳಗಿನಂತಿದೆ.
ಇಂದು (ಶನಿವಾರ ನವೆಂಬರ್ 9) ಸಂಗೀತ ಗಂಗಾ ಕಾವೇರೀ, ರಾಜ್ಯ ರೂಪುಗೊಂಡ ಬಗೆ, ಡೊಳ್ಳು ಕುಣಿತ, ಚಿತ್ತಾರ ಕಲಾ ಶಿಬಿರ, ಅದ್ಭುತ ರಾಮಾಯಣ, ಕಸೂತಿ ಕಲಾ ಶಿಬಿರ, ಮಲೆನಾಡಿನ ಹುಲಿ, ಚಿರತೆಗಳ ನಾಡಿನಲ್ಲಿ, ರಂಗಗೀತೆ, ಇಂಡಿಯನ್ ಇಂಪ್ರೋವ್ ಟ್ರೈಬ್, ಚಾಂಪಿಯನ್ ಗಳ ಕೊಟ ಮತ್ತು ಸಂಗಂಮ ಹಬ್ಬ ಎಂಬ ಕಾರ್ಯಕ್ರಮಗಳಿರುತ್ತದೆ.
ಎರಡನೇ ದಿನವಾದ ಭಾನುವಾರ (ನವೆಂಬರ್ 10) ಯಕ್ಷಗಾನ ಬಯಲಾಟ, ಬೆಳೆಯೋಣ ಬೆಳೆಸೋಣ, ಕರ್ನಾಟಕದ ಅಡಿಗೆಗಳು, ಆಹಾರ ಸಂಗ್ರಹಣೆಯ ಕಲೆ, ಪುಸ್ತಕ ಲೋಕಾರ್ಪಣೆ ಕಾವಂಡಿ ರಜಾಯಿ ತಯಾರಿ ಕಲಾ ಶಿಬಿರ, ಗಾನ ಮಾಧುರ್ಯದ ಮೂಲ, ಕನ್ನಡ ಪ್ರಜ್ಞೆಯ ವಿಕಾಸ ಮತ್ತು ಜ್ಞಾನಪೀಠ ಪುರಸ್ಕೃತರು, ಸೋನು ವೇಣುಗೋಪಾಲ್ ಲೈವ್ ಮತ್ತು ಕಾಯಕ ಎಂಬ ಕಾರ್ಯಕ್ರಮಗಳಿರುತ್ತದೆ.
ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...
ಬೆಂಗಳೂರು: ನಮ್ಮನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...
ಬೆಂಗಳೂರು: ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ...
©2024 Book Brahma Private Limited.