`ಕನ್ನಡನಾಡು ಸಾಹಿತ್ಯ ಶ್ರೀ ಪ್ರಶಸ್ತಿ' ವಿಶ್ವನಾಥ ಭಕರೆ ಭಾಜನ

Date: 24-02-2023

Location: ಬೆಂಗಳೂರು


ಕಲಬುರ್ಗಿಯ ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ಕೊಡಮಾಡುವ, ಕಲ್ಯಾಣ ಕರ್ನಾಟಕ ಪ್ರದೇಶದ ಉತ್ತಮ ಲೇಖಕರು ಹಾಗೂ ಕೃತಿಗಳಿಗೆ ನೀಡಲಾಗುವ 2021ನೇ ಸಾಲಿನ ಪ್ರಶಸ್ತಿಗೆ ವಿಶ್ವನಾಥ ಭಕರೆ ಆಯ್ಕೆಯಾಗಿದ್ದಾರೆ.

ದಕ್ಷ ಪೊಲೀಸ್‌ ಅಧಿಕಾರಿ ಹುತಾತ್ಮ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ಕುರಿತಾದ ವಸ್ತುನಿಷ್ಠ ಕಾದಂಬರಿ “ಬಿಸಿಲೂರಿನ ಬಂಡೆ” ಕೃತಿ ಆಯ್ಕೆಯಾಗಿದೆ ಎಂದು ಕನ್ನಡನಾಡು ಪ್ರಕಾಶನ ಸಂಸ್ಥೆಯ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಅವರು ತಿಳಿಸಿದ್ದಾರೆ.

ಫೆಬ್ರವರಿ 26 ರಂದು ಕಲಬುರಗಿಯ ವೈ.ಜಿ. ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಬೆಳ್ಳಿಗೆ 10:30ಕ್ಕೆ ಎಂಟು ಕೃತಿಗಳ ಲೋಕಾರ್ಪಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶ್ವನಾಥ ಭಕರೆ ಅವರ ಲೇಖಕರ ಪರಿಚಯಕ್ಕಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ...

MORE NEWS

ಅನಿತಾ ಪಿ. ತಾಕೊಡೆ ಅವರ ಸುವರ್ಣಯುಗ ಕೃತಿಗೆ ‘ವಿಕಾಸ ಪುಸ್ತಕ ಬಹುಮಾನ’ 

06-01-2025 ಬೆಂಗಳೂರು

ಮುಂಬಯಿ: ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದಿಂದ ಕೊಡಮಾಡುವ 2023-24ನೇ ಸಾಲಿನ ...

ರಾಮಾಚಾರಿ ಬರ್ತ್‌ಡೇಗೆ ಟಾಕ್ಸಿಕ್‌ನಿಂದ ವಿಶೇಷ ಕೊಡುಗೆ..! 

06-01-2025 ಬೆಂಗಳೂರು

ಯಶ್‍ ಅಭಿನಯದ ‘ಟಾಕ್ಸಿಕ್‍’ ಚಿತ್ರದ ಚಿತ್ರೀಕರಣ ಬೆಂಗಳೂರಿನ ನಂತರ ಮುಂಬೈನಲ್ಲಿ ಮುಂದುವರೆದಿದೆ....

ಗಂಡಸರ ಪಾಲಿಗೆ ಆಕೆ ರಹಸ್ಯ, ಆಕೆಯ ಹೆಸರು ಭ್ರಮರಿ…

06-01-2025 ಬೆಂಗಳೂರು

‘ಅವಳ‌ ಅಂದಕ್ಕೆ ಸೋತವರು, ಮಾತಿಗೆ ಮರುಳಾದವರು, ನಡಿಗೆಗೆ ನಡುಗಿದವರಾರೂ, ಭೂಮಿ‌ ಮೇಲೆ ಉಳಿದೇ ಇಲ್ಲ. ...