Date: 25-08-2022
Location: ಬೆಂಗಳೂರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 21 ಟ್ರಸ್ಟ್ ಹಾಗೂ ಪ್ರತಿಷ್ಠಾನಗಳಿಗೆ ಹೊಸ ಅಧ್ಯಕ್ಷರು ಹಾಗೂ ಸದಸ್ಯರುಗಳನೇಮಕ ಸಂಬಂಧ 2022 ಆಗಸ್ಟ್ 24 ಬುಧವಾರ ಹೊರಡಿಸಿದ್ದ ಆದೇಶವನ್ನು 2022 ಆಗಸ್ಟ್ 25 ಶುಕ್ರವಾರ ಸಕಾರ ಹಿಂಪಡೆದಿದೆ. ಈ ವಿಚಾರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಆರ್. ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
21 ಪ್ರತಿಷ್ಠಾನಗಳಾದ ಡಾ.ದ.ರಾ. ಬೇಂದ್ರೆ(ಅಂಬಿಕಾತನಯದತ್ತ)ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡ, ಡಾ.ಪು.ತಿ.ನ. ಟ್ರಸ್ಟ್ ಬೆಂಗಳೂರು, ಮಲ್ಲಿಕಾರ್ಜುನ ಮನ್ಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಧಾರವಾಡ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಕೋಲಾರ, ಕೆ. ಶಿವರಾಮ ಕಾರಂತ ಪ್ರತಿಷ್ಠಾನ, ಉಡುಪಿ, ಡಾ. ವಿ.ಕೃ. ಗೋಕಾಕ್ ಪ್ರತಿಷ್ಠಾನ ಹಾವೇರಿ, ಸ್ವರ ಸಾಮಾಟ್ರ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕನ್ನಡ ಕುಲಪುರೋಹಿತಾ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಬೆಟಗೇರಿ ಕೃಷ್ಣಶರ್ಮ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಬೆಳಗಾವಿ, ಹುತಾತ್ಮ ಮೈಲಾರ ಮಹಾದೇವಪ್ಪನವರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾವೇರಿ, ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಧಾರವಾಡದ ಚಿತ್ರಕಲಾ ಶಿಲ್ಪಿ ಶ್ರೀ ಡಿ.ವಿ. ಹಾಲಭಾವಿ ರಾಷ್ಟ್ರೀಯಸ್ಮಾರಕ ಟ್ರಸ್ಟ್, ಕೋಲಾರದ ಡಿ.ವಿ.ಜಿ. ಪ್ರತಿಷ್ಠಾನ, ಬಾಗಲಕೋಟೆಯ ಪಿ.ಬಿ.ಧುತ್ತರಗಿ(ಸೂಳಿಬಾವಿ)ಪ್ರತಿಷ್ಠಾನ, ಹಾವೇರಿಯ ಗಳಗನಾಥ ಮತ್ತು ನಾ. ಶ್ರೀ ರಾಜಪುರೋಹಿತ ಪ್ರತಿಷ್ಠಾನ, ಮಂಡ್ಯದ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್, ಬೆಂಗಳೂರಿನ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ಚಿಕ್ಕಮಗಳೂರಿನ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರಕಾಶನ, ವಿಜಯಪುರದ ಹಲಸಂಗಿ ಗೆಳೆಯರ ಪ್ರತಿಷ್ಠಾನ, ಬಾಗಲಕೋಟೆ ಕವಿ ಚಕ್ರವರ್ತಿ ರನ್ನ ಪ್ರತಿಷ್ಠಾನ, ತುಮಕೂರು ಡಾ. ಗುಬ್ಬಿ ವೀರಣ್ಣ ಟ್ರಸ್ಟ್‌ಗಳಿಗೆ ಪ್ರಕಟಿಸಲಾಗಿದ್ದ ಹೊಸ ನೇಮಕ ಆದೇಶವನ್ನು ಹಿಂಪಡೆಯಲಾಗಿದೆ.
ಕಲಬುರಗಿ: "ಒಂದು ವಿಶ್ವವಿದ್ಯಾಲಯ ಮಾಡಬೇಕಾದಂತಹ ಅಪರೂಪವಾದ, ಅಪೂರ್ವವಾದ ಕೆಲಸವನ್ನು ಬಹುತೇಕ ವಿಶ್ವವಿದ್ಯಾಲಯಗಳು ...
ಕಲಬುರಗಿ: "ಎಷ್ಟೋ ಚಳವಳಿ, ಹೋರಾಟಗಳ ಬಗ್ಗೆ ನಡೆಯುವಂತಹ ‘ಕರ್ನಾಟಕದ ಚಳುವಳಿಗಳು’ ಅನ್ನುವ ಪಿ.ಎಚ್.ಡ...
ಕಲಬುರಗಿ: "ಸಮಾಜ ಎನ್ನುವುದು ನಮ್ಮ ಕಣ್ಣ ಮುಂದೆ ಇರುವಂತಹ ವಿದ್ಯಮಾನ ಹಾಗೂ ವಾಸ್ತವ. ಇಂತಹ ಸಮಾಜದ ಅಧ್ಯಯನಕ್ಕೆ ಸಾ...
©2025 Book Brahma Private Limited.