Date: 03-11-2024
Location: ಬೆಂಗಳೂರು
ಬೆಂಗಳೂರು: ಅಂಕಿತ ಪುಸ್ತಕ ವತಿಯಿಂದ ಸು. ರುದ್ರಮೂರ್ತಿ ಶಾಸ್ತ್ರಿ ಅವರ ಶ್ರೀಕೃಷ್ಣದೇವರಾಯ, ಮಕ್ಕಳಿಗಾಗಿ ಮತ್ತೊಮ್ಮ ಹೇಳಿದ ವಿಕ್ರಮ ಬೇತಾಳ ಕಥೆಗಳು, ಮಕ್ಕಳಿಗಾಗಿ ಮತ್ತೊಮ್ಮೆ ಹೇಳಿದ ಪಂಚತಂತ್ರದ ಕಥೆಗಳು, ಪುಣ್ಯಕೋಟಿ (ನಿರೂಪಣೆ) ಹಾಗೂ ಎಂ.ವಿ. ನಾಗರಾಜರಾವ್ ಅವರ ನಾಗ ಸಾಧುಗಳ ರಹಸ್ಯ ಪ್ರಪಂಚ (ಅನುವಾದಿತ), ಮಹಾಯೋಗಿನಿ (ಅನುವಾದಿತ) ಕೃತಿಗಳ ಲೋಕಾರ್ಪಣಾ ಸಮಾರಂಭವು ನಗರದಲ್ಲಿ 2024 ನ. 3 ಭಾನುವಾರದಂದು ನಡೆಯಿತು.
ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಪ್ರಸಿದ್ಧ ಸಾಹಿತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು, "ನಮ್ಮ ಕನ್ನಡ ಸಾಹಿತ್ಯದಲ್ಲಿ ಕೃಷ್ಣದೇವರಾಯನ ಕುರಿತ ಸಮಗ್ರ ಕೃತಿಯ ಅಭಾವವಿತ್ತು. ಆದರೆ ಸು. ರುದ್ರಮೂರ್ತಿ ಶಾಸ್ತ್ರೀ ಅವರು ಅದನ್ನು ಪೂರೈಸಿದ್ದಾರೆ. ನನಗೆ ಇಲ್ಲಿ ಮತ್ತಷ್ಟು ವಿಶೇಷವಾಗಿ ಕಂಡಿದ್ದು ಈ ಕೃತಿಯನ್ನು ಎಲ್ಲಿಯೂ ಕೂಡ ಅತಿರಂಜಿತಗೊಳಿಸಿಲ್ಲ ಹಾಗೂ ವೈಭವಿಕರಿಸಿಲ್ಲ ಎನ್ನುವುದು. ಒಂದು ಕಾಲದಲ್ಲಿ ಅತಿರಂಜಿತ, ವೈಭವೀಕರಣವಲ್ಲದ ಐತಿಹಾಸಿಕ ಕಾದಂಬರಿಗಳ ಪ್ರಪಂಚವಿತ್ತು. ಅಂತಹ ಪ್ರಪಂಚದ ಹಿನ್ನೆಲೆಯನ್ನಿಟ್ಟುಕೊಂಡು ಈ ಕೃತಿಯಲ್ಲನ್ನು ರಚಿಸಲಾಗಿದೆ,' ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಖ್ಯಾತ ಸಂಶೋಧಕ ಡಾ.ಆರ್. ಶೇಷಶಾಸ್ತ್ರಿ ಮಾತನಾಡಿ, 'ಇತಿಹಾಸಕಾರ ತನ್ನ ಇತಿಹಾಸದಲ್ಲಿ ಏನು ಹೇಳಲು ಸಾಧ್ಯವಿಲ್ಲವೋ, ಅಂತಹ ಭಾವ ಸತ್ಯಗಳನ್ನು ಒಂದು ಕಾದಂಬರಿಯ ರೂಪದಲ್ಲಿ ಒಬ್ಬ ಇತಿಹಾಸಕಾರನೇ ಹೇಳುತ್ತಾನೆ. ಯಾವನು ಚರಿತ್ರೆಯ ಚಾರಿತ್ರ್ಯವನ್ನು ಅಧ್ಯಾಯನ ಮಾಡಿರುತ್ತಾನೋ, ಗಮನಿಸಿರುತ್ತಾನೋ ಅಂತವನು ಮಾತ್ರ ಚಾರಿತ್ರಿಕ ಕಾದಂಬರಿಯನ್ನು ಬರೆಯಲು ಸಾಧ್ಯ. ಅಂತವರು ಬರೆದ ಕಾದಂಬರಿ ದೂರದ ವಸ್ತು ಎಂದೆನ್ನಿಸದೆ, ಇದು ನಮಗೆ ಹತ್ತಿರವಾದದ್ದು ಅನ್ನಿಸುವ ಹಾಗೆ ಇಂದು ಬಿಡುಗಡೆಗೊಂಡಿರುವ ರುದ್ರಮೂರ್ತಿ ಅವರ ಕೃತಿಗಳು ವಿಚಾರವಾನ್ನು ಕಟ್ಟಿಕೊಡುತ್ತದೆ," ಎಂದರು.
ಲೇಖಕ ಡಾ.ಎಚ್.ಎಸ್. ಸತ್ಯನಾರಾಯಣ ಮಾತನಾಡಿ, "ಎಂ.ವಿ. ನಾಗರಾಜರಾವ್ ಅವರ ಕೃತಿಗಳೊಳಗೆ ಓದಹಾಗೆ ಲೇಖಕರಿಗೆ ಇರುವಂಥಹ ಶೋಧಕ ಶಕ್ತಿಯ ಅನಾವರಣವಾಗುತ್ತದೆ. ಇಂದು ಬಿಡುಗಡೆಗೊಂಡಿರುವ ಎರಡು ಕೃತಿಗಳು ಕೂಡ ನೈಜ್ಯ ಕಥನವಾಗಿದ್ದು, ಇವುಗಳ ಬಗ್ಗೆ ಮೂಲ ಲೇಖಕರೇ ಹೋಗಿ ಖುದ್ದಾಗಿ ಅಧ್ಯಯನ ಮಾಡಿದ್ದಾರೆ. ಆರು ವರ್ಷಗಳ ಕಾಲ ನೈಜ್ಯ ಕಥನವನ್ನು ವೀಕ್ಷಿಸಿ ಕಾದಂಬರಿಯ ರೂಪವನ್ನು ಕೊಟ್ಟಿದ್ದಾರೆ. ಇದು ನಿಜವಾದ ಲೇಖಕ, ಸಂಶೋಧಕನ ಬರವನಿಗೆ," ಎಂದರು.
ವೇದಿಕೆಯಲ್ಲಿ ಎಂ.ವಿ. ನಾಗರಾಜರಾವ್, ಸು. ರುದ್ರಮೂರ್ತಿ ಶಾಸ್ತ್ರಿ ಅವರು ಉಪಸ್ಥಿತರಿದ್ದರು.
ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...
ಬೆಂಗಳೂರು: ನಮ್ಮನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...
ಬೆಂಗಳೂರು: ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ...
©2024 Book Brahma Private Limited.