ಕನ್ನಡ ಮತ್ತು ತೆಲುಗು ಸಹಸಂಬಂದ 

Date: 14-07-2024

Location: ಬೆಂಗಳೂರು


"ಕನ್ನಡ ಮತ್ತು ತೆಲುಗು ಬಾಶೆಗಳ ನಡುವೆ ಕಂಡುಬರುವ ಸಮಾನತೆಗಳನ್ನು ತುಸು ಬಿನ್ನವಾಗಿ ನೋಡಬೇಕು. ಕನ್ನಡ ಬಾಶೆ ಬಹು ಉದ್ದನೆಯ ಗಡಿಯನ್ನು ತೆಲುಗಿನೊಂದಿಗೆ ಹಂಚಿಕೊಂಡಿದೆ. ಬಹುತೇಕ ನೀಲಗಿರಿಯಿಂದ ಮರಾಟವಾಡದವರೆಗೆ ಕನ್ನಡ ತೆಲುಗಿನ ಗಡಿಯನ್ನು ಹಂಚಿಕೊಂಡಿದೆ," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಕನ್ನಡ ಮತ್ತು ತೆಲುಗು ಸಹಸಂಬಂದ’ ಕುರಿತು ಬರೆದಿರುವ ಲೇಖನ.

ಸಾಮಾನ್ಯವಾಗಿ ಕನ್ನಡ ಬಾಶೆಯ ಸಂಬಂದ, ಸಂಪರ‍್ಕ ಎಂದಾಗ ಈ ಹಿಂದೆ ಈ ಅಂಕಣದಲ್ಲಿ ಮಾತಾಡಿದ ಪ್ರಮುಕವಾದ ಬಾಶೆಗಳ ಸಂಬಂದದ ಕುರಿತು ಮಾತನಾಡುವುದು ಹೆಚ್ಚು ಕಾಣಿಸುತ್ತದೆ. ಅವುಗಳೆಂದರೆ, ಪ್ರಾಕ್ರುತ-ಸಂಸ್ಕೃತ, ಅರಾಬಿಕ್-ಪರ‍್ಶಿಯನ್ ಮತ್ತು ಇಂಗ್ಲೀಶು. ಅದು ನಿಜ. ಈ ಮೂರು ಬಾಶೆಗಳು ಕನ್ನಡದ ಮೇಲೆ ಬೀರಿದ ಪ್ರಬಾವ ವ್ಯಾಪಕವೂ ಆಳವೂ ಆದುದು. ಅದೆ ವೇಳೆಗೆ ಆ ಬಾಶೆಗಳೂ ಕನ್ನಡದ ಸಹಜೀವನದಲ್ಲಿ ಸಾಕಶ್ಟು ಬದಲಾವಣೆಗೂ ಒಳಗಾಗಿವೆ. ಇದರ ಜೊತೆಗೆ ಕನ್ನಡವು ಇನ್ನೂ ಹಲವು ಬಾಶೆಗಳ ಜೊತೆಗೆ ಕಾಲಾಂತರದಿಂದ ಕೂಡು ಬಾಳುವೆ ನಡೆಸಿಕೊಂಡು ಬಂದಿದೆ. ಈ ಇತರ ಬಾಶೆಗಳ ಜೊತೆಗಿನ ಕೂಡುಬಾಳುವೆಯ ಕುರಿತು ಇನ್ನು ಮಾತನಾಡಬಹುದು.

ಕನ್ನಡ ಮತ್ತು ತಮಿಳುಗಳಿಗಿಂತ ತುಸು ದೂರದ ಸಂಬಂದವನ್ನು ಕನ್ನಡ ಮತ್ತು ತೆಲುಗು ಹೊಂದಿವೆ. ತೆಲುಗು ಪ್ರತ್ಯೇಕವಾದ ಸಮಯದಲ್ಲಿ ಬಹುಶಾ ಕನ್ನಡ-ತಮಿಳು ಇವು ಇನ್ನೂ ಅಶ್ಟು ಪ್ರತ್ಯೇಕವಾಗಿರಲಿಕ್ಕಿಲ್ಲ. ಕನ್ನಡ ಮತ್ತು ತೆಲುಗುಗಳ ನಡುವಿನ ಹಲವಾರು ಸಮಾನ ಅಂಶಗಳು ಮೂಲದಿಂದ ಬಂದಿರಬಹುದೆಂಬ ಅನುಮಾನ ಇಟ್ಟುಕೊಳ್ಳಬಹುದಾದರೂ ಕನ್ನಡ ಮತ್ತು ತಮಿಳುಗಳ ನಡುವೆ ಇರುವಶ್ಟು ಸಾದ್ಯತೆಗಳು ಇರುವುದಿಲ್ಲ. ಹಾಗಾಗಿ, ಕನ್ನಡ ಮತ್ತು ತೆಲುಗು ಬಾಶೆಗಳ ನಡುವೆ ಕಂಡುಬರುವ ಸಮಾನತೆಗಳನ್ನು ತುಸು ಬಿನ್ನವಾಗಿ ನೋಡಬೇಕು. ಕನ್ನಡ ಬಾಶೆ ಬಹು ಉದ್ದನೆಯ ಗಡಿಯನ್ನು ತೆಲುಗಿನೊಂದಿಗೆ ಹಂಚಿಕೊಂಡಿದೆ. ಬಹುತೇಕ ನೀಲಗಿರಿಯಿಂದ ಮರಾಟವಾಡದವರೆಗೆ ಕನ್ನಡ ತೆಲುಗಿನ ಗಡಿಯನ್ನು ಹಂಚಿಕೊಂಡಿದೆ. ಕನ್ನಡ ಮತ್ತು ತಮಿಳುಗಳ ನಡುವೆ ಪರಸ್ಪರ ಹತ್ತಿರದಲ್ಲಿ ಇರುವ ಒಳನುಡಿಗಳು ತೋರುವ ಒಂದುತನ ಕನ್ನಡ ಮತ್ತು ತೆಲುಗು ಬಾಶೆಗಳ ನಡುವೆ ಈ ರೀತಿಯಲ್ಲಿ ಇಲ್ಲ. ಅಂದರೆ ಮರಾಟವಾಡದಲ್ಲಿ ಕನ್ನಡ ಮತ್ತು ತೆಲುಗುಗಳು ತೋರಿಸುವ ಸಮಾನ ಅಂಶಗಳು ಮತ್ತು ನೀಲಗಿರಿಯಲ್ಲಿ ಕನ್ನಡ ಮತ್ತು ತೆಲುಗುಗಳು ತೋರಿಸುವ ಅಂಶಗಳು ಬಿನ್ನವಾಗಿವೆ. ಅಲ್ಲದೆ, ಕೋಲಾರ-ಚಿತ್ತೂರಿನಲ್ಲಿ, ತುಮಕೂರು-ಬಳ್ಳಾರಿ-ಅನಂತಪುರದಲ್ಲಿ, ಬೀದರ-ಮೆಹಬೂಬನಗರದಲ್ಲಿ ಬಿನ್ನವಾಗಿದೆ. ಯಾದಗಿರಿ ಪರಿಸರದಲ್ಲಿ ಬಳಕೆಯಲ್ಲಿರುವ ಬಾಶೆ ಕನ್ನಡವೊ ತೆಲುಗೊ ಎಂಬ ಅನುಮಾನಗಳೂ ಬರುವಶ್ಟು ಮಟ್ಟಿಗೆ ಅವೆರಡೂ ಬೆರೆತುಹೋಗಿವೆ. ಈ ಬೆಳವಣಿಗೆ ಸ್ಪಶ್ಟವಾಗಿ ಮೂಲದಿಂದ ಬಂದ ಸಮಾನ ಲಕ್ಶಣಗಳ ಕಾರಣದಿಂದ ಅಲ್ಲ. ಬದಲಿಗೆ, ಕನ್ನಡ ಮತ್ತು ತೆಲುಗು ಬಾಶೆಗಳು ಮೂಲದಿಂದ ಬೇರೆಯಾಗಿ ಬೆಳೆದು ಆನಂತರ ಪರಸ್ಪರ ಸಂರ‍್ಕದಲ್ಲಿ ಪರಸ್ಪರ ಪ್ರಬಾವಕ್ಕೆ ಒಳಗಾಗಿ ಬೆಳೆಸಿಕೊಂಡ ಲಕ್ಶಣಗಳಾಗಿವೆ. ಆದರೆ ಪರಸ್ಪರ ಒಂದು ಪ್ರದೇಶದಲ್ಲಿ ಬಳಕೆಯಲ್ಲಿರುವ ಕನ್ನಡ ಮತ್ತು ತಮಿಳು ಬಾಶೆಗಳ ಒಳನುಡಿಗಳಲ್ಲಿ ಕಂಡುಬರುವ ಸಮಾನ ಲಕ್ಶಣಗಳನ್ನು ಹೀಗೆ ಕನ್ನಡ-ತೆಲುಗು ಒಳನುಡಿಗಳ ನಡುವೆ ಮಾತಾಡುವಶ್ಟು ಸುಲಬವಾಗಿ ಮಾತನಾಡಲು ಆಗದು. ಅವುಗಳಲ್ಲಿ ಮೂಲದಿಂದ ಬೆಳೆಸಿಕೊಂಡ-ಉಳಿಸಿಕೊಂಡ ಸಮಾನ ಅಂಶಗಳೂ ಇವೆ, ಆನಂತರ ಪರಸ್ಪರ ಪ್ರಬಾವಕ್ಕೆ ಒಳಗಾಗಿರುವ ಅಂಶಗಳೂ ಇವೆ. ಕನ್ನಡ-ತೆಲುಗುಗಳ ನಡುವೆ ಈ ಬಗೆಯ ಸಂಬಂದ ಇರದೆ ಇರುವುದಕ್ಕೆ ಕಾರಣ ಕನ್ನಡ ಮತ್ತು ತೆಲುಗು ಬಾಶೆಗಳ ನಡುವಿನ ಸಂಬಂದ ಬಹು ದೂರದ್ದಾಗಿರುವುದೆ ಮುಕ್ಯ ಕಾರಣ.

ಯಾದಗಿರಿ ಪರಿಸರದಲ್ಲಿ ಬಳಕೆಯಲ್ಲಿರುವ ಕನ್ನಡದಿಂದ ಒಂದು ಉದಾಹರಣೆಯನ್ನು ಇಲ್ಲಿ ಮಾತಿಗೆ ತೆಗೆದುಕೊಳ್ಳಬಹುದು. ಬಸ್ಟಾಂಡ್ಲು ಬಸ್ಸುಗೊಳು ಬಾಳ ಅದಾವ. ಇಂತಾ ವಾಕ್ಯಗಳು ಯಾದಗಿರಿಯ ಸುತ್ತಮುತ್ತ ಪರಿಸರದಲ್ಲಿ ಅತ್ಯಂತ ಸಹಜ. ಇದು ಕನ್ನಡವೊ, ತೆಲುಗೊ ತಿಳಿಯುವುದು ಕಶ್ಟವೆ. ಯಾಕೆಂದರೆ ಇಲ್ಲಿ ಕನ್ನಡ ಮತ್ತು ತೆಲುಗಿನ ಪದಗಳು ಪರಸ್ಪರ ಬೆರೆಯುವುದಕ್ಕಿಂತ ಬದಲಾಗಿ ಕನ್ನಡ ಮತ್ತು ತೆಲುಗುಗಳ ವ್ಯಾಕರಣಗಳ ಪರಸ್ಪರ ಬೆರೆಯುವಿಕೆ ಕಾಣಿಸುತ್ತದೆ. ನೆಲೆಯನ್ನು ಹೇಳುವ ಸಪ್ತಮಿ ರೂಪ -ಲು ಇದು ತೆಲುಗಿನಲ್ಲಿ ಸಹಜವಾಗಿ ಬಳಕೆಯಾಗುವ ರೂಪ. ಅದರಂತೆ ಬಸ್ಸುಗೊಳು ಎನ್ನುವಲ್ಲಿ ಇರುವ ಬಹುವಚನ ರೂಪ ಸಹಜವಾಗಿ ಕನ್ನಡದಲ್ಲಿ ಬಳಕೆಯಲ್ಲಿ ಇಲ್ಲ. ಅಂದರೆ, ಮನುಶ್ಯ ಅಲ್ಲದ ಸಂರ‍್ಬದಲ್ಲಿ ಕನ್ನಡದಲ್ಲಿ ಸಾಮಾನ್ಯವಾಗಿ ಬಹುವಚನ ರೂಪವನ್ನು ಬಳಸುವುದಿಲ್ಲ. ಆದರೆ ಇಲ್ಲಿ ಕೊಟ್ಟಿರುವ ವಾಕ್ಯದಲ್ಲಿ ಈ ಬಹುವಚನ ರೂಪ ಬಳಕೆಯಾಗಿದೆ. ಇದು ಸ್ಪಶ್ಟವಾಗಿ ಮೂಲದಿಂದ ಬೆಳೆದು ಬಂದ ಲಕ್ಶಣಗಳಾಗಿರದೆ ಕನ್ನಡ ಮತ್ತು ತೆಲುಗುಗಳು ಬೇರೆಯಾಗಿ ಬೆಳೆಸಿಕೊಂಡ ಲಕ್ಶಣಗಳನ್ನು ಮತ್ತೆ ಪರಸ್ಪರ ಪ್ರಬಾವದಿಂದ ಹಂಚಿಕೊಂಡ ಕತೆಯಾಗಿದೆ. ಇಲ್ಲಿ ಒಂದು ವಿಶಯವನ್ನು ಹೇಳಬೇಕು. ಜಗತ್ತಿನಲ್ಲಿಯೆ ಬಾಶಾಸಂಪರ‍್ಕದ ಅದ್ಯಯನದ ಬಹು ಕುತೂಹಲದ ಉದಾಹರಣೆಗಳನ್ನು ಈ ಪರಿಸರ ಕೊಡುತ್ತದೆ.

ಈ ಮೂಲಕ ಕನ್ನಡ ಮತ್ತು ತೆಲುಗು ಬಾಶೆಗಳು ಹೇಗೆ ಪರಸ್ಪರ ಪ್ರಬಾವದಲ್ಲಿ ಬದುಕಿವೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಾದ್ಯವಾಗುತ್ತದೆ. ಇದರ ಜೊತೆಗೆ ಕನ್ನಡ ಮತ್ತು ತೆಲುಗಿನ ಗಡಿಯಗುಂಟ ಪರಸ್ಪರ ಬಾಶೆಗಳ ಒಳನುಡಿಗಳು ಹೀಗೆಯೆ ಸಹಸಂಬಂದದಲ್ಲಿ ಬದುಕಿವೆ. ಸಾಕಶ್ಟುಮಟ್ಟಿಗೆ ಪದಕೋಶವನ್ನೂ ಇವು ಹಂಚಿಕೊಳ್ಳುತ್ತವೆ. ಕರ‍್ನಾಟಕ ಬಾಶಿಕ ಪರಿಸರದ ಸಂದರ‍್ಬದಲ್ಲಿ ಹಯ್ದರಾಬಾದ ಕರ‍್ನಾಟಕ ಪರಿಸರ ಸಣ್ಣ ಬಾಶಿಕ ಕ್ಶೇತ್ರದಂತೆ ಇದೆ. ಅಂದರೆ, ಬಿನ್ನ ಬಾಶಾಮನೆತನಗಳಿಗೆ ಸಂಬಂದಿಸಿದ ಬಾಶೆಗಳು ಒಂದೆಡೆ ಪರಸ್ಪರ ಪ್ರಬಾವಿಸುತ್ತ ಒಂದಾಗಿ ಬದುಕಿರುವ ಪರಿಸರ. ಇಲ್ಲಿ ಕನ್ನಡ-ತೆಲುಗು-ಮರಾಟಿ-ರ‍್ದು ಬಾಶೆಗಳು ಇವುಗಳ ಜೊತೆಗೆ ಇನ್ನೂ ಹಲವು ಬಾಶೆಗಳು ಪರಸ್ಪರ ಕೂಡಿ ಬದುಕಿವೆ. ಇಲ್ಲಿ ಒಂದು ಕುತೂಹಲದ ಅಂಶವನ್ನು ಹೇಳಬೇಕು. ಅದು ಕನ್ನಡ ಮತ್ತು ತೆಲುಗಿನ ಸಂಬಂದಕ್ಕೆ ಸಂಬಂದಿಸಿರುವಂತದ್ದು. ಹಯ್ದರಾಬಾದ ಕರ‍್ನಾಟಕ ಪರಿಸರದಲ್ಲಿ ಕನ್ನಡ ಮತ್ತು ತೆಲುಗು ಇಲ್ಲಿರುವ ಮರಾಟಿ ಮತ್ತು ಉರ‍್ದು ಕೂಡ ಸಮಾನ ತಾನದಲ್ಲಿ ನಡೆಯುತ್ತವೆ. ಈ ಬಗೆಯ ಸಮಾನ ಲಕ್ಶಣಗಳನ್ನು ಕನ್ನಡ ಮತ್ತು ತೆಲುಗು ಹಂಚಿಕೊಳ್ಳುವುದು ಬಹಳ ಅಪರೂಪ.

ಇನ್ನು ಇಂದಿನ ಕರ‍್ನಾಟಕ ಪರಿಸರದಲ್ಲಿ ಬಳಕೆಯಲ್ಲಿರುವ ಹಲವಾರು ತೆಲುಗಿನ ಒಳನುಡಿಗಳು ಇಲ್ಲವೆ ತೆಲುಗು ಬಾಶಾಬಗೆಗಳು ಕನ್ನಡ ಮತ್ತು ತೆಲುಗು ಬಾಶೆಗಳ ಸಂಬಂದವನ್ನು ಬೆಸೆಯುವ ಕೆಲಸವನ್ನು ಮಾಡುತ್ತಿವೆ. ಇವುಗಳಲ್ಲಿ ದೊಡ್ಡ ಸಂಕೆಯಲ್ಲಿ ಇರುವ ವಡರಿ, ಹಾಗೆಯೆ ಚೆಂಚು, ದಾಸರಿ ಮೊದಲಾಗಿ ಇನ್ನೂ ಹಲವು ಒಳನುಡಿಗಳನ್ನು ಇಲ್ಲಿ ಗಮನಿಸಬಹುದು. ಅದರಂತೆಯೆ ಇಂದಿನ ತೆಲಂಗಾಣ ಮತ್ತು ಆಂದ್ರಪ್ರದೇಶಗಳಲ್ಲಿ ಬಳಕೆಯಲ್ಲಿರುವ ವಿವಿದ ಕನ್ನಡದ ಒಳನುಡಿಗಳು, ಬಾಶಾಬಗೆಗಳು ಕೂಡ ಹೀಗೆಯೆ ಇವೆ. ಅನಂತಪುರ, ಹಿಂದೂಪುರ, ಮಂತ್ರಾಲಯ, ಮೆಹಬೂಬ್ ನಗರ ಮೊದಲಾದ ಪರಿಸರಗಳಲ್ಲಿ ಬಳಕೆಯಲ್ಲಿರುವ ಕನ್ನಡ ಬಾಶಾಬಗೆಗಳನ್ನೂ ಇಲ್ಲಿ ಹೆಸರಿಬಹುದು.

ಈ ಅಂಕಣದ ಹಿಂದಿನ ಬರೆಹಗಳು:
ಬಾರತೀಯ ಇಂಗ್ಲೀಶು
ಇಂಗ್ಲೀಶು ಕನ್ನಡ ಬದುಕಿನೊಳಗೆ

ಇಂಗ್ಲೀಶೆಂಬ ಜಗತ್ತು ಕನ್ನಡ ಜಗತ್ತಿನೊಳಗೆ
ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ
ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?

ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?

ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ

ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು

ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ

ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ

ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು

ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ

ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ

ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ

ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ

ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

MORE NEWS

ಬನಶಂಕರಿಯ ನಾಟಕಗಳ ಜಾತ್ರೆ : ವೃತ್ತಿ ರಂಗಭೂಮಿಯ ಕುಂಭಮೇಳ

27-01-2025 ಬೆಂಗಳೂರು

"ಬನಶಂಕರಿಯ ಮೈತುಂಬಾ ತೀಡಿದ ತಂಗಾಳಿಭರಿತ ಹಿತವಾದ ಚುರುಕು ಬಿಸಿಲು. ಜನಜಂಗುಳಿಯ ಬಾದಾಮಿಯ ಬನಶಂಕರಿ ಮಹಾಜಾತ್ರೆಯೊಳ...

ಪೆರಮಾತಿನ ಶಿಕ್ಶಣ: ಕೆಲ ಸಮಸ್ಯೆಗಳು-ವಿಶಯದಲ್ಲಿ ಸೋಲು

26-01-2025 ಬೆಂಗಳೂರು

"ಬಾಶೆಯ ಮೂಲಕ ಕೊಡುವುದರ ಕಡೆಗೆ ಅವರ ಗಮನ ಹರಿಯುವುದು ಕಶ್ಟವಾಗುತ್ತದೆ. ಇದರಿಂದ ಮಕ್ಕಳು ವಿಶಯವನ್ನು ಅನುಬವಿಸಲು ಸ...

ಕನ್ನಡ ವಿಮರ್ಶೆ 4 (ಮುಂದುವರೆದ 4ನೆ ಭಾಗ)  

24-01-2025 ಬೆಂಗಳೂರು

"ನಾಡು ಕಟ್ಟುವ, ಸಂಸ್ಕೃತಿಯನ್ನು ಪುನರುಜ್ಜೀವಿಸುವ ಕೆಲಸವನ್ನು ಕೈಗೆತ್ತಿಗೊಂಡ ಬರಹಗಾರರಲ್ಲಿ ನಾವೆಲ್ಲರು ಒಂದಾಗಿ ...