Date: 28-09-2020
Location: ಬೆಂಗಳೂರು
ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾಲಯ ಕೊಡಮಾಡುವ ‘ಕನ್ನಡ ಕೃಷಿ ಪುಸ್ತಕ ಪ್ರಶಸ್ತಿ’ಗೆ ಪತ್ರಕರ್ತೆ, ಬರಹಗಾರ್ತಿ ಭಾರತಿ ಹೆಗಡೆ ಅವರ ‘ಮಣ್ಣಿನ ಗೆಳತಿ’ ಕೃತಿ ಆಯ್ಕೆಯಾಗಿದೆ.
ಈ ಪ್ರಶಸ್ತಿಯು 10ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 55ನೇ ಸಂಸ್ಥಾಪನಾ ದಿನಾಚರಣೆಯಂದು (ಅ.03) ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಪತ್ರಕರ್ತೆ, ಕವಯತ್ರಿ ಭಾರತಿ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಬೆಂಗಳೂರಿನಲ್ಲಿ ವಾಸವಿದ್ದಾರೆ. ಪ್ರಸ್ತುತ ಸೆಲ್ಕೋ ಫೌಂಡೇಶನ್ ನಲ್ಲಿ ಪ್ರೊಗ್ರಾಮ್ ಮ್ಯಾನೇಜರ್ ಆಗಿದ್ದು, ಸಿನಿಮಾದಲ್ಲಿ ಮಹಿಳೆಯರ ಕುರಿತು ಬರೆದ ಬರಹಗಳ ಸಂಗ್ರಹ ‘ಮೊದಲ ಪತ್ನಿಯ ದುಗುಡ’ ಪುಸ್ತಕವನ್ನು ಪ್ರಕಟಿಸಿದ್ದಾರೆ.
ಬೆಂಗಳೂರು: "ಕೃತಿಯು ರಂಗ ಪ್ರಯೋಗಕ್ಕೆ ತಕ್ಕಂತೆ ಇಲ್ಲ ಎಂದು ವಿಜಯ ಸಿಂಹ ಈ ಕೃತಿಯಲ್ಲಿ ಹೇಳಿದ್ದಾರೆ. ಆದರೆ, ನಾನು...
ಹಾಸನ: ಸಾಹಿತ್ಯ ಮತ್ತು ಸಂಸ್ಕೃತಿಯ ಮಹಾನದಿಯಂತೆ ಹರಿದು, ಜಗತ್ತಿನ ಓದುಗರ ಮನಸ್ಸು ಮೆಚ್ಚಿ, ಕನ್ನಡದ ಗರಿಮೆಯನ್ನು ವಿಶ್ವ...
ಬೆಂಗಳೂರು: 2023ರ ಕರ್ನಾಟಕ ಸಾಹಿತ್ಯ ಅಕಾಡೆಮಿ ವರ್ಷದ ಗೌರವ ಪ್ರಶಸ್ತಿಗೆ ಡಾ. ಸಿ. ವೀರಣ್ಣ, ಡಾ. ಶ್ರೀರಾಮ ಇಟ್ಟಣ್ಣವರ,...
©2025 Book Brahma Private Limited.