ಕಮಲಾ ಹಂಪನಾ ಅವರ ಕುಟುಂಬಕ್ಕೆ ಮತ್ತು ಮಕ್ಕಳಿಗೆ ಮಾತ್ರ ತಾಯಿಯಾಗಿರಲಿಲ್ಲ; ಹನುಮಂತಯ್ಯ

Date: 28-10-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಜನಶಕ್ತಿ ಕೇಂದ್ರ ಹಾಗೂ ನಾಡೋಜ ಡಾ. ಕಮಲಾ ಹಂಪನಾ ಸಾಹಿತ್ಯ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕವಿಗೋಷ್ಠಿ ಹಾಗೂ ನಾಡೋಜ ಡಾ. ಕಮಲಾ ಹಂಪನಾ ದತ್ತಿ ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ 2024 ಅ. 28 ಸೋಮವಾರದಂದು ನಗರದ ನಯನ ರಂಗಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕವಿ, ಮಾಜಿ ಸಂಸದ ಡಾ.ಎಲ್. ಹನುಮಂತಯ್ಯ ಅವರು ಮಾತನಾಡಿ, "ಕಮಲಾ ಹಂಪನಾ ಅವರ ಕುಟುಂಬಕ್ಕೆ ಮತ್ತು ಮಕ್ಕಳಿಗೆ ಮಾತ್ರ ತಾಯಿಯಾಗಿರಲಿಲ್ಲ. ನಮ್ಮೆಲ್ಲರಿಗೂ ತಾಯಿಯಾಗಿದ್ದರು. ನಾನು ಅವರ ಸಂಪರ್ಕಕ್ಕೆ ಬಂದದ್ದು ಬಹಳ ಚಿಕ್ಕ ಹುಡುಗನಿಂದ,ಆಗ ಅವರು ನನ್ನನ್ನು ಪುಸ್ತಕ ಬಿಡುಗಡೆಯ ಕಾರ್ಯಕ್ರಮವೊಂದಕ್ಕೆ ನನ್ನನ್ನು ಕರೆದುಕೊಂಡು ಹೋಗಿದ್ದರು. ಹೀಗೆ ಅವರು ನನ್ನ ಪ್ರತಿಯೊಂದು ಸಾಹಿತ್ಯದ ಜೊತೆಯಲ್ಲೂ ಹೆಜ್ಜೆಯಾಗಿದ್ದರು. ನಾನು ಪುಸ್ತಕದ ಕುರಿತು ಮಾತನಾಡುವಾಗ ಬಹಳಷ್ಟು ಸಲ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಇದೇ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಾಗಲು ಕಾರಣ," ಎಂದು ತಿಳಿಸಿದರು.

ವೇದಿಕೆಯಲ್ಲಿ ಕನ್ನಡ ಜನಶಕ್ತಿ ಕೇಂದ್ರದ ಗೌರವ ಸಲಹೆಗಾರ ಪಿ. ಮಲ್ಲಿಕಾರ್ಜುನ ಅವರು ಉಪಸ್ಥಿತರಿದ್ದರು.

ಕವಿಗೋಷ್ಠಿಯಲ್ಲಿ ಡಾ.ಮಮತಾ ಸಾಗರ್, ಸುಬ್ಬು ಹೊಲೆಯಾರ್, ಹಾಜಿರಾ ಖಾನಂ, ಡಾ. ಲಕ್ಷ್ಮಣ್ ವಿ.ಎ, ಭಾರತಿ ಹೆಗಡೆ, ಜಯಲಕ್ಷ್ಮಿ ಪಾಟೀಲ್, ಸುಜಾತಾ ಕೆ, ಮಧುಮತಿ ಬಿ.ಎಸ್, ಅನ್ನಪೂರ್ಣ ಪದ್ಮಸಾಲಿ ಅವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ದತ್ತಿ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಪ್ರಶಸ್ತಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರು ಹಿರಿಯ ಲೇಖಕ, ಸಂಶೋಧಕ ಡಾ. ಬಾಳಾಸಾಹೇಬ ಲೋಕಾಪುರ ಹಾಗೂ ಸಾಮಾಜಿಕ ಕಾರ್ಯಕರ್ತೆ, ಕಲಾವಿದೆ, ಕವಯಿತ್ರಿ ಚಾಂದಿನಿ ಅವರಿಗೆ ಪ್ರದಾನಿಸಿದರು.

ವಿಶೇಷ ದತ್ತಿ ಉಪನ್ಯಾಸವನ್ನು ಪ್ರಸಿದ್ಧ ಕವಯಿತ್ರಿ ಹಾಗೂ ವಿಮರ್ಶಕಿ ಡಾ. ವಿನಯಾ ಒಕ್ಕುಂದ ಅವರು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ, ಸಂಶೋಧಕ ನಾಡೋಜ ಹಂಪ ನಾಗರಾಜಯ್ಯ ಅವರು ವಹಿಸಿದ್ದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್. ಪುಪ್ಪ ಅವರು ಆಶಯ ನುಡಿಗಳನ್ನಾಡಿದರು.

 

 

MORE NEWS

'ಬಲರಾಮನ ದಿನಗಳು’ ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿ

02-01-2025 ಬೆಂಗಳೂರು

ಕಳೆದ ವರ್ಷ ‘ಕರಟಕ ದಮನಕ’ ಚಿತ್ರದಲ್ಲಿ ಕಾಣಿಸಿಕೊಂಡು ಮರೆಯಾಗಿದ್ದ ಬಹುಭಾಷಾ ನಟಿ ಪ್ರಿಯಾ ಆನಂದ್‍, ಇ...

ಶಿವರಾಜಕುಮಾರ್ ಆಪರೇಷನ್‍ ಯಶಸ್ವಿ: ಅವರೀಗ ಕ್ಯಾನ್ಸರ್ ಮುಕ್ತ

02-01-2025 ಬೆಂಗಳೂರು

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ಶಿವರಾಜಕುಮಾರ್, ಇದೀಗ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಹೊಸ ವರ್ಷದ ಮೊದಲ ದಿನ ...

2017 ರಿಂದ 2023 ಅವಧಿಯ ಅಭಿವೃದ್ಧಿ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳು ಪ್ರಕಟ

01-01-2025 ಬೆಂಗಳೂರು

ಬೆಂಗಳೂರು: ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕ...