ಇಂದು ಕನ್ನಡ ಕವಿ- ಕಾವ್ಯ-ಕಥೆ ಸಂಸ್ಕೃತಿ ಅಧ್ಯಯನ ಕಮ್ಮಟ

Date: 21-10-2024

Location: ಬೆಂಗಳೂರು


ಕಲಬುರಗಿ : ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಧಾನಸೌಧ ಬೆಂಗಳೂರು ಮತ್ತು ಶ್ರೀ ಶೈಕ್ಷಣಿಕ ಸಾಮಾಜಿಕ ಆರ್ಥಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ರಾಜ್ಯಮಟ್ಟದ ಒಂದು ದಿನದ ಕನ್ನಡ ಕವಿ- ಕಾವ್ಯ-ಕಥೆ ಸಂಸ್ಕೃತಿ ಅಧ್ಯಯನ ಕಮ್ಮಟವನ್ನು 21.10.2024 ರಂದು ನಗರದ ವಿಶ್ವನಾಥ ರಡ್ಡಿ ಮುದ್ನಾಳ್ ಪದವಿ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ.

ಉದ್ಘಾಟಕರಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾನ್ಯ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಯವರು ಆಗಮಿಸಲಿ‌ದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದ ಪ್ರಕಾಶಕರಾದ ಬಸವರಾಜ್ ಕೊನೇಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾನ್ಯ ಸದಸ್ಯ ವಿರೂಪಣ್ಣ ಕಲ್ಲೂರ, ವಿಭಾಗಿಯ ಪತ್ರಾಗಾರ ಕಚೇರಿ ಹಿರಿಯ ಸಹಾಯಕ ನಿರ್ದೇಶಕ ಡಾ.ವೀರಶೆಟ್ಟಿ ಗಾರಂಪಳ್ಳಿ ಆಗಮಿಸಲಿರುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವನಾಥ ರಡ್ಡಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಸವರಾಜ ಮಠಪತಿ ವಹಿಸಲಿದ್ದು, ಕಾವ್ಯ ರಚನೆ ಮತ್ತು ವಿನ್ಯಾಸ ಕುರಿತು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಡಾ. ಮಹದೇವ ಬಡಿಗೇರರವರು ವಿಷಯ ಮಂಡಿಸಲಿದ್ದಾರೆ.

ಭಾಷಾ ಬಳಕೆ ವಿವಿದ ಆಯಾಮಗಳ ಕುರಿತು ಡಾ.ಕಾವ್ಯಶ್ರೀ ಮಹಾಗಾoಕರ ಅವರು ವಿಷಯ ಮಂಡಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಸ್ವಾಯತ ಮಹಾ ವಿದ್ಯಾಲಯದ ಪ್ರಾಧ್ಯಾಪಕರದ ಸುರೇಂದ್ರಕುಮಾರ ಕೇರಮಗಿ ಅವರ ವಹಿಸಲಿರುವವರು. ಗೋಷ್ಠಿಯಲ್ಲಿ ಸಹ ಪ್ರಾಧ್ಯಾಪಕರಾದ ಡಾ. ನಾಗಪ್ಪ ಗೋಗಿಯವರು ಪ್ರತಿಕ್ರಿಯೆ ವ್ಯಕ್ತಪಡಿಸಲಿದ್ದಾರೆ.

ಮಧ್ಯಾಹ್ನ ನಡೆಯುವ ಎರಡನೇ ಗೋಷ್ಠಿಯಲ್ಲಿ ಭಾಷಾಂತರ ಕಾವ್ಯ-ಕಥೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಬಸವರಾಜ ಜವಳಿ ವಿಷಯ ಮಂಡಿಸಲಿದ್ದು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಚಂದ್ರಕಲಾ ಬಿದರಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೀದರ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕದ ಡಾ. ರಾಮಚಂದ್ರ ಗಣಾಪುರ ಪ್ರತಿಕ್ರಿಯೆ ವ್ಯಕ್ತಪಡಿಸಲಿದ್ದಾರೆ.

ಸಂಜೆ ಮೂರು ಮೂವತ್ತಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾನ್ಯ ಸದಸ್ಯರಾದ ಸಿದ್ದರಾಮ ಹೊನಕಲ್ ಅವರು ಕನ್ನಡ ಪುಸ್ತಕ ಓದು ಮತ್ತು ವಿಮರ್ಶೆ ಕುರಿತು ವಿಷಯ ಮಂಡಿಸಿ ಸಮಾರೋಪ ಭಾಷಣ ಮಾಡಲಿದ್ದು, ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಅಪ್ಪಾರಾವ ಅಕ್ಕೋಣೆ ಅಧ್ಯಕ್ಷತೆ ವಹಿಸಲಿರುವರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾನ್ಯ ಕಾರ್ಯದರ್ಶಿ ಡಾ. ಸಂತೋಷ್ ಹಾನಗಲ್ಲ, ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಬಿ.ಎಚ್ ನಿರಗುಡಿ, ಕಮಟ್ಟದ ಸಂಚಾಲಕರಾದ ಡಾ. ಪ್ರೇಮಾ ಅಪಚಂದ ಉಪಸ್ಥಿತರಿರುವರು.

 

 

MORE NEWS

‘ಸಾಹಿತ್ಯ ಬಂಗಾರ ಪ್ರಶಸ್ತಿ’ ಗೆ ಕುಂ.ವಿ, ಸುಶೀಲಮ್ಮ, ಪ್ರತಿಭಾ ಆಯ್ಕೆ

22-10-2024 ಬೆಂಗಳೂರು

ಬೆಂಗಳೂರು: ಎಸ್. ಬಂಗಾರಪ್ಪ ವಿಚಾರ ವೇದಿಕೆಯಿಂದ ಕೊಡಮಾಡುವ 2024ನೇ ಸಾಲಿನ ’ಸೇವಾ ಬಂಗಾರ ಪ್ರಶಸ್ತಿ’ ಗೆ ...

ಆಮೂರ ಅವರು ಬರವಣಿಗೆಯ ಬದುಕನ್ನು ತಪಸ್ಸಿನಂತೆ ಸಾಗಿಸಿದರು; ರಾಘವೇಂದ್ರ

21-10-2024 ಬೆಂಗಳೂರು

ಧಾರವಾಡ: ಜಿ.ಬಿ. ಜೋಶಿ ಮೆಮೊರಿಯಲ್‌ ಟ್ರಸ್ಟ್‌ ಹಾಗೂ ಡಾ.ಜಿ.ಎಸ್ ಆಮೂರ ಜನ್ಮ ಶತಮಾನೋತ್ಸವ ಸಮಿತಿಯಿಂದ &lsq...

‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಸಮಾರಂಭ

21-10-2024 ಬೆಂಗಳೂರು

ಬೆಂಗಳೂರು: ಶ್ರೀಮಧ್ವ ಜಯಂತಿ ಅಂಗವಾಗಿ ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಿಗೆ ...