ಹೊಸತನಕ್ಕೆ ತೆರೆದುಕೊಂಡ ಜಾಗತೀಕರಣಕ್ಕೆ ರೇಷ್ಮೆ ಬಟ್ಟೆ ಕನ್ನಡಿಯಾಗಿ ನಿಲ್ಲುತ್ತದೆ


"ಈ ಕಾದಂಬರಿಯೂ ಐದು ಅಧ್ಯಾಯ ಹೊಂದಿದ್ದು. ಎರಡು ಕಥೆಗಳು ಜೊತೆಯಾಗಿ ನಡೆಯುತ್ತಾ ಕೊನೆಯಲ್ಲಿ ಬೆಸೆಯುವ, ಜಾಗತೀಕರಣಕ್ಕೆ ತೆರೆದುಕೊಂಡ ಇಂದಿನ ನಾವು ಉಡುವ ಬಟ್ಟೆಯ ಹಿಂದಿನ ಐತಿಹಾಸಿಕ ಇತಿಹಾಸವನ್ನು ಯುದ್ಧ ಹೊರತಾದ ಆದ್ರೆ ಯುಗ ಸಂಘರ್ಷಕ್ಕೆ ಇಡಾದ ನವಿರಾದ ಸನ್ನಿವೇಶಗಳನ್ನು ಹೊಂದಿದೆ," ಎನ್ನುತ್ತಾರೆ ಜಯಂತ್ ದೇಸಾಯಿ. ಅವರು ವಸುಧೇಂದ್ರ ಅವರ ‘ರೇಷ್ಮೆ ಬಟ್ಟೆ’ ಕೃತಿ ಕುರಿತು ಬರೆದ ವಿಮರ್ಶೆ.

ಭೌಗೋಳಿಕವಾಗಿ ನಾವು ಅನೇಕ ನಾಗರಿಕತೆಗಳನ್ನು ಬೆಳೆಸಿಕೊಂಡೆ ಬೆಳೆದಿದ್ದೇವೆ. ಇವತ್ತಿನ ನಮ್ಮ ಆಚರಣೆ ಪದ್ಧತಿ ನಾವು ರೂಢಿಸಿಕೊಂಡು ಬಂದ ಧರ್ಮದ ಮತ್ತದರ ನಾಗರಿಕತೆಯಲ್ಲಿ ಕಲಿತಿದ್ದೇವೆ. ಜಾಗತೀಕರಣಕ್ಕೆ ಸಿಕ್ಕು ಪದ್ಧತಿಗಳಲ್ಲಿ ಧರ್ಮದಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಅಲ್ಪ ಸ್ವಲ್ಪ ಬದಲಾವಣೆಗಳಿಗೆ ಒಗ್ಗಿಕೊಂಡು ಮುನ್ನಡೆದಿದ್ದೇವೆ. ಇಂತಹ ಬದಲಾವಣೆ ಎಲ್ಲ ಧರ್ಮದಲ್ಲಿ ಎಲ್ಲ ವರ್ಣಿಯರಲ್ಲಿ ಎಲ್ಲ ಕಾಲದಲ್ಲೂ ಸ್ವಲ್ಪ ಸ್ವಲ್ಪ ತನ್ನ ವಾಸ್ತವಿಕ ನೆಲೆಗಟ್ಟನ್ನು ಬಿಡಿಸಿಕೊಂಡೆ ಬಂದಿರುತ್ತವೆ. ಇಂತಹ ಬದಲಾವಣೆಗೆ ಮೂಲಭೂತವಾಗಿ ಕಾರಣ ಯಾರು ಅಥವಾ ಕಾರಣವಾದರೂ ಏನು? ಅಂತ ಹುಡುಕುತ್ತಾ ಹೊರಟಾಗ ನಮಗರಿವಿಲ್ಲದೆ ಹೊಸತನಕ್ಕೆ ಹೊಸ ಆಸೆಗಳಿಗೆ ಹೊಸ ಆಕಾಂಶೆಗೆ ನಾವಾಗಿ ತೆರೆದುಕೊಂಡು ನಿಂತಿರುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ.

ಇಂಥ ಬದಲಾವಣೆಗೆ ಒಂದನೆಯ ಶತಮಾನ ನಾಂದಿ ಹಾಡಿದ್ದು ಎರಡನೆಯ ಶತಮಾನದಲ್ಲಿನ ಮುನ್ನುಡಿಗೆ ಕಾರಣವೆಂದರೆ ಪೂರ್ವದ ಯವನವರ ನಾಡಿನ ಅಂದರೆ ಗ್ರೀಕರು ನಡುವಿನ ಪೃತುಗಳ ನಾಡು(ಪಾರ್ಥಿಕರು)ಕೊಂಡಿಯಾಗಿ ಬೆಸೆಯುವ ಹಿಮಾಚ್ಛಾದಿತ ಪಶ್ಚಿಮದ ಚೀನಾದವರೆಗೂ ತೆರೆದ "ವ್ಯಾಪಾರದ ದಾರಿ" ಹಾಗೆ ನುಣುಪಾದ ಒನಪಿನ "ರೇಷ್ಮೆ ಬಟ್ಟೆ" .

ಕೆಲವು ಐತಿಹಾಸಿಕ ಕೃತಿಗಳ ಅವಲೋಕನ ಮಾಡಿದ ಅನುಭವದಲ್ಲಿ ನೋಡಿದಾಗ "ಸಿಲ್ಕ್ ರೋಡ್" ಅನೇಕ ದೇಶಗಳನ್ನು ಅಲ್ಲಿನ ವ್ಯಾಪಾರವನ್ನು, ವಹಿವಾಟನ್ನು ಅನೇಕ ಆಚರಣೆಗಳನ್ನು ಮತ್ತು ನಾಗರಿಕತೆ ಉಳಿವನ್ನು ಬೆಸೆದಿರಬೇಕಾದ ಏಕ್ ಮಾತ್ರ ಕೂಡು ರಸ್ತೆ ಅದು. ಅದು ಅನೇಕ ಅನೇಕ ದೇಶಗಳ ಸಾರ್ವಭೌಮತೆಯನ್ನು ಯುದ್ಧಗಳ ಭೀಕರತೆಯನ್ನು ಒಳಗೊಂಡಿತ್ತು. ಅಂತವುಗಳ ನಡುವೆ ಸಿಕ್ಕ ಅಲ್ಲಿನ ಜನರ, ಕಾಡು ಜನರ, ಚಿಕ್ಕ ಪುಟ್ಟ ದೇಶಗಳ ನಾಗರಿಕರ ಪಡಿ ಪಾಟಲು ಎಂತಹದ್ದು? ಒತ್ತಾಯಪೂರ್ವಕ ಬದಲಾವಣೆಗೆ ಒಗ್ಗಿದ ಅವರ ಬದುಕಿನ ದುಖಃ ಎಂತಹದ್ದು? ಅನ್ನೋದನ್ನು ವಸುಧೇಂದ್ರ ಅವರು ರೇಷ್ಮೆ ಬಟ್ಟೆಯಾಗಿ ಅಂತಹದ್ದೇ ಸಿಲ್ಕ್ ಬೋರ್ಡ್ ನ ದಾರುಣ ಬದುಕಿನ ಹೊಂದಿಯಾಗದ ಆದರೂ ಹೊಂದಿಕೊಳ್ಳಲೇ ಬೇಕಾದ ಬದುಕಿನ ಬವಣಿಗೆ ತೆರೆದುಕೊಳ್ಳಬೇಕಾದ ಸನ್ನಿವೇಶಗಳನ್ನು. ಹಲವು ಧರ್ಮಗಳ.ಹಲವು ದೇಶಗಳ ಬದುಕನ್ನು ಕಾದಂಬರಿಯಾಗಿಸಿದ್ದಾರೆ.

ಈ ಕಾದಂಬರಿಯೂ ಐದು ಅಧ್ಯಾಯ ಹೊಂದಿದ್ದು. ಎರಡು ಕಥೆಗಳು ಜೊತೆಯಾಗಿ ನಡೆಯುತ್ತಾ ಕೊನೆಯಲ್ಲಿ ಬೆಸೆಯುವ, ಜಾಗತೀಕರಣಕ್ಕೆ ತೆರೆದುಕೊಂಡ ಇಂದಿನ ನಾವು ಉಡುವ ಬಟ್ಟೆಯ ಹಿಂದಿನ ಐತಿಹಾಸಿಕ ಇತಿಹಾಸವನ್ನು ಯುದ್ಧ ಹೊರತಾದ ಆದ್ರೆ ಯುಗ ಸಂಘರ್ಷಕ್ಕೆ ಇಡಾದ ನವಿರಾದ ಸನ್ನಿವೇಶಗಳನ್ನು ಹೊಂದಿದೆ. ಕಾನಿಷ್ಕ ಮಹಾರಾಜನ ಆಡಳಿತ ಕೆ ಒಳಪಟ್ಟ ತಕ್ಷಶಿಲಾ ಭಾರತ ಪಾಕಿಸ್ತಾನ ಅಫಘಾನಿಸ್ಥಾನ ಇರಾನ ಹಿಡಿದು ರಸ್ತೆ ಬೆಸೆಯುವ ಚೀನಾ ವರೆಗಿನ ದೇಶಗಳು ಇಲ್ಲಿ ಸಮರಖಂಡ. ಸೋಗ್ದ, ಯುವನರ ನಾಡು ಪೃಥುಗಳ ನಾಡು.ಮರಭೂಮಿ. ಕಾಡು ಜನ ಹೂಣರ ಕಥೆ ಇಲ್ಲಿವೆ. ಕಾದಂಬರಿ ಓದುತ್ತಾ ಹೋದಂತೆ ಪ್ರತಿ ಅಧ್ಯಾಯದಲ್ಲಿ ಅಲ್ಲಿನ ವಿಶೇಷ ಮುಗ್ಧ ಜನರು ಮನಸಿನಲ್ಲಿ ನೆಲೆಯಾಗುತ್ತಾರೆ.

ಕಾದಂಬರಿಯ ಹವಿನೇಮ, ಜ್ಞಾನಸೇನರು, ಮಧುಮಾಯ, ಮಿತ್ರವಂದಕ, ವಾನ್ ಲೀಹ್ವ ಇಷ್ಟ ಆಗುತ್ತಾರೆ. ಮಿತ್ರವಂದಕ ಮಾಧುಮಾಯ ಪ್ರೀತಿ. ಜ್ಞಾನಸೇನರ ತೂಕದ ವ್ಯಕ್ತಿತ್ವ, ಸಿಖ ನೇಮನ ವ್ಯಕ್ತಿತ್ವ, ನೀಲಿ ಕಲ್ಲುಗಳು, ದೈವಗಳು, ಖರೋಷ್ಠಿ ಲಿಪಿ, ಲಿಪಿಗಳ ಉಗಮ, ಹವಿ ನೇಮನ ಮುಗ್ಧತೆ, ಸಗನನೇಮಿಯ ದಿಟ್ಟಣತ, ಬುದ್ದಮಿತ್ರ ನ ನಡೆ.ಕಾದಂಬರಿಯನ್ನು ಬಹು ಕಾಲ ನೆನಪಿನಲ್ಲಿ ಉಳಿಯುವಂತೆ ಮಾಡುತ್ತವೆ.

ವ್ಯಾಪಾರದ ಹಾದಿ ಹಲವು ಧರ್ಮದ ಜ್ಞಾನ ನೀಡುತ್ತದೆ. ಜುರಾತೃಷ್ಟ, ಕಾಂಗ್ಫ್ಯೂಜಿ. ಕೊನೆಗೆ ಬೌದ್ಧ ಧರ್ಮದ 'ತಥಾಗತ"ಅಷ್ಟೇ ಅಲ್ಲದೆ ಇಡೀ ಹಾದಿ ಜನರ ಬದುಕನ್ನು ಬದಲಾವಣೆ ಅಷ್ಟೇ ಅಲ್ಲ ಧರ್ಮದ ಬದಲಾವಣೆಗೆ ಕೂಡ ಸಾಕ್ಷಿಯಾಗಿ ನಿಲ್ಲುತ್ತದೆ.

ಪಾರ್ಥಿಕರ ಉತ್ತಮ ಚಿಂತನೆ, ಉತ್ತಮ ನಡೆ, ಉತ್ತಮ ನುಡಿ, ಸಿದ್ಧಾಂತ, ಕಾಂಗ್ಫೂಜಿ ಗಳ ಯಾನ್ ಯಿನ್ ತತ್ವ ತಥಾಗತ ನ ಶೋಕ ತಗ್ಗಿಸುವ ಶಾಖ್ಯಗಳ ನಡುವೆ ಕೂಡ ಬದಲಾವಣೆ "ವ್ಯಾಪಾರದ ದಾರಿ" ಮಾಡುತ್ತದೆ.

ನಡುವಿನ ಅಧ್ಯಾಯಗಳ ದೀರ್ಘ ವಿಸ್ತಾರ ಅಲ್ಲಲ್ಲಿ ಕಾದಂಬರಿ ಓದಿಗೆ ತಡೆ ಹಿಡಿದರು. ಕಾದಂಬರಿಯ ಬೇಸರ ಮೂಡಿಸಿದರು ಕೊನೆಯ ಅಧ್ಯಾಯ ಅವೆಲ್ಲವನ್ನೂ ತೊಡೆದು ಹಾಕಿ ನಾವು ಹೊಸತನಕ್ಕೆ ತೆರೆದುಕೊಂಡ ಜಾಗತೀಕರಣಕ್ಕೆ ರೇಷ್ಮೆ ಬಟ್ಟೆ ಕನ್ನಡಿಯಾಗಿ ನಿಲ್ಲುತ್ತದೆ.

- ಜಯಂತ್ ದೇಸಾಯಿ
ಯಾದಗಿರಿ

MORE FEATURES

ನಾವು ಹುಟ್ಟಿ ಬೆಳೆದ ವಾತಾವರಣದ ಪ್ರಭಾವ ನಮ್ಮ ಮೇಲೆ ಬಹಳಷ್ಟು ಇರುತ್ತದೆ

18-11-2024 ಬೆಂಗಳೂರು

“ಈ ಪುಸ್ತಕದಲ್ಲಿರುವ ಕೆಲವು ಕಥೆಗಳು ಹಾಗೆ ಬ್ಲಾಗ್ ರೂಪದಲ್ಲಿ ಬರೆದಂತಹವು. ಕೆಲವು ಕಥೆಗಳು ಮತ್ತೆ ಮತ್ತೆ ಕಾಡುವಂ...

ದಾಸಕೂಟದ ದಳವಾಯಿ ‘ಶ್ರೀ ಕನಕದಾಸರು’

18-11-2024 ಬೆಂಗಳೂರು

“ಕನಕದಾಸರು ಸ್ಥಾನಮಾನಗಳ ದೃಷ್ಟಿಯಿಂದ ಸಾಕಷ್ಟು ಶ್ರೀಮಂತ ಕುಟುಂಬವಾದರೂ ಹುಟ್ಟಿನ ದೃಷ್ಟಿಯಿಂದ ಸಮಾಜದ ಕೆಳವರ್ಗಕ್...

ನಮ್ಮ ನೆಲದ ಶ್ರೇಷ್ಠ ದಾರ್ಶನಿಕ ಕವಿ - ಕನಕದಾಸರು

18-11-2024 ಬೆಂಗಳೂರು

"ಈಗ ಕನಕದಾಸರ ಜನ್ಮಭೂಮಿ ಮತ್ತು ಕರ್ಮಭೂಮಿ ಇವೆರಡು ಪುಣ್ಯಸ್ಥಳಗಳಾಗಿ, ಆಧ್ಯಾತ್ಮದ ಕ್ಷೇತ್ರಗಳಾಗಿ ಉಳಿಯುವುದರ ಜೊತ...