"ಕನಸುಗಳನ್ನು ಎಲ್ಲರೂ ಕಾಣುತ್ತಾರೆ. ಅದಿಕ್ಕೆ ಕಾಸು ಕೊಡ್ಬೇಕಿಲ್ಲ ನೋಡಿ. ಆದ್ರೆ, ಆ ಕನಸಿನ ಬೆನ್ನು ಹತ್ತಿ, ಜಿದ್ದಿನಿಂದ ಹೋರಾಡಿ ಅವುಗಳಿಗೆ ಜೀವ ಕೊಡುವವರು ಎಷ್ಟು ಜನರಿದ್ದಾರೆ? ಬಹಳ ಕಮ್ಮಿಯೇ ಬಿಡಿ. ಕನಸು ನನಸಾಗದಿರಲು ಒಬ್ಬಬ್ಬರಿಗೂ ಒಂದೊಂದು ನೆಪ. ದುಡ್ಡಿಲ್ಲ, ಟೈಮಿಲ್ಲ, ಮನೆಯವರ ಸಪೋರ್ಟ್ ಇಲ್ಲ, ದಾರಿ ಕಾಣ್ತಿಲ್ಲ..ಇತ್ಯಾದಿ ಇತ್ಯಾದಿ..," ಎನ್ನುತ್ತಾರೆ ಕಾರ್ತಿಕ್ ಕೃಷ್ಣ. ಅವರು ಪೂರ್ಣಿಮಾ ಮಾಳಗಿಮನಿ ಅವರ ‘ಇಜಯಾ’ ಕೃತಿ ಕುರಿತು ಬರೆದ ವಿಮರ್ಶೆ.
ಆದರೂ ಹೆಣಗಳು ತುಂಬಾ ಭಾರ ಇರುತ್ವೆ ಅಲ್ವಾ?
ಯಾಕೆ ಗೊತ್ತಾ? ನನಸಾಗದೆ ಇರೋ ಎಷ್ಟೊಂದು ಕನಸುಗಳು ಎದೆಯಲ್ಲೇ ಉಳಿದುಕೊಂಡು ಬಿಟ್ಟಿರ್ತವಲ್ಲ? ಅದುಮಿಟ್ಟ ಕನಸುಗಳಿಗಿಂತ ಭಾರ ಯಾವುದಿದೆ ಹೇಳಿ?
ಕನಸುಗಳನ್ನು ಎಲ್ಲರೂ ಕಾಣುತ್ತಾರೆ. ಅದಿಕ್ಕೆ ಕಾಸು ಕೊಡ್ಬೇಕಿಲ್ಲ ನೋಡಿ. ಆದ್ರೆ, ಆ ಕನಸಿನ ಬೆನ್ನು ಹತ್ತಿ, ಜಿದ್ದಿನಿಂದ ಹೋರಾಡಿ ಅವುಗಳಿಗೆ ಜೀವ ಕೊಡುವವರು ಎಷ್ಟು ಜನರಿದ್ದಾರೆ? ಬಹಳ ಕಮ್ಮಿಯೇ ಬಿಡಿ. ಕನಸು ನನಸಾಗದಿರಲು ಒಬ್ಬಬ್ಬರಿಗೂ ಒಂದೊಂದು ನೆಪ. ದುಡ್ಡಿಲ್ಲ, ಟೈಮಿಲ್ಲ, ಮನೆಯವರ ಸಪೋರ್ಟ್ ಇಲ್ಲ, ದಾರಿ ಕಾಣ್ತಿಲ್ಲ..ಇತ್ಯಾದಿ ಇತ್ಯಾದಿ.. ಆದರೆ ಕಂಡ ಕನಸು ನನಸಾದರೆ ಮಾತ್ರ ಮನುಷ್ಯ ಜನ್ಮ ಸಾರ್ಥಕವ? ಅದರಿಂದ ಮಾತ್ರ ಖುಷಿ ಸಿಗುವುದಾ? happiness is a perspecive ಅನ್ನೋ ಹಾಗೆ ಕೆಲವರಿಗೆ ದಿನಪೂರ್ತಿ ದುಡಿದು ಕಣ್ತುಂಬ ನಿದ್ದೆ ಮಾಡಿದರೆ ಸಾಕು ಅದೇ ಮಹಾದಾನಂದ, ಇನ್ನು ಕೆಲವರಿಗೆ ಬೆಳಿಗ್ಗೆ ಎದ್ದು ಮನೆಯೆಲ್ಲ ಕ್ಲೀನ್ ಮಾಡಿ..ಅಡುಗೆ ಮಾಡಿ..ಭೇಷ್ ಎನಿಸಿಕೊಂಡರೆ ಪರಮಾನಂದ. ಕೆಲವರಿಗೆ ತಾವು ಬರೆದ ಕಥೆ ಕವನ ಪೇಪರಿನಲ್ಲೋ, ಮ್ಯಾಗಝೀನಿನಲ್ಲೋ ಬಂದಾಗ ಖುಷಿ ಸಿಕ್ಕರೆ ಇನ್ನು ಕೆಲವರಿಗೆ ಬಾಸ್ ಕೈಯಲ್ಲಿ ಹೊಗಳಿಸಿಕೊಂಡರೆ ನೆಮ್ಮದಿಯಾಗುತ್ತದೆ.
ನನ್ನ ಪ್ರಕಾರ ಇವೆಲ್ಲಾ ಕನಸುಗಳೇ. ಒಳ್ಳೆ ಹೆಂಡತಿಯಾಗಬೇಕು, ಹಾರ್ಡ್ ವರ್ಕಿಂಗ್ ಪ್ರೊಫೆಷನಲ್ ಆಗಬೇಕು, ಕವಿಯಾಗಬೇಕು, ಪುಸ್ತಕ ಬರಿಬೇಕು, ದುಡ್ಡು ಮಾಡಬೇಕು, ದಿನಕ್ಕೆ ಒಂಬತ್ತು ಗಂಟೆ ನಿದ್ದೆ ಮಾಡಬೇಕು..it may be anything. ಆದರೆ ಅವೆಲ್ಲವೂ ಒಂದು ಬೌಂಡರಿಯೊಳಗಿದ್ದರೆ ಚೆನ್ನ. ತನ್ನ ಖುಷಿಗೋಸ್ಕರ ಜೊತೆಗಿದ್ದವರ ನೆಮ್ಮದಿಯನ್ನು ಕಸಿದುಕೊಂಡರೆ ಎನುಪಯೋಗ?
ಪೂರ್ಣಿಮಾ ಮಾಳಗಿಮನಿ ಅವರು ತಮ್ಮ ಇಜಯಾ ಕಾದಂಬರಿಯಲ್ಲಿ ಕನಸು ಹಾಗೂ ಅದನ್ನು ಸಾಕಾರಗೊಳಿಸುವಾಗಿನ ಸಂಘರ್ಷವನ್ನು ಬಹಳ ವಿಭಿನ್ನವಾಗಿ ಚಿತ್ರಿಸಿದ್ದಾರೆ. ಇಜಯಾ ಹಾಗೂ ಮಂಜನ ನಡುವಿನ ಸಂಭಾಷಣೆಯನ್ನು ಮತ್ತೆ ಮತ್ತೆ ಓದಿ ಆಸ್ವಾದಿಸಬೇಕು. ಕಾದಂಬರಿಯ ಮೊದಲ ಅಧ್ಯಾಯ ಓದುತ್ತಾ ತಲೆ ಧಿಮ್ಮೆಂದರೆ, ಚೂರು ಸಹಿಸಿಕೊಂಡು, ಕಾದಂಬರಿ ಪೂರ್ತಿ ಆದ ಮೇಲೆ ಮತ್ತೊಮ್ಮೆ ಓದಿ. It will hit differently. ಒಂದೇ ಸಾಲಲ್ಲಿ ಹೇಳೋದಾದರೆ, “ಇಜಯಾ” ಮನಮುಟ್ಟುತ್ತಾಳೆ..ಮಂಜ ಕನಸು ಕಾಣುವಂತೆ ಪ್ರೇರೇಪಿಸುತ್ತಾನೆ.
ನಿಮ್ಗೂ ಏನಾದ್ರೂ ಕನಸುಗಳಿವೆಯೇ? ಹಾಗಾದ್ರೆ ಇಜಯಾ ಕಾದಂಬರಿಯನ್ನು ತಪ್ಪದೇ ಓದಿ!
- ಕಾರ್ತಿಕ್ ಕೃಷ್ಣ
"ಈ ಪುಸ್ತಕ ನನಗೆ ಓದಿನ ಸುಖವನ್ನಷ್ಟೇ ಕೊಡಲಿಲ್ಲ. ಬದಲಾಗಿ ಅವಶ್ಯವಾಗಿ ತಿಳಿಯಲೇ ಬೇಕಾದ ಸಂಗತಿಗಳನ್ನು ತಿಳಿಸಿದೆ, ...
"ಹೆಣೆದಿದ್ದಾರೆ. ಮೂರು ತಲೆಮಾರಿನ ಜನರ ಆಲೋಚನೆಗಳು, ಚಿಂತನೆಗಳು, ಮನಸ್ಥಿತಿ, ಕಾರ್ಯವೈಖರಿಗಳನ್ನು ತೆರೆದಿಡುತ್ತಾ ...
"ಬರಹಗಾರ ತಾನು ಎದ್ದು ಕಾಣೋದಕ್ಕಿಂತ ಹಿಂದಿನವರು ಸೃಷ್ಟಿಸಿದ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಬರೆಯುವುದೇ ಮುಖ...
©2025 Book Brahma Private Limited.