ಇಡೀ ಪುಸ್ತಕದ ತುಂಬ ನಮ್ಮೂರಿನ ಪಾತ್ರಗಳಿವೆ


"ಮಾನವೀಯ ಮೌಲ್ಯಗಳಿಗೆ ದನಿಯಾದ ಈ ಕಥೆಗಳಿಗೆ ಒಮ್ಮೆ ಜೀವ ಸವರಿ, ಝಲ್ಲೆನಿಸಿಬರುವ ಶಕ್ತಿಯಿದೆಯೆಂದರೆ ಅತಿಶಯೋಕ್ತಿಯಲ್ಲ. ಹದವಾದ ನಿರೂಪಣೆ, ಬೇಕಷ್ಟು ಮಾತುಕತೆ, ಅತಿರಂಜಿತವಲ್ಲದ ಪಾತ್ರಗಳು ಉಸಿರಾಡಿದ ನೋವು, ಆ ನೋವು ತಂದ ನಿರ್ಧಾರಗಳನ್ನು ಹಿತವಾಗಿ ದಾಟಿಸಿದ್ದು ಸಂಕಲನದ ಶಕ್ತಿ," ಎನ್ನುತ್ತಾರೆ ಕವಿತಾ ಹೆಗಡೆ ಅಭಯಂ. ಅವರು ಶುಭಶ್ರೀ ಭಟ್ ಅವರ “ಬಿದಿಗೆ ಚಂದ್ರಮನ ಬಿಕ್ಕು” ಕೃತಿ ಕುರಿತು ಬರೆದ ಅನಿಸಿಕೆ.

ಕರಾವಳಿ ಮತ್ತು ಮಲೆನಾಡಿನ ಕೊಂಡಿಯ ಹಾಗಿರುವ ಕಥೆಗಾತಿ ಶುಭಶ್ರೀ ಭಟ್ ಅವರ ಹೊಸ ಕಥಾ ಸಂಕಲನದ ಕಥೆಗಳನ್ನು ಓದುತ್ತ ನಾನೂ ಊರಿನ ಗಂಧವನ್ನು ಎಷ್ಟು ಚೆಂದವಾಗಿ ಹರಡಿದ್ದಾರಲ್ಲಾ ಎಂದು ಸೋಜಿಗಪಟ್ಟೆ. ಇಡೀ ಪುಸ್ತಕದ ತುಂಬ ನಮ್ಮೂರಿನ ಪಾತ್ರಗಳು ಬೇರೆ ಹೆಸರಲ್ಲಿ ಜೀವಂತವಾಗಿ ಬಂದು ತಮ್ಮ ಹೊಸ ಕಥೆ ಹೇಳಿ ಹೋದವು. ಅಲ್ಲಿಯ ಭಾಷೆ, ಜೀವನ ಕ್ರಮ, ಸಂಸ್ಕೃತಿ ಎಲ್ಲವನ್ನೂ ಅಚ್ಚುಕಟ್ಟಾಗಿ ಕಥೆಯೊಳಗೆ ಹೆಣೆದಿಟ್ಟದ್ದು ಕಥೆಗಾತಿಯ ಜಾಣ್ಮೆ.

ಮಾನವೀಯ ಮೌಲ್ಯಗಳಿಗೆ ದನಿಯಾದ ಈ ಕಥೆಗಳಿಗೆ ಒಮ್ಮೆ ಜೀವ ಸವರಿ, ಝಲ್ಲೆನಿಸಿಬರುವ ಶಕ್ತಿಯಿದೆಯೆಂದರೆ ಅತಿಶಯೋಕ್ತಿಯಲ್ಲ. ಹದವಾದ ನಿರೂಪಣೆ, ಬೇಕಷ್ಟು ಮಾತುಕತೆ, ಅತಿರಂಜಿತವಲ್ಲದ ಪಾತ್ರಗಳು ಉಸಿರಾಡಿದ ನೋವು, ಆ ನೋವು ತಂದ ನಿರ್ಧಾರಗಳನ್ನು ಹಿತವಾಗಿ ದಾಟಿಸಿದ್ದು ಸಂಕಲನದ ಶಕ್ತಿ.

ಗೆಜ್ಜಪೂಜೆ ಕಥೆಯ ಕನಸು ನನಸಿನ ಚಿತ್ರಣ, ಗೇರುಕಾನು ಕುಟ್ಟುವಿನ ವಸ್ತು, ಬಿದಿಗೆ ಚಂದ್ರಮನ ಬಿಕ್ಕು ಕಥೆಯ ನಾಯಕಿ, ಹಗಲುವೇಷದ ವಿಶೇಷ ನಿರೂಪಣೆ, ದೇಹ ದಾನದ ಸಂದೇಶ, ಕಾಡುವ ಹುಡುಗನ ಅಂತ್ಯ…. ಇಲ್ಲಿಯ ಕೆಲವು ಕಾಡುವ ಅಂಶಗಳು.

ಉತ್ತಮ ಭಾಷಾಬಳಕೆಯಲ್ಲಿ ಎತ್ತಿದ ಕೈಯಾದ, ಸಹಜವಾದ ನಿರೂಪಣೆಯ ಕಥೆಗಳ ಒಡತಿ ಶುಭಶ್ರೀ ಮುಂದಿನ ದಿನಗಳಲ್ಲಿ ಖಂಡಿತ ಇನ್ನಷ್ಟು ಗಹನವಾದ ಕಥೆಗಳನ್ನು ಬರೆಯಲು ಶಕ್ತರು. ಅವರಿಂದ ಇನ್ನಷ್ಟು ಉತ್ತಮ ಕೃತಿಗಳು ಬರಲಿ ಎಂಬ ಆಶಯದೊಡನೆ ಹೊಸ ಪುಸ್ತಕಕ್ಕೆ ಅಭಿನಂದನೆ ಕೋರುವೆ.

MORE FEATURES

ಓದಿನ ಸುಖ ಕೊಡುವುದು ಅನುವಾದ ಸರಾಗವಾಗಿ ಓದಿಸಿಕೊಂಡು ಹೋದಾಗ ಮಾತ್ರ!

07-05-2025 ಬೆಂಗಳೂರು

"ಅಣುವೊಂದು ಬ್ರಹ್ಮಾಂಡವನ್ನು ಅರಿಯುವ ತಹ ತಹ, ಅದರೊಳಗೆ ಲೀನವಾಗಬೇಕೆನ್ನುವ ಹಂಬಲ ಟಾಗೋರರ ಈ ಕವಿತೆಗಳಲ್ಲಿದೆ. ಭೌತ...

ಈ ಕತೆಗಳು ಬದುಕಿನ ವಿವಿಧ ಮುಖವಾಡಗಳನ್ನು ಬಯಲಿಗೆಳೆಯುತ್ತವೆ

07-05-2025 ಬೆಂಗಳೂರು

"ಆಹುತಿ ಕತೆಯಲ್ಲಿ ಹೆಣ್ಣಿನ ಶೋಷಣೆಯ ಚಿತ್ರಣವಿದೆ. ಶೀನಪ್ಪ ಮೇಷ್ಟರ ಮುಖವಾಡದ ಕತೆಯಿದೆ. ಹೊರಗಣ ಸಮಾಜಕ್ಕೆ ಸಂಭಾವಿ...

ಬೆಂಗಳೂರಿನಲ್ಲಿ ಕೊಂಡಿಯೊಂದು ಕಳಚಿತು....

06-05-2025 ಬೆಂಗಳೂರು

“ನಮಸ್ಕಾರ, ನಾನು ಚೆನ್ನಗಿರಿ ಕೇಶವ ಮೂರ್ತಿ, ಕ್ರಿಕೆಟ್‌ ಅಂಕಿಅಂಶ ಬರೆಯುತ್ತೇನೆ,” ಎಂದರು. ವಿನಿಯವ...