ಈ ಹೊತ್ತಿಗೆ ಟ್ರಸ್ಟ್‌ ವತಿಯಿಂದ 2025ರ ಪ್ರಶಸ್ತಿಗಳಿಗಾಗಿ ಹಸ್ತಪ್ರತಿ ಆಹ್ವಾನ

Date: 11-11-2024

Location: ಬೆಂಗಳೂರು


ಬೆಂಗಳೂರು: ಈ ಹೊತ್ತಿಗೆ ಟ್ರಸ್ಟ್‌ ನಿಂದ 2025 ಸಾಲಿನ ಈ ಹೊತ್ತಿಗೆ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಸಾಹಿತ್ಯ, ಅವ್ಯಕ್ತಚಿತ್ತ ಜೀವನದ ನೆಲೆಯಲ್ಲಿ ಲಿಖಿತ ಕೃತಿಗಳಿಗೆ ‘ಈ ಹೊತ್ತಿಗೆ’ಯು ಈ ಪ್ರಶಸ್ತಿ ಪ್ರದಾನ ಮಾಡುತ್ತದೆ.

ಪ್ರಶಸ್ತಿ ವಿಜೇತರಿಗೆ ತಲಾ 10,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ನೀಡಲಾಗುತ್ತದೆ.

ನಿಬಂಧನೆಗಳು:
1) ಅಪ್ರಕಟಿತ ಸಂಕಲನದಲ್ಲಿರುವ ಕಥೆಗಳು/ಕವನಗಳು ಸ್ವತಂತ್ರವಾಗಿರಬೇಕು. ಸಂಕಲನದಲ್ಲಿ ಕಡ್ಡಾಯವಾಗಿ ಅನುವಾದಿತ ಕಥೆ/ಕವನಗಳಿರಕೂಡದು.
2) ಕಥಾ ಸಂಕಲನವು 8ರಿಂದ 10 ಕಥೆಗಳನ್ನು ಒಳಗೊಂಡಿರಬೇಕು.
3) ಕವನ ಸಂಕಲನವಾದರೆ 35-40 ಕವನಗಳನ್ನು ಒಳಗೊಂಡಿರಬೇಕು. ಚುಟುಕುಗಳನ್ನು ಕಳಿಸುವಂತಿಲ್ಲ.
4) ಸಂಕಲನದಲ್ಲಿ ಕಡ್ಡಾಯವಾಗಿ ಸಂಕಲನದ ಶೀರ್ಷಿಕೆ ಮತ್ತು ಪರಿವಿಡಿ ಇರಬೇಕು.
5) ಡಿಟಿಪಿ ಮಾಡಿಸಿ, ಬೈಂಡ್ ಮಾಡಿಸಿದ ಅಪ್ರಕಟಿತ ಸಂಕಲನದ ಮೂರು ಪ್ರತಿಗಳನ್ನು ಈ ಹೊತ್ತಿಗೆಯ ಅಂಚೆ ವಿಳಾಸಕ್ಕೆ ಕಳುಹಿಸಿಕೊಡಬೇಕು.
6) ಕವಿಗಳು / ಕಥೆಗಾರರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು, ಸಂಕಲನದ ಹೆಸರು, ಸಂಪೂರ್ಣ ವಿಳಾಸ, ಇತ್ತೀಚಿನ ಫೋಟೋ, ಮೊಬೈಲ್ ಸಂಖ್ಯೆಯನ್ನು ಬರೆದಿರಬೇಕು. ಸಂಕಲನದ ಯಾವುದೇ ಪುಟಗಳಲ್ಲಿ ಲೇಖಕರ ಹೆಸರು ಇರಕೂಡದು.

7)ಪ್ರಶಸ್ತಿ ಘೋಷಣೆಯಾದ 30 ದಿನಗಳಲ್ಲಿ ಪ್ರಶಸ್ತಿ ಪಡೆದ ಸಂಕಲನವು ಮುದ್ರಣಗೊಳ್ಳಬೇಕು. ಕೃತಿ ಮುದ್ರಣಗೊಂಡರೆ ಮಾತ್ರ ಘೋಷಿತ ಬಹುಮಾನದ ಮೊತ್ತ ಹಾಗು ಪ್ರಶಸ್ತಿ ಫಲಕವು ಈ ಹೊತ್ತಿಗೆಯ ಹೊನಲು ಸಮಾರಂಭದಲ್ಲಿ ಸಲ್ಲುತ್ತದೆ.

ಅಪ್ರಕಟಿತ ಕಥಾ ಸಂಕಲನ, ಕವನ ಸಂಕಲನ ನಮಗೆ ತಲುಪಲು ಕೊನೆಯ ದಿನಾಂಕ: 20 ನವೆಂಬರ್ 2024, ಈ ಹೊತ್ತಿಗೆಯ ತೀರ್ಮಾನವೇ ಅಂತಿಮ. 2025ರ ಮಾರ್ಚಲ್ಲಿ ನಡೆಯುವ ಈ ಹೊತ್ತಿಗೆಯ ಹೊನಲು ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿಯನ್ನು ನೀಡಲಾಗುವುದು

ಹಸ್ತಪ್ರತಿ ಕಳುಹಿಸಲು ವಿಳಾಸ : ಈ ಹೊತ್ತಿಗೆ, #65, ಮುಗುಳ್ಳಗೆ, 3ನೇ ಅಡ್ಡರಸ್ತೆ, ಪಿ.ಎನ್.ಬಿ ನಗರ, ದೊಡ್ಡಕಲ್ಲಸಂದ್ರ, ಕೋಣನಕುಂಟೆ, ಬೆಂಗಳೂರು – 560062 ಸಂಪರ್ಕ ಸಂಖ್ಯೆ: 9611782621

MORE NEWS

ಪಿ. ಶೇಷಾದ್ರಿ ಸಿನಿಮಾವಲೋಕನಕ್ಕೆ 'ಮುನ್ನುಡಿ'

21-11-2024 ಬೆಂಗಳೂರು

ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...

ವಿಜಯ ರಾಘವೇಂದ್ರ ನಟನೆಯ 'ರುದ್ರಾಭಿಷೇಕಂ' ಚಿತ್ರಕ್ಕೆ ಚಾಲನೆ

21-11-2024 ಬೆಂಗಳೂರು

ಬೆಂಗಳೂರು: ನಮ್ಮ‌ನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...

87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೊ. ರು. ಚನ್ನಬಸಪ್ಪ ಆಯ್ಕೆ

20-11-2024 ಬೆಂಗಳೂರು

ಬೆಂಗಳೂರು: ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ...