ಈ ಬಾರಿಯ ದಸರಾ ಮಹೋತ್ಸವ ಉದ್ಘಾಟಕರಾಗಿ ಸಾಹಿತಿ ಹಂಪ ನಾಗರಾಜಯ್ಯ ಆಯ್ಕೆ

Date: 20-09-2024

Location: ಬೆಂಗಳೂರು


ಮೈಸೂರು: ನಾಡಿನ ಪ್ರಸಿದ್ಧ ಹಿರಿಯ ಸಾಹಿತಿ, ಸಂಶೋಧಕ ಹಂಪ ನಾಗರಾಜಯ್ಯ ಅವರು ಈ ಬಾರಿ ಮೈಸೂರು ದಸರಾವನ್ನು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರದಂದು ಘೋಷಿಸಿದ್ದಾರೆ.

ಈ ಕುರಿತಂತೆ ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಶೀಘ್ರದಲ್ಲೇ ಹಂಪನಾ ಅವರಿಗೆ ಅಧಿಕೃತವಾಗಿ ಆಹ್ವಾನ ಕೊಡಲಾಗುವುದು. ಉನ್ನತ ಮಟ್ಟದ ಸಭೆಯನ್ನು ಈಚೆಗೆ ಏರ್ಪಡಿಸಿದ್ದು, ಅದರಲ್ಲಿ ಉದ್ಘಾಟಕರ ಆಯ್ಕೆಯನ್ನು ನನ್ನ ವಿವೇಚನೆಗೆ ಬಿಟ್ಟಿದ್ದರು,” ಎಂದು ತಿಳಿಸಿದರು.

ಮೈಸೂರು ದಸರಾ ಮಹೋತ್ಸವವು 2024ರ ಅಕ್ಟೋಬರ್ 3ರಂದು ಆರಂಭಗೊಂಡು ಅದೇ ತಿಂಗಳ 12ರಂದು ಸಮಾರೋಪಗೊಳ್ಳಲಿದೆ ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದ್ದು, ಅಕ್ಟೋಬರ್ 3ರಂದು ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಬೆಳಗ್ಗೆ 9.15 ರಿಂದ 9.45ರ ಮುಹೂರ್ತದಲ್ಲಿ ದಸರಾ ಉದ್ಘಾಟನೆ ನೆರವೇರಲಿದೆ.

MORE NEWS

Kerala Literature festival- 2025; ವರ್ಷದ ಕೃತಿ: ಅಂತಿಮ ಸುತ್ತಿನಲ್ಲಿ ’ಸಕೀನಾಸ್ ಕಿಸ್’ 

22-01-2025 ಬೆಂಗಳೂರು

`ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: ಕನ್ನಡದ ಖ್ಯಾತ ಕಾದಂಬರಿಕಾರ ವಿವೇಕ ಶಾನಭಾಗ ಅವರ `ಸಕೀನಾಳ ಮುತ್ತ...

Kerala Literature festival- 2025; ಕಲ್ಲಿಕೋಟೆ ಕಡಲ ತಡಿಯಲ್ಲಿ ಕರ್ನಾಟಕದ ಕಲರವ 

22-01-2025 ಬೆಂಗಳೂರು

‘ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: ಇಲ್ಲಿನ ಕಡಲ ತಡಿಯಲ್ಲಿ ನಾಳೆ ಆರಂಭವಾಗುವ ಏಷ್ಯಾದ ಅತಿದೊಡ...

Kerala Literature festival- 2025; ನಾಳೆ ಏಷ್ಯಾದ ಅತಿ ದೊಡ್ಡ ಸಾಹಿತ್ಯ ಉತ್ಸವಕ್ಕೆ ಚಾಲನೆ

22-01-2025 ಬೆಂಗಳೂರು

’ಬುಕ್ ಬ್ರಹ್ಮ’ ವಿಶೇಷ ವರದಿ ಕಲ್ಲಿಕೋಟೆ: ಏಷ್ಯಾದ ಅತಿ ದೊಡ್ಡ ಸಾಹಿತ್ಯೋತ್ಸವ ಎಂದೇ ಹೆಸರುವಾಸಿಯಾಗಿ...