ಡಿ.ಎನ್. ಅಕ್ಕಿ ಮಕ್ಕಳ ಅಚ್ಚುಮೆಚ್ಚಿನ ಆದರ್ಶ ಶಿಕ್ಷಕ: ಫ.ಗು.ಸಿದ್ದಾಪುರ


“ಶ್ರೀ ಡಿ.ಎನ್. ಅಕ್ಕಿಯವರು ರಂಗೋಲಿಯಲ್ಲಿ ಭಾವಚಿತ್ರ ಬಿಡಿಸುವುದನ್ನು ನೋಡಿಯೇ ಆನಂದಿಸಬೇಕು. ಅದು ಶಬ್ದಗಳಿಂದ ಸೆರೆ ಹಿಡಿಯಲು ಸಾಧ್ಯವಿಲ್ಲ” ಎನ್ನುತ್ತಾರೆ ಫ.ಗು.ಸಿದ್ದಾಪುರ, ಮುಳವಾಡ. ಅವರು ಡಿ.ಎನ್. ಅಕ್ಕಿ ಅವರ ‘ಹಕ್ಕಿ ಹಾಂಗ’ ಮಕ್ಕಳ ಕವಿತೆಗಳಿಗೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ.

ಶ್ರೇಷ್ಠ ಕಲಾವಿದ, ಸಂಶೋಧಕ, ಖ್ಯಾತ ಸಾಹಿತಿ ಹಾಗೂ ಆದರ್ಶ ಶಿಕ್ಷಕರಾದ ಶ್ರೀ ಡಿ.ಎನ್. ಅಕ್ಕಿಯವರು ವೃತ್ತಿಯಿಂದ ಚಿತ್ರಕಲಾ ಶಿಕ್ಷಕರಾದರೂ, ಪ್ರವೃತ್ತಿಯಿಂದ ಬಹುಮುಖ ಪ್ರತಿಭೆಯುಳ್ಳ ವಿದ್ವಾಂಸರೆಂದು ಹೇಳಲು ಹೆಮ್ಮೆ ಎನಿಸುತ್ತದೆ. ಪೆನ್ಸಿಲ್ ಹಿಡಿದರೆ ರೇಖೆಗಳಿಗೆ ಜೀವ ತುಂಬುತ್ತಾರೆ. ಪೆನ್ನು ಹಿಡಿದರೆ ಅಕ್ಷರಗಳಿಗೆ ಭಾವ ತುಂಬುತ್ತಾರೆ. ವೃತ್ತಿಯಿಂದ ನಿವೃತ್ತಿಯಾದರೂ, ಅಕ್ಕಿಯವರು ಪ್ರವೃತ್ತಿಯಿಂದ ಯಾವುದಕ್ಕೂ ನಿವೃತ್ತಿಯಾಗಿಲ್ಲ.
ಹಲವಾರು ಶಾಸನಗಳನ್ನು ಅಧ್ಯಯನ ಮಾಡಿ, ಜೈನ ಸಾಹಿತ್ಯಕ್ಕೆ ಹೊಂಬೆಳಕು ನೀಡಿರುವರು. ದೇಹ ಕೃಶವಾದರೂ ಸೇವೆಯಲ್ಲಿ ಖುಷಿ ಕಡಿಮೆಯಾಗಿಲ್ಲ. ನಿತ್ಯ ಓದು ಬರಹದಲ್ಲಿ, ಸಂಶೋಧನೆಯಲ್ಲಿ, ವ್ಯಂಗ್ಯ ಚಿತ್ರ ಬಿಡಿಸುವುದರಲ್ಲಿ ಸದಾ ತೊಡಗಿಕೊಂಡಿರುತ್ತಾರೆ. ಇವರು ರಚಿಸಿದ ಕೃತಿಗಳಿಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

ಶ್ರೀ ಡಿ.ಎನ್. ಅಕ್ಕಿಯವರು ರಂಗೋಲಿಯಲ್ಲಿ ಭಾವಚಿತ್ರ ಬಿಡಿಸುವುದನ್ನು ನೋಡಿಯೇ ಆನಂದಿಸಬೇಕು. ಅದು ಶಬ್ದಗಳಿಂದ ಸೆರೆ ಹಿಡಿಯಲು ಸಾಧ್ಯವಿಲ್ಲ.

ಛಾಯಾಚಿತ್ರವನ್ನು ಮೀರಿಸುವಷ್ಟು ಸುಂದರವಾಗಿ ರಂಗೋಲಿಯಲ್ಲಿ ಅರಳಿಕೊಳ್ಳುತ್ತದೆ. ಅಕ್ಕಿಯವರ ಕೈ ಚಳಕ ವರ್ಣನಾತೀತ. ಇವರ ವ್ಯಂಗ್ಯಚಿತ್ರಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡು, ಓದುಗರ ಮನ ಸೂರೆಗೊಂಡಿವೆ.

ಪ್ರೌಢ ಸಾಹಿತ್ಯ, ಮಕ್ಕಳ ಸಾಹಿತ್ಯ ಎರಡರಲ್ಲೂ ಸವ್ಯಸಾಚಿಯಾಗಿ ಗುರುತಿಸಿಕೊಂಡವರು. ಮಕ್ಕಳ ಅಚ್ಚುಮೆಚ್ಚಿನ ಆದರ್ಶ ಶಿಕ್ಷಕರಾಗಿ, ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಶ್ರೇಯಸ್ಸು ಇವರದಾಗಿದೆ.

ವೃತ್ತಿಯನ್ನು ಗೌರವದಿಂದ ಕಾಯ್ದುಕೊಂಡು, ಪ್ರವೃತ್ತಿಯಲ್ಲಿ ಬೆಟ್ಟದೆತ್ತರ ಬೆಳೆದು ನಿಂತವರು. ಶ್ರೀಯತರಿಗೆ ಹಲವಾರು ಪ್ರಶಸ್ತಿ- ಪುರಸ್ಕಾರಗಳು ಅರಸಿಕೊಂಡು ಬಂದಿವೆ. ಅವುಗಳಲ್ಲಿ ಕಳಶಪ್ರಾಯವಾದ ಪ್ರಶಸ್ತಿಯೆಂದರೆ ಕರ್ನಾಟಕ ಘನ ಸರ್ಕಾರ ನೀಡುವ 'ರಾಜ್ಯೋತ್ಸವ ಪ್ರಶಸ್ತಿ'ಯೂ ಒಂದೆಂದು ಹೇಳಬಹುದು.

ಸಂಘ-ಸಂಸ್ಥೆಗಳಿಂದ, ಜೈನ ಸಮುದಾಯದಿಂದ ಹಲವಾರು ಪುರಸ್ಕಾರಗಳು ಇವರ ಮುಡಿಗೇರಿವೆ. ಪ್ರಸ್ತುತ ನಿಮ್ಮ ಕೈಯಲ್ಲಿರುವ ಮಕ್ಕಳ ಕೃತಿ 'ಹಕ್ಕಿ ಹಾಂಗ' ತುಂಬಾ ಸುಂದರವಾಗಿ ಮೂಡಿಬಂದಿದೆ. ಅಬಾಲವೃದ್ಧರೂ ಇದನ್ನು ಓದಿ ಆನಂದಿಸಬಹುದು. ತುಂಬಾ ನವನವೀನವಾಗಿದೆ. ಇದರಲ್ಲಿ ತಾವೇ ಬರೆದ ಕೆಲವು ರೇಖಾಚಿತ್ರಗಳನ್ನು ಆಳವಡಿಸಿದ್ದಾರೆ. ಇವರಿಂದ ಇನ್ನೂ ಉತ್ತಮೋತ್ತಮ ಕೃತಿಗಳು ಮೂಡಿಬರಲೆಂದು ತುಂಬು ಹೃದಯದಿಂದ ಶುಭ ಕೋರುವೆ.

-ಫ.ಗು.ಸಿದ್ದಾಪುರ, ಮುಳವಾಡ

MORE FEATURES

ಎಲ್ಲವೂ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿವೆ

20-01-2025 ಬೆಂಗಳೂರು

"ಮೊದಲ ಅಧ್ಯಾಯ ಕಳಿಸಿದರು. ಓದುತ್ತಾ ಹೋದಂತೆ ಅದು ಸೀದಾ ತಲೆಯೊಳಗೆ ಇಳಿದಂತಾಗಿ, ಜೊತೆಗೆ ಲಾಜಿಕಲಿ ಘಟನೆಗಳೆಲ್ಲ ಫಿ...

ಹಿಜಾಬ್ ಗೆ ಏಕಕಾಲಕ್ಕೆ ಐತಿಹಾಸಿಕ ಹಾಗೂ ಸಮಕಾಲೀನ ಮಹತ್ವವಿದೆ

20-01-2025 ಬೆಂಗಳೂರು

"ಕನ್ನಡ ನಾಡಿನಿಂದ ಅಮೇರಿಕಾಗೆ ವಲಸೆ ಹೋಗುವ, ಅಲ್ಲಿ ತಮ್ಮ ಪ್ರತಿಭೆಯಿಂದ ಬೆಳಗುವ ಕನ್ನಡಿಗರು ತಮ್ಮ ಅಸ್ತಿತ್ವವನ್ನ...

ಕವಿತೆಗೆ ಕಾಲುಗಳಿಲ್ಲ, ಆದರೆ ರೆಕ್ಕೆಗಳಿವೆ

20-01-2025 ಬೆಂಗಳೂರು

"ದಶಕಗಳಿಂದ ಕಾವ್ಯ ಬರೆಯುತ್ತ ಬಂದಿರುವ ಗೋವಿಂದ ಹೆಗಡೆಯವರ ಮೊದಲ ಹಾಗೂ ಕೊನೆಯ ನಿಷ್ಠೆ ಕವಿತೆಯಲ್ಲಿದೆ. ಕಾವ್ಯಕ್ಕಿ...