ಬಸವರಾಜರು ರೈತ ಕುಟುಂಬದಿಂದ ಸಾಹಿತ್ಯ ಲೋಕಕ್ಕೆ ಹೆಜ್ಜೆ ಇಟ್ಟಿದ್ದಾರೆ


‘ಬಸವರಾಜರವರು ಸಾಮಾಜಿಕ ಚಿಂತನೆ, ಜನಪರವಾದ ಸೇವೆ, ಕಾಳಜಿಯನ್ನು ಹೊಂದಿರುವವರು. ಜೊತೆಗೆ ನನ್ನೊಂದಿಗೆ ಯಾವಾಗಲೂ ನಿಕಟ ಸಂಪರ್ಕವನ್ನು, ಸ್ನೇಹವನ್ನು, ಹೊಂದಿದ್ದಾರೆ ಎನ್ನುತ್ತಾರೆ ಜಿ.ಎಸ್. ಗೋನಾಳ. ಅವರು ಎಸ್. ಬಸವರಾಜ ಹೇರೂರು ಅವರ ‘ಬಸವನೆಂಬ ಬೆಳಕು’ ನಾಟಕ ಕುರಿತು ಬರೆದ ಪ್ರಕಾಶಕರ ನುಡಿ ನಿಮ್ಮ ಓದಿಗಾಗಿ.

ನಮ್ಮ ವಿಶಾಲ ಪ್ರಕಾಶನದ ಮೂಲಕ ನನ್ನ 'ಬಸವನೆಂಬ ಬೆಳಕು' ನಾಟಕ ಕೃತಿಯನ್ನು ಪ್ರಕಟಣೆ ಮಾಡಿ ಎಂದು ಕೇಳಿದ ಗೆಳೆಯ ಎಸ್. ಬಸವರಾಜ. ಹೇರೂರು ಇವರು ಬರೆದಿರುವ ಐತಿಹಾಸಿಕ ನಾಟಕ. ಅದರಲ್ಲೂ ಅಣ್ಣ ಬಸವಣ್ಣನವರ ಕುರಿತಾಗಿರುವುದರಿಂದ ಈ ಪುಸ್ತಕವನ್ನು ಪ್ರಕಟಿಸುವ ಹೊಣೆಯನ್ನು ತೆಗೆದುಕೊಂಡಿದ್ದೇನೆ. ಅಲ್ಲದೆ ಬಸವರಾಜರವರು ಸಾಮಾಜಿಕ ಚಿಂತನೆ, ಜನಪರವಾದ ಸೇವೆ, ಕಾಳಜಿಯನ್ನು ಹೊಂದಿರುವವರು. ಜೊತೆಗೆ ನನ್ನೊಂದಿಗೆ ಯಾವಾಗಲೂ ನಿಕಟ ಸಂಪರ್ಕವನ್ನು, ಸ್ನೇಹವನ್ನು, ಹೊಂದಿದ್ದಾರೆ. ಈ ಹಿಂದೆ ನಮ್ಮ "ಐತಿಹಾಸಿಕ ಸಿರಿ ಕೋಪಣಾಚಲ" ಪುಸ್ತಕಕ್ಕೆ ತಮ್ಮ ಗ್ರಾಮದ ಚರಿತ್ರೆಯನ್ನು ಅಂದರೆ, ಹೇರೂರು ಹಾಗೂ ಪೂಜ್ಯ ವಿರೂಪಣ್ಣ ತಾತನವರ ಬಗ್ಗೆ ಒಂದು ಲೇಖನವನ್ನು ಬರೆದು ಕೊಟ್ಟಿದ್ದರು. ಆಗಲೇ ನಾನು ಇವರ ಬರಹಗಳಲ್ಲಿನ ತುಡಿತ, ಮಿಡಿತವು ನನಗೆ ಬಹು ಅಚ್ಚುಮೆಚ್ಚು ಎಂದೆನಿಸಿದವು. ಬಂಧುಗಳಾದ ಬಸವರಾಜ ಅವರ ಈ ಕೃತಿ 'ಬಸವನೆಂಬ ಬೆಳಕು' ಪ್ರಕಟವಾಗುತ್ತಿದೆ. ನಮ್ಮ ವಿಶಾಲ ಪ್ರಕಾಶನದ 44ನೇ ಕೃತಿ ಇದಾಗಿದ್ದು ಎಂಬುದು ಹೆಮ್ಮೆಯ ವಿಷಯ.

ಎಸ್. ಬಸವರಾಜರವರು ಈಗಾಗಲೇ ಶಾಂತಿ ಸಂಸಾರದ ಸಂಪತ್ತು ಕೌರವರು ಇನ್ನು ಸತ್ತಿಲ್ಲ. ಶಿವಶರಣ ನೂಲಿ ಚಂದಯ್ಯ, ವೀರ ಪೃಥ್ವಿರಾಜ ನಾಟಕಗಳನ್ನು ಬರೆದಿದ್ದಾರೆ. ಇವರ ಸ್ವರಚಿತ ಐದನೇ 'ಬಸವನೆಂಬ ಬೆಳಕು' ನಾಟಕವನ್ನು ಸಾಹಿತ್ಯ ಲೋಕಕ್ಕೆ ವಿಶಾಲ ಪ್ರಕಾಶನದಿಂದ ಅರ್ಪಿಸುತ್ತಿದ್ದೇವೆ ಎಂಬುದು ಹರ್ಷದಾಯಕವಾಗಿದೆ. ಜೊತೆಗೆ ಬಸವರಾಜ ಅವರು ಅನೇಕ ಲೇಖನಗಳನ್ನು ಬರೆದಿದ್ದು ಹತ್ತು ಹಲವಾರು ಐತಿಹಾಸಿಕ ಸಾಮಾಜಿಕ, ನಾಟಕಗಳಲ್ಲಿ ನಟನೆ ಮಾಡಿ ಶ್ರೇಷ್ಠ ನಟರು ಎಂಬುದನ್ನು ನಿರೂಪಿಸಿದ್ದಾರೆ. ಹಾಗೆಯೇ ಕೊಪ್ಪಳ ಜಿಲ್ಲೆಯಲ್ಲಿ ಮತ್ತು ಗಂಗಾವತಿ ತಾಲೂಕಿನಲ್ಲಿ ಕ್ರಿಯಾಶೀಲ ಮತ್ತು ಲವಲವಿಕೆಯುಳ್ಳ ಬರಹಗಾರರಾಗಿ ಬೆಳೆಯುತ್ತಿದ್ದಾರೆ. ಇವರುಗಳ ಶ್ರೇಯೋಭಿವೃದ್ಧಿಯಲ್ಲಿ, ಬೆಳವಣಿಗೆಯಲ್ಲಿ ನಮ್ಮ ವಿಶಾಲ ಪ್ರಕಾಶನವು ಕೊಂಚ ಸಹಕಾರಿಯಾಗಲೆಂಬ ಸದುದ್ದೇಶದಿಂದ ವಿಶಾಲ ಮನಸ್ಸಿನಿಂದ, ಪ್ರೀತಿಯಿಂದ, ಈ ಪುಸ್ತಕವನ್ನು ಪ್ರಕಟಿಸಲು ಹೆಮ್ಮೆ ಅನಿಸುತ್ತಿದೆ.

ರೈತ ಕುಟುಂಬದಿಂದ ಸಾಹಿತ್ಯ ಲೋಕಕ್ಕೆ ಹೆಜ್ಜೆ ಇಟ್ಟಿರುವ ಬಸವರಾಜರು ನಾನು ಬೆಳೆಯಬೇಕೆಂಬ ಅದಮ್ಯ ಆಸಕ್ತಿಯುಳ್ಳ ವ್ಯಕ್ತಿಯಾಗಿದ್ದಾರೆ. ನನ್ನನ್ನುನೀವು ಬೆಳೆಸಬೇಕು ಗೋನಾಳ ಸರ್ ಎಂದು ಪದೇ ಪದೇ ಕೇಳುತ್ತಾ ಬಂದಿದ್ದಾರೆ. ಆದ್ದರಿಂದ ಅವರು ಈ ನಾಡಿನಲ್ಲಿ ಅತ್ಯುತ್ತಮ ಬರಹಗಾರರು, ಸಂಘಟಕರು ಆಗಬೇಕೆಂಬ ಆಸೆಯು ನನ್ನಲ್ಲಿ ಇದೆ. ಸರಳ ಜೀವನ, ಸರಳ ವ್ಯಕ್ತಿತ್ವವನ್ನು ಹೊಂದಿದ ಬಸವರಾಜರು ಸಾಧಕರ ಸೇರ್ಪಡೆಯಾಗಬೇಕು ಎನ್ನುವ ಸದುದ್ದೇಶದಿಂದಲೇ ಅವರ ಪುಸ್ತಕದ ಪ್ರಕಟಣೆ ಹಾಗೂ ಅವರನ್ನು ಗಂಗಾವತಿ ತಾಲೂಕಿನ ಸಿರಿಗನ್ನಡ ವೇದಿಕೆಯ ತಾಲೂಕ ಅಧ್ಯಕ್ಷರನ್ನಾಗಿಯೂ, ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಯು ಮಂಜುನಾಥ ಚಿತ್ರಗಾರ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಜೊತೆಗೆ ಈ ಪುಸ್ತಕದ ಬಿಡುಗಡೆಯು ಕೂಡ ಸಿರಿಗನ್ನಡ ವೇದಿಕೆ ಗಂಗಾವತಿ ತಾಲೂಕ ಘಟಕದ ಉದ್ಘಾಟನೆ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ಕನ್ನಡ ಪರವಾದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂಬ ಅವರ ಆಶಯದಂತೆ ನಾವು ಸ್ಪಂದಿಸಿದ್ದೇವೆ. ಅವರಿಂದ ಕನ್ನಡ ನಾಡು ನುಡಿ ದ ಸಂಸ್ಕೃತಿಯನ್ನು ಬೆಳೆಸುವಂತಹ ಕಾರ್ಯಗಳು ಆಗಲಿ ಎಂದು ಆಶಿಸುತ್ತೇನೆ.

ಇತ್ತೀಚೆಗೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ ಎಸ್. ತಂಗಡಗಿ ಜೊತೆಗೆ ಸಂಪುಟದ ಎಲ್ಲಾ ಸಚಿವರು ಸೇರಿ 12ನೇ ಶತಮಾನದ 'ಸಮ ಸಮಾಜದ ಹರಿಕಾರ ಅಣ್ಣ ಬಸವಣ್ಣನವರನ್ನು" "ಕರ್ನಾಟಕದ ಸಾಧ್ಯತಿ ನಾಯಕ" ಎಂದು ಘೋಷಣೆ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಮಂತ್ರಿಮಂಡಲದ ಎಲ್ಲಾ ಸಚಿವರಿಗೆ ಮತ್ತು ಶಾಸಕರಿಗೆ ವಿಶಾಲ ಪ್ರಕಾಶನದ ಮೂಲಕ ಹೃತ್ಪೂರ್ವಕವಾದ ಅಭಿನಂದನೆಗಳು. ಇಂತಹ ವಿಶ್ವ ಮಾನ್ಯ ಜಗಜ್ಯೋತಿ ಬಸವಣ್ಣನವರ ಕುರಿತಾಗಿ ನಾಟಕವನ್ನು ರಚಿಸಿರುವ ಕವಿ ಬಸವರಾಜನ ಕಾರ್ಯ ಶ್ಲಾಘನೀಯವಾದದ್ದು. ಈ ಪುಸ್ತಕವು ಬಸವಾದಿ ಶರಣರ ಅಭಿಮಾನಿ ಬಳಗಕ್ಕೆ ಹರ್ಷವನ್ನುಂಟು ಮಾಡುತ್ತದೆ ಎಂಬ ಮಾತು ಅತಿಶಯೋಕ್ತಿ ಯಾಗಲಾರದು.

ಎಸ್. ಬಸವರಾಜ ಅವರು ಇನ್ನು ಹೆಚ್ಚೆಚ್ಚು ಸಂಘಟನಾತ್ಮಕವಾಗಿ ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಮಾಜಮುಖಿಯಾಗಿ ಬೆಳೆಯಲೆಂದು ಆಶಿಸುತ್ತೇನೆ. ಇವರ ಕೃತಿ 'ಬಸವನೆಂಬ ಬೆಳಕು' ನಾಟಕವು ನಾಡಿನಲ್ಲಿಡೆ ಪ್ರಸಂಶೆಗೊಳಪಡಲೆಂದು ಮತ್ತು ಅವರು ಇನ್ನೂ ಹಲವಾರು ಮೌಲ್ವಿಕ ಕೃತಿಗಳನ್ನು ರಚಿಸಲೆಂದು ಶುಭ ಕೋರುತ್ತೇನೆ.

-ಜಿ.ಎಸ್. ಗೋನಾಳ

MORE FEATURES

ಚಿತ್ರ ಮತ್ತು ಅಕ್ಷರದಲ್ಲಿ ಒಡಮೂಡಿದ ಅಜ್ಜ ಅಜ್ಜಿಯ ನೆನಪು

28-05-2024 ಬೆಂಗಳೂರು

'ಕನ್ನಡ ಮತ್ತು ಇಂಗ್ಲಿಷ್‌ನ ಹೆಸರಾಂತ ಪತ್ರಿಕೆಗಳಾದ ಪ್ರಜಾವಣಿ, ಡೆಕ್ಕನ್‌ ಹೆರಾಲ್ಡ್‌ನ ಸಂಸ್ಥಾಪ...

ಮನೆ ಮದ್ದು ನೀಡುವ ಪಂಡಿತರ ಸೇವಾ ಮನೋಭಾವದ ಕುರಿತ ಲೇಖನ ಇದು

28-05-2024 ಬೆಂಗಳೂರು

‘ಹಳ್ಳಿ ಮದ್ದಿನ ಚಿಕಿತ್ಸಾ ಪದ್ಧತಿಯನ್ನು ಉಳಿಸಿ ಪೀಳಿಗೆಯಿಂದ ಪೀಳಿಗೆಗೆ ಆ ವಿದ್ಯೆಯನ್ನು ಹಸ್ತಾಂತರಿಸುವ, ಬೆಳೆಸ...

ನಮ್ಮ ದೇಹ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳ ಆಕ್ರಮಣಕ್ಕೆ ತೆರೆದ ಹೆಬ್ಬಾಗಿಲು

28-05-2024 ಬೆಂಗಳೂರು

‘ಪರಿಸರ ಜ್ಞಾನದ ಹಿನ್ನೆಲೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾದ ತಿಳಿವಳಿಕೆಯನ್ನು ಸಂಶೋಧನಾತ್ಮಕ ವಿವರಗಳೊಂದ...