ಅಪರಿಚಿತ ಓದುಗರ ಎರಡನೇ ವರ್ಷದ ವಾರ್ಷಿಕೋತ್ಸವದಲ್ಲಿ ಆರು ಕೃತಿಗಳು ಲೋಕಾರ್ಪಣೆ

Date: 22-07-2025

Location: ಬೆಂಗಳೂರು


ಬೆಂಗಳೂರು: ಅಪರಿಚಿತ ಓದುಗರ ಎರಡನೇ ವರ್ಷದ ವಾರ್ಷಿಕೋತ್ಸವವನ್ನು ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಆರು ಪುಸ್ತಕಗಳು ಲೋಕಾರ್ಪಣೆಗೊಂಡವು.

ಅನಂತ ಕುಣಿಗಲ್ ಅವರ ಆಕ್ರಮಣ ಹಾಗೂ ಅವರ ಸಂಪಾದಕತ್ವದ ʻರೈನ್ಬೋʼ ಕಥಾ ಸಂಕಲನ, ಎಸ್ ಡಿ ಕುಮಾರ್ ಅವರ ಅನುವಾದಿತ ಕೃತಿ ʻಹಸ್ಬೆಂಡ್ ಸ್ಟಿಚ್ʼ, ಕಿರಣ್ ಅವರ ʻಅಮ್ಮ ನಿನ್ನ ಎದೆಯಾಳದಿಂದʼ ಹಾಗೂ ಕೃಪಾ ಬಿ.ಎಂ ಅವರ ʻಮಕ್ಕಳ ಮ್ಯಾಜಿಕ್ʼ ಕೃತಿಗಳು ಬಿಡುಗಡೆಗೊಂಡವು.

ಅತಿಥಿಗಳಾಗಿ ಕೆಎನ್ ಗಣೇಶಯ್ಯ, ಸ್ವಪ್ನದ ದೊಡ್ಡೆಗೌಡರು, ವಿದ್ಯಾರಶ್ಮಿ ಹಾಗೂ ಡಾಕ್ಟರ್ ಗೀತಾಂಜಲಿ ಉಪಸ್ಥಿತರಿದ್ದರು.

ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದ ಅನಂತ್ ಕುಣಿಗಲ್ ಅವರು ಅತ್ಯುತ್ತಮ ಓದುಗ ಪ್ರಶಸ್ತಿ ಮತ್ತು ಯುವ ಬರಹಗಾರರ ಸಂಘ ಎಂಬ ಎರಡು ಮುಖ್ಯ ವಿಷಯದ ಬಗ್ಗೆ ತಿಳಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಸಪ್ನಾದ ದೊಡ್ಡೆಗೌಡರು ಅಪರಿಚಿತ ಓದುಗರ ತಂಡ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸದೊಂದು ಅಲೆಯನ್ನೇ ಸೃಷ್ಟಿಸುತ್ತಿದೆ ಎಂದರು.

ಕೆ.ಎನ್ ಗಣೇಶಯ್ಯನವರು ಒಂದು ವರ್ಷಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ಬಿಡುಗಡೆಗೊಳ್ಳುತ್ತಿರುವ ಪುಸ್ತಕಗಳ ಸರಾಸರಿಯನ್ನು ವಿವರಿಸಿದರು. ವಿದ್ಯಾರಶ್ಮಿ ಅವರು ಹಸ್ಬೆಂಡ್ ಸ್ವಿಚ್ ಪುಸ್ತಕವನ್ನು ಪರಿಚಯ ಮಾಡಿದರು.

ಡಾಕ್ಟರ್ ಗೀತಾಂಜಲಿ (ಲೈಂಗಿಕ ತಜ್ಞೆ ) ಸೂಕ್ಷ್ಮವಾದ ಲೈಂಗಿಕ ವಿಚಾರಗಳ ಬಗ್ಗೆ ಮಾತನಾಡಿದರು. ಅವ್ವ ಪುಸ್ತಕಲಯ ನಡೆಸಿದ ಮಕ್ಕಳ ಕಥಾ ಸ್ಪರ್ಧೆಯಲ್ಲಿ ಮತ್ತೂರು ಸುಬ್ಬಣ್ಣ ಹಾಗೂ ಎಲ್ ಕೆ ಕುಲಕರ್ಣಿ ರವರಿಗೆ ಮೊದಲ ಪ್ರಶಸ್ತಿ ಜೊತೆಗೆ ಆರು ಜನರಿಗೆ ಮೆಚ್ಚುಗೆಯ ಬಹುಮಾನವನ್ನು ನೀಡಲಾಯಿತು. ಅವ್ವ ಪುಸ್ತಕಾಲಯ ಕೊಡಮಾಡುವ ಅತ್ಯುತ್ತಮ ಓದುಗ ಪ್ರಶಸ್ತಿಯನ್ನು ಬಿ ಎಸ್ ಚಿರಂಜೀವಿ ಅವರಿಗೆ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ವೀರಕಪುತ್ರ ಶ್ರೀನಿವಾಸ, ಜೋಗಿ, ಜಮೀಲ್ ಸಾವಣ್ಣ,ಕೃಷ್ಣಚೆಂಗಡಿ, ಶಿವಕುಮಾರ್ ಮಾವಲಿ, ಕದಂಬ ನಾಗೇಶ್, ಮಹೇಶ್ ಅರಬಳ್ಳಿ, ಪವನ್ ದರೆಗುಂಡಿ, ವಿಜಯ್ ವಿಕ್ರಮ್ ಅಡಿಗ, ಜಗದೀಶ ಶರ್ಮಾ ಸಂಪ, ರವೀಂದ್ರ ಮುದ್ದಿ, ಹರಿವು ರತೀಶ್, ತಮ್ಮಣ್ಣ ಬೀಗಾರ, ನಟರಾಜ ಅರಳಸುರಳಿ, ಮತ್ತಿತರು ಉಪಸ್ಥಿತರಿದ್ದರು.

MORE NEWS

ಸಾಹಿತ್ಯ ಕೃತಿಗಳು ಸಮಾಜದ ಹಲವು ಮುಖಗಳನ್ನು ತೋರಿಸುವ ಶಕ್ತಿ ಪಡೆದಿವೆ; ದೀಪಾ ಭಾಸ್ತಿ

13-12-2025 ಬೆಂಗಳೂರು

ಬಸವಕಲ್ಯಾಣ: ವಚನ ಸಾಹಿತ್ಯದಿಂದ ಈ ನೆಲದ ಭಾಷಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಾಗಿದೆ ಎಂದು ಅಂತರ್ ರಾಷ್ಟ್ರೀಯ ...

2026ನೇ ಸಾಲಿನ ಟೊಟೊ ಪುರಸ್ಕಾರದ ಮೊದಲನೇ ಪಟ್ಟಿ ಬಿಡುಗಡೆ

12-12-2025 ಬೆಂಗಳೂರು

2026ನೇ ಸಾಲಿನ ಟೊಟೊ ಪುರಸ್ಕಾರಕ್ಕೆ ಕನ್ನಡ ವಿಭಾಗದಲ್ಲಿ ಒಂಭತ್ತು ಜನ ಯುವ ಸೃಜನಶೀಲ ಬರಹಗಾರರ ಹೆಸರನ್ನ ಮೊದಲನೇ ಪಟ್ಟಿಗ...

ಮಕ್ಕಳಲ್ಲಿ ಕಲ್ಪನಾ ಲೋಕ ಬೆಳೆಸಿ: ಬಸು ಬೇವಿನಗಿಡದ

10-12-2025 ಧಾರವಾಡ

ಧಾರವಾಡ: ಮಕ್ಕಳಲ್ಲಿ ಕಲ್ಪನಾ ಶಕ್ತಿ ಬೆಳೆಸುವುದರ ಜೊತೆಗೆ ಓದಿನ ಅಭಿರುಚಿ ಹಿಗ್ಗಿಸಬೇಕಿದೆ. ಅಂದಾಗ ಅವರು ಓದಿನ ರುಚಿಯೊಂ...