Date: 05-11-2024
Location: ಬೆಂಗಳೂರು
ಬೆಂಗಳೂರು: ಗಾಂಧೀ ಶಾಂತಿ ಪ್ರತಿಷ್ಠಾನ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ, ಶೇಷಾದ್ರಿಪುರಂ ಸಂಜೆ ಕಾಲೇಜು, ಗಾಂಧಿ ಅಧ್ಯಯನ ಕೇಂದ್ರ ಹಾಗೂ ‘ಸಮರ್ಪಣ’ ಶೇಷಾದ್ರಿಪುರಂ ಸಂಜೆ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘ ಸಂಯುಕ್ತಾಶ್ರಯದಲ್ಲಿ ‘ಸಾಹಿತ್ಯರತ್ನ’ ಶ್ರೀ ಅನ್ನದಾನಯ್ಯ ಪುರಾಣಿಕ ಸ್ಮಾರಕದತ್ತಿ ವಿಶೇಷ ಉಪನ್ಯಾಸ ಕಾರ್ಯಕ್ರಮವು 2024 ನ. 05 ಮಂಗಳವಾರದಂದು ನಗರದ ಶೇಷಾದ್ರಿಪುರಂ ಸಂಜೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಶೇಷಾದ್ರಿಪುರಂ ಸಂಜೆ ಕಾಲೇಜಿನ ಪ್ರಾಂಶುಪಾಲ, ಗಾಂಧಿ ಶಾಂತಿ ಪ್ರತಿಷ್ಠಾನ ಗೌರವ ಕಾರ್ಯದರ್ಶಿ ಡಾ. ಎನ್ ಎಸ್ ಸತೀಶ್ ಅವರು ಮಾತನಾಡಿದರು.
‘ವಚನ ಸಾಹಿತ್ಯ ಮತ್ತು ಉಪನಿಷತ್ತಿಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ .ಟಿ. ಎನ್ ವಾಸುದೇವ ಮೂರ್ತಿ, "ಯಾರು ಆಧ್ಯಾತ್ಮವನ್ನು ನಿರಾಕರಿಸುತ್ತಾರೋ, ಅವರಿಗೆ ನಾಯಕ ನರಕ ಕಾದಿರುತ್ತದೆ ಎನ್ನುತ್ತಾರೆ. ಜಗತ್ತಿನ ಎಲ್ಲಾ ಅನುಭವಿಗಳು ಕೂಡ ಹೀಗೆ ಹೇಳುತ್ತಾರೆ.ನೀನು ಆಧ್ಯಾತ್ಮ ಅಥವಾ ಆಧ್ಯಾತ್ಮದ ಒಂದು ಜ್ಞಾನವನ್ನು ಪಡೆದ ಋಷಿಯನ್ನು, ಅನುಭಾವಿಯನ್ನು ನಿರಾಕರಿಸಿದರೆ ನೀನು ಸರ್ವನಾಶವಾಗುತ್ತೀಯಾ ಅಥವಾ ನಿನ್ನ ಬದುಕೇ ಶೂನ್ಯ. ನನಗಾದ ಅನುಭವವೇ ನಿನಗೆ ಆಗಬೇಕೆಂದು ಏನಿಲ್ಲ. ಇದು ಜಗತ್ತಿನ ನಿಯಮ ಕೂಡ ಅಲ್ಲ," ಎಂದರು.
ವೇದಿಕೆಯಲ್ಲಿದ್ದ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ಮಾತನಾಡಿ, "ಅನ್ನದಾನಯ್ಯ ಅವರಿಗೆ ಮೂಲ ಪ್ರೇರಣೆ ಗಾಂಧಿ, ಬುದ್ಧ, ಬಸವ. ಅವರು ಅದ್ಭುತವಾದ, ಸಾರ್ಥಕವಾದಂತಹ ಜೀವನವನ್ನು ನಡೆಸಿದರು. ಒಂದೇ ಕಾರ್ಯಕ್ರಮವನ್ನು ನಡೆಸಬೇಕಾದರೆ ಅವರು ಮಾಡುತ್ತಿದ್ದಂತಹ ರೂಪುರೇಷೆ ನಿಜಕ್ಕೂ ನಮಗೆಲ್ಲಾ ಮಾದರಿಯಾಗಿತ್ತು. ಪ್ರತಿಯೊಂದು ಕೂಡ ಶಿಸ್ತುಬದ್ಧವಾಗಿ ನಡೆಸುತ್ತಿದ್ದರು," ಎಂದು ತಿಳಿಸಿದರು.
ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, "ಗಾಂಧಿ, ಉಪನಿಷತ್ತು, ಮತ್ತು ವಚನಗಳು ಈ ಮೂರಕ್ಕೂ ಅವಿನಾಭಾವ ಸಂಬಂಧವಿದೆ. ಉಪನಿಷತ್ತಿನಲ್ಲಿ ಅಡಕವಾಗಿರುವ ಮುಖ್ಯ ಅಂಶ, ವಚನಕಾರರು ಹೇಗೆ ಅದನ್ನು ತಮ್ಮ ಅನುಭವದಲ್ಲಿ ಹಿಡಿದಿಟ್ಟುಕೊಂಡು ನೋಡಿದರು ಎನ್ನುವುದು. ಇನ್ನು ಅನ್ನದಾನಯ್ಯ ಅವರ ಕೆಲಸ ಬಹಳಷ್ಟು ವಿಶೇಷತೆಯಿದೆ ಕೂಡಿದೆ," ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...
ಬೆಂಗಳೂರು: ನಮ್ಮನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...
ಬೆಂಗಳೂರು: ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ...
©2024 Book Brahma Private Limited.