ಅನಂತಮೂರ್ತಿಯವರು ಕಥನ ಪ್ರಕಾರಕ್ಕೆ ತುಂಬ ಒಲಿದವರು; ಎಚ್.ಎಲ್. ಪುಷ್ಪ

Date: 31-12-1899

Location: ಬೆಂಗಳೂರು


ಬೆಂಗಳೂರು: “70ರ ದಶಕದ ಕಾವ್ಯ ನಾಟಕ ಕಾದಂಬರಿಗಳು ಮನುಷ್ಯನ ಅಂತರಂಗವನ್ನು ವಿಸ್ತರಿಸುವ, ಸಮಾಜದಲ್ಲಿದ್ದು ಒಂಟಿಯಾಗಿ ಜೀವಿಸುವ, ತಮ್ಮ ಪೂರ್ವಜರು ಪುರಾತನರು ಮಾಡಿರುವ ಪಾಪದ ಭಾರಗಳನ್ನು ಹೊತ್ತು ತಲ್ಲಣಿಸುವ, ಒಂದು ಹೊಸ ಪರಂಪರೆಯನ್ನು ಹುಟ್ಟುಹಾಕಿದೆ," ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್. ಎಲ್. ಪುಷ್ಪ ಅವರು ಹೇಳಿದರು.

ಸಾಹಿತ್ಯ ಅಕಾಡೆಮಿ ವತಿಯಿಂದ 2024 ನ. 14 ರಿಂದ ನ. 20 ರವರೆಗೆ ಮಲ್ಲತ್ತಹಳ್ಳಿಯ ಸಾಹಿತ್ಯ ಅಕಾಡೆಮಿಯಲ್ಲಿ ‘ಸಾಹಿತ್ಯಕ ಕಾರ್ಯಕ್ರಮಗಳು ಮತ್ತು ಪುಸ್ತಕ ಪ್ರದರ್ಶನ-ರಿಯಾಯಿತಿ ಮಾರಾಟ ಕಾರ್ಯಕ್ರಮ’ವನ್ನು ಹಮ್ಮಿಕೊಂಡಿದ್ದು, ನಂ.16 ರಂದು ನಡೆದ “ಯು. ಆರ್‌. ಅನಂತಮೂರ್ತಿ ಅವರ ಸಾಹಿತ್ಯ ಮನೋಗ್ರಾಫ್ - ಕುರಿತ ಉಪನ್ಯಾಸ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ” ದಲ್ಲಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

"ಅನಂತಮೂರ್ತಿ ಅವರು ಕಾವ್ಯ, ಪದ್ಯ, ಕಥೆ ಏನೇ ಬರೆದರು ಅವರ ಕಾವ್ಯದ ಪ್ರಜ್ಞೆ ಸದಾ ಕೆಲಸ ಮಾಡುತ್ತೆ ಎನ್ನುದನ್ನು ತೋರಿಸಿದ್ದಾರೆ. ಅನಂತಮೂರ್ತಿಯವರು ಕಥನ ಪ್ರಕಾರಕ್ಕೆ ತುಂಬ ಒಲಿದವರು," ಎಂದರು.

ಇಂಗ್ಲೀಷ್ ಮತ್ತು ಕನ್ನಡ ಲೇಖಕರಾದ ಎನ್. ಮನು ಚಕ್ರವರ್ತಿ ಅವರು ಮಾತನಾಡಿ, "ಕಥೆಗಳು ಸ್ವತಂತ್ರವಾಗಿರುತ್ತದೆ, ನಿರೀಕ್ಷೆ ಇಟ್ಟುಕೊಂಡು ಓದುವುದು ತಪ್ಪು. ಕಥೆಯನ್ನು ನಂಬಿ, ಕಥೆಗಾರರನ್ನಲ್ಲ ಎಂದು ಲಾರೆನ್ಸ್ ಹೇಳಿದ ಮಾತನ್ನು ನೆನೆಯುತ್ತಾ, ‘ಅನಂತಮೂರ್ತಿ ಅವರು ಟೀಕೆ ಮಾಡಿದರು ಮನುಷ್ಯ ಪ್ರಜ್ಞೆ ಇಟ್ಟುಕೊಂಡೆ ಮಾಡುತ್ತಾರೆ," ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಮಾನ್ಯ ಸಮಿತಿ ಮತ್ತು ಕನ್ನಡ ಸಲಹಾ ಮಂಡಳಿ, ಸಾಹಿತ್ಯ ಅಕಾಡೆಮಿ ಸದಸ್ಯರಾದ ಮನು ಬಳಿಗಾರ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.

ವೇದಿಕೆಯಲ್ಲಿ ಉಸ್ತುವಾರಿ ಅಧಿಕಾರಿ, ಸಾಹಿತ್ಯ ಅಕಾದೆಮಿಯ ಎಲ್. ಸುರೇಶ್ ಕಮಾರ್‌ ಅವರು ಉಪಸ್ಥಿತರಿದ್ದರು.

MORE NEWS

ಪಿ. ಶೇಷಾದ್ರಿ ಸಿನಿಮಾವಲೋಕನಕ್ಕೆ 'ಮುನ್ನುಡಿ'

21-11-2024 ಬೆಂಗಳೂರು

ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...

ವಿಜಯ ರಾಘವೇಂದ್ರ ನಟನೆಯ 'ರುದ್ರಾಭಿಷೇಕಂ' ಚಿತ್ರಕ್ಕೆ ಚಾಲನೆ

21-11-2024 ಬೆಂಗಳೂರು

ಬೆಂಗಳೂರು: ನಮ್ಮ‌ನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...

87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೊ. ರು. ಚನ್ನಬಸಪ್ಪ ಆಯ್ಕೆ

20-11-2024 ಬೆಂಗಳೂರು

ಬೆಂಗಳೂರು: ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ...