ಅದ್ಧೂರಿಯಾಗಿ ಚಾಲನೆಗೊಂಡ ‘ವಿಜಯ ಕರ್ನಾಟಕ ಕನ್ನಡ ಹಬ್ಬ’

Date: 09-11-2024

Location: ಬೆಂಗಳೂರು


ಬೆಂಗಳೂರು: ವಿಜಯ ಕರ್ನಾಟಕ ಕನ್ನಡ ಹಬ್ಬದ ಕಾರ್ಯಕ್ರಮವು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ 2024 ನಂ. 09, 10ರಂದು ಹಮ್ಮಿಕೊಂಡಿದ್ದ ಎರಡು ದಿನಗಳ ಕನ್ನಡ ಹಬ್ಬ ಕಾರ್ಯಕ್ರಮವು ಮೊದಲನೇ ದಿನದಂದೂ ಅದ್ದೂರಿಯಾಗಿ ನೆರವೇರಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ರಾಜ್ಯ ಸಚಿವ ಹಾಗೂ ರೈಲ್ವೆ ಮತ್ತು ಜಲ ಶಕ್ತಿ ಸಚಿವಾಲಯ ವಿ. ಸೋಮಣ್ಣ, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಹರಿಹರ ಪಂಚಮಸಾಲಿ ಪೀಠದ ಶ್ವಾಸಗುರು ವಚನಾನಂದ ಸ್ವಾಮೀಜಿ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಉಪಕುಲಪತಿ ಲಿಂಗರಾಜ್ ಗಾಂಧಿ, ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಸುರ್ದಶನ್ ಬಲ್ಲಾಳ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕೋಟೆಗದ್ದೆ ರವಿ ಅವರಿಂದ ಚಿತ್ರಕಲೆ ಪ್ರದರ್ಶನ ನಡೆಯಿತು.

ವಿಜಯ ಕರ್ನಾಟಕ ಕನ್ನಡ ಹಬ್ಬದ ಪುಸ್ತಕ ಮೇಳಕ್ಕೆ ಕನ್ನಡದ ಹೆಮ್ಮೆಯ ಲೇಖಕ ವಸುಧೇಂದ್ರ ಹಾಗೂ ನಟಿ, ಲೇಖಕಿ ಶ್ವೇತಾ ಶ್ರೀವಾತ್ಸವ ಅವರು ಚಾಲನೆ ನೀಡಿದರು. ಸಮಾರಂಭದಲ್ಲಿ ಹಮ್ಮಿಕೊಂಡಿದ್ದ ಹಳೆ ಮೈಸೂರು, ಕರಾವಳಿ, ಮಲೆನಾಡು, ಬಯಲುಸೀಮೆ, ಉತ್ತರ ಕರ್ನಾಟಕ ಭಾಗದ ಸ್ಥಳೀಯ ತಿಂಡಿ ತಿನಿಸುಗಳ ಮೇಳವನ್ನು ಒಗ್ಗರಣೆ ಡಬ್ಬಿಯ ಮುರಳಿ ಅವರು ಉದ್ಘಾಟಿಸಿದರು.

MORE NEWS

ಪಿ. ಶೇಷಾದ್ರಿ ಸಿನಿಮಾವಲೋಕನಕ್ಕೆ 'ಮುನ್ನುಡಿ'

21-11-2024 ಬೆಂಗಳೂರು

ಬೆಂಗಳೂರು: ಪಿ. ಶೇಷಾದ್ರಿ ಸಿನಿಮಾವಲೋಕನ, ಚಿತ್ರೋತ್ಸವ, ಸಿನಿಮಂಥನ 'ಮುನ್ನುಡಿ' ಚಿತ್ರದಿಂದ ಆರಂಭಗೊಂಡಿದೆ. ಹ...

ವಿಜಯ ರಾಘವೇಂದ್ರ ನಟನೆಯ 'ರುದ್ರಾಭಿಷೇಕಂ' ಚಿತ್ರಕ್ಕೆ ಚಾಲನೆ

21-11-2024 ಬೆಂಗಳೂರು

ಬೆಂಗಳೂರು: ನಮ್ಮ‌ನಾಡಿನ ಸಾಂಸ್ಕೃತಿಕ ಇತಿಹಾಸ, ಆಚರಣೆಗಳು, ಕಲೆಯನ್ನು ಪ್ರತಿಬಿಂಬಿಸುವ ಒಂದಷ್ಟು ಚಲನಚಿತ್ರಗಳು ಈಗ...

87ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಗೊ. ರು. ಚನ್ನಬಸಪ್ಪ ಆಯ್ಕೆ

20-11-2024 ಬೆಂಗಳೂರು

ಬೆಂಗಳೂರು: ಮಂಡ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ...