ಬೆಂಗಳೂರಿನ ಸಪ್ನ ಬುಕ್ ಹೌಸ್ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ `67 ಕನ್ನಡ ಪುಸ್ತಕಗಳ ಲೋಕಾರ್ಪಣೆ' ಕಾರ್ಯಕ್ರಮವು ನಗರದ ಕುಮಾರ ಪಾರ್ಕ್ ಪೂರ್ವದ ಗಾಂಧಿ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ದೊಡ್ಡರಂಗೇಗೌಡ, '' 67 ಕನ್ನಡ ಸಾಹಿತಿಗಳ ಕೃತಿ ಬಿಡುಗಡೆ ಕನ್ನಡ ಸೃಜನಶೀಲತೆಗೆ ಹಾಗೂ ಕನ್ನಡ ಪರಂಪರೆಯ ಮುಂದುವರಿಕೆಯ ಪ್ರಾರಂಭದ ಸೂಚನೆಯಾಗಿದ್ದು, ಇದು ಕನ್ನಡ ಸಾಹಿತ್ಯದ ಅಸ್ಮಿತೆಯಾಗಿದೆ,” ಎಂದು ಹೇಳಿದರು.
ಕೃತಿ ಪರಿಚಯ ಮಾಡಿದ ಸಾಹಿತಿ ಪ್ರೊ.ಮಲ್ಲೆಪುರಂ ಜಿ.ವೆಂಕಟೇಶ ಮಾತಾನಾಡಿ, ಕೃತಿಗಳು ವಿಸ್ತಾರವಾಗಿದ್ದರೆ ಓದುಗರಲ್ಲಿ ಓದುವಿಕೆಯ ಆಸಕ್ತಿ ಹೆಚ್ಚುತ್ತದೆ. ಒಂದು ಕೃತಿ ತನ್ನಲೇ ವಿಸ್ತಾರತೆಯನ್ನು ಹೊಂದಿದ್ದರೆ ಹೊರ ಜಗತ್ತಿಗೆ ತಲುಪಲು ಬಹಳ ಸುಲಭ ಸಾಧ್ಯವಾಗುತ್ತದೆ,” ಎಂದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದಾನಾಥ ಮಹಾಸ್ವಾಮೀಜಿ, ಇನ್‌ಫೋಸಿಸ್ ಅಧ್ಯಕ್ಷೆ ಲೇಖಕಿ ಸುಧಾ ಮೂರ್ತಿ, ಸ್ವಪ್ನ ಬುಕ್ ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ, ಹಿರಿಯ ಸಾಹಿತಿ ಹಂ.ಪ. ನಾಗರಾಜಯ್ಯ, ಕಮಲಾ ಹಂಪನಾ, ದೊಡ್ಡರಂಗೇಗೌಡ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಜಿ.ಎನ್. ರಂಗನಾಥರಾವ್, ಪಿ.ಎಸ್. ಶಂಕರ್, ಸಿ.ಎನ್. ರಾಮಚಂದ್ರನ್, ಬಿ.ಆರ್. ಲಕ್ಷ್ಮಣರಾವ್, ಪ್ರೊ.ಜಿ. ಅಬ್ದುಲ್ ಬಷೀರ್, ಸಂಪಟೂರು ವಿಶ್ವನಾಥ್, ಚಂದ್ರಕಾಂತ ಪೋಕಳೆ, ಕುಂ. ವೀರಭದ್ರಪ್ಪ, ಎಂ.ಎಸ್. ನರಸಿಂಹಮೂರ್ತಿ, ರಾ.ನಂ. ಚಂದ್ರಶೇಖರ, ಡಿ.ವಿ. ಗುರುಪ್ರಸಾದ್, ಟಿ.ಆರ್. ಅನಂತರಾಮು, ರಾಘವೇಂದ್ರ ಪಾಟೀಲ, ರಂಗರಾಜು ನಾಗವಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪೋಟೋ ಗ್ಯಾಲರಿ:
“ಒಟ್ಟು ಕಾದಂಬರಿಯಲ್ಲಿ ಕಾಲಾವಧಿಯನ್ನು (ಟೈಮ್ ಲ್ಯಾಪ್ಸ್) ನಿರ್ವಹಿಸುವಲ್ಲಿ ಲೇಖಕರು ಇನ್ನಷ್ಟು ಜಾಣೆ ತೋರಬೇಕಿತ್...
“ಬೃಹತ್ ಆಕರ ಗ್ರಂಥಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿ ಇರುವ ಸಾರವನ್ನು ಹೀರಿ ತಮ್ಮದೇ ದಾಟಿಯಲ್ಲಿ ಓದುಗರಿಗೆ ಉಣಬಡ...
"ಪ್ರತಿಯೊಂದು ಲೇಖನವು ಕೃತಿಯ ಸಂಕ್ಷಿಪ್ತ ವಿವರಣೆಯನ್ನು ಕೊಟ್ಟು ಕಾದಂಬರಿಯ ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅದರ ...
©2025 Book Brahma Private Limited.