2024ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗೆ ಹಸ್ತಪ್ರತಿಗಳ ಆಹ್ವಾನ

Date: 04-09-2024

Location: ಬೆಂಗಳೂರು


ಧಾರವಾಡದ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯು 2024ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗೆ ಅಪ್ರಕಟಿತ ಕಥಾಸಂಕಲನಗಳ ಹಸ್ತಪ್ರತಿಗಳನ್ನು ಆಹ್ವಾನಿಸಿದೆ.

ಈ ಪ್ರಶಸ್ತಿಯು 20,000 ರೂ. ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಆಸಕ್ತ ಲೇಖಕ/ಕಿಯರು ನಿಯಮಗಳಿಗನುಗುಣವಾಗಿ ಹಸ್ತಪ್ರತಿಗಳನ್ನು ಕಳುಹಿಸಲು ಸೂಚಿಸಲಾಗಿದೆ.

ನಿಯಮಗಳು:
• ಈ ಕಥಾ ಪ್ರಶಸ್ತಿಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
• ಈ ಪ್ರಶಸ್ತಿಗೆ ಲಿಂಗ, ವಯೋಮಿತಿ, ಜಾತಿ, ಧರ್ಮ, ಪ್ರದೇಶ ಸೇರಿದಂತೆ ಯಾವುದೇ ಕೃತಕ ಮಾನದಂಡಗಳಿರುವುದಿಲ್ಲ. ಗುಣಮಟ್ಟವೊಂದೇ ಆಯ್ಕೆಯ ಏಕೈಕ ಮಾನದಂಡ.
• ಕಥೆಗಳು ಈ ಮೊದಲು ಪುಸ್ತಕ ರೂಪದಲ್ಲಿ ಪ್ರಕಟವಾಗಿರಬಾರದು. ಪತ್ರಿಕೆ ಮತ್ತು ವಿಶೇಷಾಂಕಗಳಲ್ಲಿ (ಪ್ರಿಂಟ್ ಅಥವಾ ಡಿಜಿಟಲ್ ಮೀಡಿಯಾ) ಪ್ರಕಟವಾದ ಕಥೆಗಳನ್ನು ಕಳುಹಿಸಬಹುದು.
• ಕನಿಷ್ಠ 5 ಮತ್ತು ಗರಿಷ್ಠ 20 ಅಪ್ರಕಟಿತ ಕಥೆಗಳನ್ನು ಕಳುಹಿಸಬಹುದು.
• ಕಥೆಗಳನ್ನು ಎ-4 ಸೈಜಿನ ಕಾಗದದಲ್ಲಿ 12 ಫಾಂಟು ಸೈಜಿನಲ್ಲಿ ತಪ್ಪಿಲ್ಲದಂತೆ ಟೈಪು ಮಾಡಿ ಕಳುಹಿಸಬೇಕು.
• ಹಸ್ತಪ್ರತಿಗಳು ಕನಿಷ್ಠ 80 ಪುಟ ಮತ್ತು ಗರಿಷ್ಠ 120 ಪುಟಗಳ ಮಿತಿಯನ್ನು ಮೀರಬಾರದು.
• ಹಸ್ತಪ್ರತಿಗಳ ಪ್ರಿಂಟೌಟ್ ತೆಗೆದು, ಬೈಂಡು ಮಾಡಿಸಿದ ಮೂರು ಪ್ರತಿಗಳನ್ನು ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.
• ಹಸ್ತಪ್ರತಿಗಳ ಹಾರ್ಡ್ ಕಾಪಿ ಮಾತ್ರ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಸಾಫ್ಟ್ ಕಾಪಿ ಸ್ವೀಕರಿಸಲಾಗುವುದಿಲ್ಲ.
• ಲೇಖಕ/ಕಿಯರ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ ಮತ್ತು ಒಂದು ಫೋಟೋವನ್ನು ಹಸ್ತಪ್ರತಿಯೊಂದಿಗೆ ಪ್ರತ್ಯೇಕವಾಗಿ ಲಗತ್ತಿಸಬೇಕು.
• ನಿಯಮಗಳನ್ನು ಪಾಲಿಸದ ಮತ್ತು ನಿಗದಿತ ದಿನಾಂಕದ ನಂತರ ಬಂದ ಹಸ್ತಪ್ರತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
• ಹಸ್ತಪ್ರತಿಗಳನ್ನು ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ 25, 2024.

ಹಸ್ತ ಪ್ರತಿಗಳನ್ನು ಕಳುಹಿಸಬೇಕಾದ ವಿಳಾಸ : ವಿಕಾಸ ಹೊಸಮನಿ, ಸಂಚಾಲಕರು, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ, ಧಾರವಾಡ ೨ನೇ ಕ್ರಾಸ್, ೨ನೇ ಮೇನ್, ದಾನೇಶ್ವರಿ ನಗರ, ಹಾವೇರಿ - 581110 ಮೊ: 9110687473

MORE NEWS

ನಳಿನಿ ಟಿ. ಭೀಮಪ್ಪ ಹಾಗೂ ಸುಮಾ ರಮೇಶ್ ಅವರ ಕೃತಿಗಳ ಲೋಕಾರ್ಪಣಾ ಸಮಾರಂಭ

20-01-2025 ಬೆಂಗಳೂರು

ಬೆಂಗಳೂರು: ನ್ಯೂವೇವ್ ಬುಕ್ಸ್ ವತಿಯಿಂದ ಹಾಸ್ಯ ಲೇಖಕಿ, ಕಥೆಗಾರ್ತಿ ನಳಿನಿ ಟಿ. ಭೀಮಪ್ಪ ಅವರ ‘ಚಿತ್ತ ಬಕ್ಕ&rsqu...

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಅನುವಾದಕ ಕೆ.ಕೆ.ಗಂಗಾಧರನ್ ನಿಧನ

19-01-2025 ಬೆಂಗಳೂರು

"ಸರಳ ಸಜ್ಜನ ವ್ಯಕ್ತಿತ್ವದ ಸ್ನೆಹಮಯಿ ಕೆಕೆಜಿಯವರ ಅನರಿಕ್ಷಿತ ನಿಧನ ಕನ್ನಡ ಮಾತ್ರವಲ್ಲದೆ ಮಲೆಯಾಳ ಸಾಂಸ್ಕೃತಿಕ ಲೊ...

ಈ ಅನುವಾದ ಎಂತಹವರನ್ನೂ ಬಾಚಿ ತಬ್ಬಿಕೊಳ್ಳುತ್ತದೆ

18-01-2025 ಬೆಂಗಳೂರು

“ಅನುವಾದಗಳ ಮೂಲಕ ಅನ್ಯಭಾಷಾ ಸಂಸ್ಕೃತಿಗಳ ಸಂಪರ್ಕವೇ ವಾಹಕವಾಗಿ ಭಾಷೆ ಮತ್ತು ಸಾಹಿತ್ಯ ಅಭಿವೃದ್ಧಿಯಾಗುತ್ತದೆ ಎಂಬ...