ಕುಟುಂಬದವರು ಹೆಮ್ಮೆ ಪಡುವ ಕೆಲಸ ಮಾಡಿ; ಅಭಿಮಾನಿಗಳಲ್ಲಿ ಯಶ್ ಕರೆ

Date: 06-01-2025

Location: ಬೆಂಗಳೂರು


ಕೆಲವು ವರ್ಷಗಳಿಂದ ಯಶ್‍ ತಮ್ಮ ಹುಟ್ಟುಹಬ್ಬವನ್ನು (ಜನವರಿ 08) ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದನ್ನು ಬಿಟ್ಟಿದ್ದಾರೆ. ಊರಿನಲ್ಲಿರುವುದಿಲ್ಲ ಎಂಬ ಕಾರಣ ನೀಡಿ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಬಾರಿಯಾದರೂ ಯಶ್‍ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಈ ಬಾರಿಯೂ ಬೇಸರವಾಗಿದೆ. ಯಶ್‍ ಈ ಬಾರಿಯೂ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಅಭಿಮಾನಿಗಳಿಗೆ ಪತ್ರವನ್ನೂ ಬರೆದಿದ್ದಾರೆ.

ಈ ಪತ್ರದಲ್ಲಿ ಅವರು ಈ ಬಾರಿ ಮನಸ್ಸಿಗೆ ನೋವಾಗುವಂತೆ ಮಾಡಬೇಡಿ ಎಂದು ಮನವಿ ಮಾಡಿರುವ ಯಶ್‍, ‘ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಫೆಕ್ಸ್, ಬ್ಯಾನರ್ ಗಳ ಯಾವುದೇ ಆಡಂಬರ ಮಾಡದೆ, ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ, ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ, ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ’ ಎಂದು ಯಶ್‍ ಬರೆದುಕೊಂಡಿದ್ದಾರೆ.

ನನ್ನ ಮನಸ್ಸಿಗೆ ನೋವು ಮಾಡಬೇಡಿ ಎಂದು ಯಶ್‍ ಹೇಳಿರುವುದಕ್ಕೂ ಕಾರಣವಿದೆ. ಪ್ರಮುಖವಾಗಿ, ಯಶ್‍ ಕಳೆದ ವರ್ಷ ತಮ್ಮ ಹುಟ್ಟುಹಬ್ಬವನ್ನೇನೂ ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳಲಿಲ್ಲ. ಆದರೂ ಕಳೆದ ವರ್ಷ ಯಶ್‍ ಹುಟ್ಟುಹಬ್ಬದ ಸಂದರ್ಭದಲ್ಲಿ ಗದಗ ಜಿಲ್ಲೆಯಲ್ಲಿ ಯಶ್‍ ಅವರ ಮೂವರು ಅಭಿಮಾನಿಗಳು ತಮ್ಮ ಮೆಚ್ಚಿನ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಫ್ಲೆಕ್ಸ್ ಕಟ್ಟುವುದಕ್ಕೆ ಹೋಗಿ, ಕರೆಂಟ್‍ ಹೊಡೆಸಿಕೊಂಡು ನಿಧನರಾಗಿದ್ದರು. ಇನ್ನೂ ಮೂವರು ಆಸ್ಪತ್ರೆಗೆ ದಾಖಲಾಗಿದ್ದರು. ಯಶ್‍, ಮೃತರ ಮನೆಗಳಿಗೆ ಹೋಗಿ ಸಂತಾಪ ವ್ಯಕ್ತಪಡಿಸಿ ಬಂದಿದ್ದರು. ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, ‘ನೀವು ನನ್ನ ನಿಜವಾದ ಅಭಿಮಾನಿಯಾಗಿದ್ದರೆ, ಇದ್ದಲ್ಲಿಂದಲೇ ಹಾರೈಸಿ. ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಈ ವರ್ಷ ಹುಟ್ಟುಹಬ್ಬಕ್ಕೆ ಕೆಲವು ದಿನಗಳಿವೆ ಎನ್ನುವಾಗಲೇ, ಅವರು ಸೋಷಿಯಲ್‍ ಮೀಡಿಯಾದಲ್ಲಿ ಒಂದು ಪತ್ರ ಹಾಕುವ ಮೂಲಕ ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

🙏 pic.twitter.com/lmTH0lqiDx

— Yash (@TheNameIsYash) December 30, 2024

MORE NEWS

Unlock Raghava; ಶಿವಮೊಗ್ಗದ ಭಾರತ್ ಸಿನಿಮಾಸ್‍ನಲ್ಲಿ ಬಿಡುಗಡೆ ಆಯಿತು ‘ಲಾಕ್ ಲಾಕ್’ ಹಾಡು

08-01-2025 ಬೆಂಗಳೂರು

ಮಿಲಿಂದ್‍ ಮತ್ತು ರಚೆಲ್‍ ಡೇವಿಡ್‍ ಅಭಿನಯದ ‘ಅನ್‍ಲಾಕ್‍ ರಾಘವ’ ಚಿತ್ರವು ಫೆಬ್ರವ...

ಸದ್ಯ ಓಟಿಟಿಯಲ್ಲಿ ‘UI’ ಇಲ್ಲ; ಸ್ಪಷ್ಟನೆ ಕೊಟ್ಟ ನಿರ್ಮಾಪಕರು

08-01-2025 ಬೆಂಗಳೂರು

ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರವು ಡಿಸೆಂಬರ್‍ 20ರಂದು ಬಿಡುಗಡೆಯಾಗಿ, ಚಿತ್ರಕ್ಕೆ ...

ಫೆಬ್ರವರಿ 7ರಂದು ‘ಗಜರಾಮ’ನಾಗಿ ಬರಲಿದ್ದಾರೆ ರಾಜವರ್ಧನ್‍

08-01-2025 ಬೆಂಗಳೂರು

ಕಳೆದ ವರ್ಷದ ಕೊನೆಯ ಶುಕ್ರವಾರದಂದು ರಾಜವರ್ಧನ್‍ ಅಭಿನಯದ ‘ಗಜರಾಮ’ ಚಿತ್ರವು ಬಿಡಗುಡೆಯಾಗಬೇಕಿತ್ತು. ...