ವ್ಯಂಗ್ಯ ಚಿತ್ರಕಲಾವಿದ ನೀರ್ನಳ್ಳಿ ಗಣಪತಿ ಅವರಿಗೆ ‘ಉಂಡೆಮನೆ ಪ್ರಶಸ್ತಿ’

Date: 18-09-2023

Location: ಕಾಸರಗೋಡು


ಕಾಸರಗೋಡು: ಯಲ್ಲಾಪುರ ತಾಲ್ಲೂಕು ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಖ್ಯಾತ ವ್ಯಂಗ್ಯ ಚಿತ್ರಕಲಾವಿದ ನೀರ್ನಳ್ಳಿ ಗಣಪತಿ ಸೀತಾರಾಮ ಹೆಗಡೆ (ನೀರ್ನಳ್ಳಿ ಗಣಪತಿ) ಯವರಿಗೆ 2023 ನೇ ಸಾಲಿನ ‘ಉಂಡೆಮನೆ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ವ್ಯಂಗ್ಯ ಚಿತ್ರಕಲಾವಿದರಾಗಿ ಬೆಳೆದು ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ರಾಮಕಥೆಯಲ್ಲಿ ಶ್ರೀಮದ್ವಾಲ್ಮೀಕಿರಾಮಾಯಣದ "ಕುಂಚಕವಿ"ಯಾಗಿ ಅರಳಿದ ನೀರ್ನಳ್ಳಿಯವರು ಗೀತರಾಮಾಯಣದ ಸರಣಿ ಕಾರ್ಯಕ್ರಮಗಳಲ್ಲೂ 'ಗೀತ-ಕುಂಚ' ಕಲಾವಿದರಾಗಿ ಹೆಸರು ಪಡೆದಿರುತ್ತಾರೆ. ಶಂಕರಾಚಾರ್ಯರ ಸ್ತೋತ್ರ ಗಾಯನ ಸಂದರ್ಭದಲ್ಲೂ ಭಾವಕ್ಕೆ ಅನುಗುಣವಾಗಿ ಚಿತ್ರ ರಚಿಸಿ ಯಶಸ್ವಿಯಾದ ಗರಿಮೆ ಇವರದ್ದಾಗಿದೆ. ಇವರ ವ್ಯಂಗ್ಯ ಚಿತ್ರಗಳು ನಾಡಿನ ಹಲವು ಪತ್ರಿಕೆಗಳಲ್ಲಿ ನಿಯತವಾಗಿ ಪ್ರಕಟವಾಗುತ್ತಿದ್ದುದು ಅವರ ಸಮಕಾಲೀನ ಆಗುಹೋಗುಗಳ ಬಗೆಗಿರುವ ಸ್ಪಂದನೆಗೆ ಇರುವ ಸಾಕ್ಷಿಗಳಾಗಿವೆ.

MORE NEWS

ಸಮಗ್ರ ಕರ್ನಾಟಕದ ಕಲೆಯೊಂದಿದ್ದರೆ ಅದು ಯಕ್ಷಗಾನ ಮಾತ್ರ: ನರಹಳ್ಳಿ

16-09-2024 ಬೆಂಗಳೂರು

ಬೆಂಗಳೂರು: ಯಕ್ಷವಾಹಿನಿ ಪ್ರತಿಷ್ಠಾನ ಮತ್ತು ಹೆಗ್ಗೋಡಿನ ಯಕ್ಷ ದುರ್ಗ ಕಲಾ ಬಳಗ ಜಂಟಿಯಾಗಿ ಹಮ್ಮಿಕೊಂಡಿದ್ದ ಪಿ. ಚಂದ್ರಿ...

ಎಸ್.ಎಲ್.ಭೈರಪ್ಪ ಅವರಿಗೆ ‘ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ’

16-09-2024 ಬೆಂಗಳೂರು

ಬೀದರ್: ಹಾರಕೂಡ ಹಿರೇಮಠ ಸಂಸ್ಥಾನದ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿಗೆ ನಾಡಿನ ಹಿರಿಯ ...

ಸಣ್ಣ ಕತೆಗಾರ್ತಿ, ರಂಗಕಲಾವಿದೆ ಮನೋರಮಾ ಎಂ.ಭಟ್ ಇನ್ನಿಲ್ಲ

16-09-2024 ಬೆಂಗಳೂರು

ಬೆಂಗಳೂರು: ಸಣ್ಣ ಕತೆಗಾರ್ತಿ, ಆಕಾಶವಾಣಿ ಕಲಾವಿದೆ, ಅಂಕಣಗಾರ್ತಿ, ರಂಗಕಲಾವಿದೆ, ಕವಯಿತ್ರಿ, ಲೇಖಕಿಯಾಗಿ ಗುರುತಿಸಿಕೊಂಡ...