Date: 05-02-2022
Location: ಬಾಗಲಕೋಟೆ
ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಅವರು ಹೃದಯಾಘಾತದಿಂದ ಶನಿವಾರದಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸೂಫಿ ಸಂತ, ತತ್ವಪದ ಗಾಯಕರೆಂದೇ ಪ್ರಸಿದ್ದರಾಗಿದ್ದ ಅವರು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ಪಟ್ಟಣದಲ್ಲಿ ಇಂದು ಬೆಳಗ್ಗೆ 6.30ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನದಿಂದ ಹೃದಯದ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಗ್ಗೆ ಮತ್ತೆ ಹೃದಯಘಾತವಾಗಿದ್ದು ಇಬ್ರಾಹಿಂ ಸುತಾರ್ ಅವರ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಅದರೆ ಚಿಕಿತ್ಸೆ ಫಲಕರಿಯಾಗದೇ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಸರ್ವಧರ್ಮ ಸಮನ್ವಯದ ಪ್ರತಿಪಾದಕ : ಇಬ್ರಾಹಿಂ ಸುತಾರ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದವರು.1940 ಮೇ 10ರಂದು ಜನಿಸಿದರು. ತಂದೆ ನಾಬಿಸಾಹೇಬ್ ತಾಯಿ ಅಮೀನಾಬಿ. ಬಡಗಿ ಕುಟುಂಬದಲ್ಲಿ ಜನಿಸಿದ ಅವರು ಬಡತನದ ಕಾರಣದಿಂದ ಮೂರನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದರು. ವೃತ್ತಿಯಾಗಿ ನೇಕಾರಿಕೆಯನ್ನು ಆಯ್ದುಕೊಂಡವರು. ಬಾಲ್ಯದಲ್ಲಿಯೇ ಕುರಾನ್ ಅಧ್ಯಯನ ಮಾಡಿ ಧಾರ್ಮಿಕತ್ವದ ಜೊತೆಗೆ ತತ್ವಪದ, ವಚನಗಳನ್ನು ಕಲಿತು ಉಪನಿಷತ್ತಿನ ಸಾರವನ್ನು ತಿಳಿದುಕೊಂಡವರು. ಅವರನ್ನು ಸರ್ವಧರ್ಮ ಸಮನ್ವಯದ ಪ್ರತಿಪಾದಕರೆಂದು ಕೂಡ ಗುರುತಿಸಲಾಗಿದೆ.
ಬೆಂಗಳೂರು: ಸುಗಮ ಸಂಗೀತ ಕ್ಷೇತ್ರಕ್ಕೆ ಲಕ್ಷ್ಮೀ ನಾರಾಯಣ ಭಟ್ಟ ಅವರು ಅನುಪಮವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರು ಯಾ...
ಬೆಂಗಳೂರು: “ಎಕ್ಸ್ ಕ್ಯೂಸ್ ಮಿ” ಸಿನಿಮಾದ ನಂತರ ಎರಡು ದಶಕಗಳ ಹತ್ತಿರ ಮ್ಯೂಸಿಕಲ್ ಲವ್ ಸ್ಟೋರಿ ಥೀಮ್&zwn...
ಬೆಂಗಳೂರು: ನವೆಂಬರ್ ಎಂದರೆ ಕನ್ನಡದ ಹಬ್ಬದ ಮಾಸ. ಈ ಮಾಸಕ್ಕೆ ಮೆರುಗು ಹೆಚ್ಚಿಸಲು ನಗರದಲ್ಲಿ ಸಾಹಿತ್ಯ ಆಸಕ್ತರಿಗ...
©2024 Book Brahma Private Limited.