ಸಾಹಿತ್ಯ ಮತ್ತು ಒಡನಾಟ ಒಂದೇ ನಾಣ್ಯದ ಎರಡು ಮುಖ; ವಿ. ಸೋಮಣ್ಣ

Date: 20-10-2024

Location: ಬೆಂಗಳೂರು


ಬೆಂಗಳೂರು: ಸಂಸ್ಕೃತಿ ವಿಕಾಸ ಮತ್ತು ಮಾನವ ವಿಕಾಸ ವತಿಯಿಂದ ಬೆಂಗಳೂರಿನ ಡಾ.ಸಿ. ಸೋಮಶೇಖರ-ಎನ್. ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನದಿಂದ ಜೀವಮಾನ ಸಾಧನೆಗಾಗಿ ನಾಡಿನ ಹಿರಿಯ ಸಾಧಕರಿಗೆ ‘ಸಂಸ್ಕೃತಿ ಸಂಗಮ’ 2024 ಪ್ರಶಸ್ತಿ ಪ್ರದಾನ ಸಮಾರಂಭವು 2024 ಅ. 20ನೇ ಭಾನುವಾರದಂದು ನಗರದ ಕುಮಾರಕೃಪ ರಸ್ತೆಯ ಗಾಂಧೀ ಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನೂತನ ರೈಲ್ವೆ ಸಚಿವ ವಿ. ಸೋಮಣ್ಣ ಮಾತನಾಡಿ, "ಸಾಹಿತ್ಯ ಮತ್ತು ಒಡನಾಟ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದೇಶ ಅನೇಕ ವಿಚಾರಧಾರೆಗಳನ್ನು ನಾವು ನೋಡುವಾಗ ನಮ್ಮ ದೇಶದ ಸಾಹಿತ್ಯ ಇರಬಹುದು ಅಥವಾ ಸಂಸ್ಕಾರವೇ ಇರಬಹುದು, ನಮ್ಮವರ ಒಡನಾಟ ಇರಬಹುದು, ಬೇರೆ ಯಾವುದೇ ದೇಶಕ್ಕೆ ಸರಿಸಾಟಿಇಲ್ಲದೇ ತಮ್ಮ ತಮ್ಮ ಬದುಕನ್ನು ನಿರ್ವಾಹಣೆ ಮಾಡತಿರತಕ್ಕಂತಹ ಕೆಲಸವನ್ನು ಸಾವಿರಾರು ವರ್ಷಗಳಿಂದ ನಮ್ಮ ದೇಶದಲ್ಲಿ ಮಾಡಿಕೊಂಡು ಬರಲಾಗುತ್ತಿದೆ. ಇದಕ್ಕೆ ಹಿರಿಯರು ಕೊಟ್ಟಂತಹ ದೊಡ್ಡ ಸಂದೇಶ, ಆಶೀರ್ವಾದ ಹಾಗೂ ಮಾರ್ಗದರ್ಶನವೇ ಕಾರಣ. ಸೋಮಶೇಖರ್ ಅವರ ವಿಚಾರಧಾರೆಗಳನ್ನು ನಾನು ಬರುವಾಗಲೂ ನೋಡುತ್ತಾ ಬಂದೆ. ಅವರ ಪ್ರಮುಖವಾದ ಧ್ಯೇಯೋದ್ದೇಶಗಳನ್ನು ಕೂಡ ನೋಡಿದ್ದೇನೆ," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಸಾಹಿತ್ಯಾಸಕ್ತರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

 

MORE NEWS

‘ಸಾಹಿತ್ಯ ಬಂಗಾರ ಪ್ರಶಸ್ತಿ’ ಗೆ ಕುಂ.ವಿ, ಸುಶೀಲಮ್ಮ, ಪ್ರತಿಭಾ ಆಯ್ಕೆ

22-10-2024 ಬೆಂಗಳೂರು

ಬೆಂಗಳೂರು: ಎಸ್. ಬಂಗಾರಪ್ಪ ವಿಚಾರ ವೇದಿಕೆಯಿಂದ ಕೊಡಮಾಡುವ 2024ನೇ ಸಾಲಿನ ’ಸೇವಾ ಬಂಗಾರ ಪ್ರಶಸ್ತಿ’ ಗೆ ...

ಆಮೂರ ಅವರು ಬರವಣಿಗೆಯ ಬದುಕನ್ನು ತಪಸ್ಸಿನಂತೆ ಸಾಗಿಸಿದರು; ರಾಘವೇಂದ್ರ

21-10-2024 ಬೆಂಗಳೂರು

ಧಾರವಾಡ: ಜಿ.ಬಿ. ಜೋಶಿ ಮೆಮೊರಿಯಲ್‌ ಟ್ರಸ್ಟ್‌ ಹಾಗೂ ಡಾ.ಜಿ.ಎಸ್ ಆಮೂರ ಜನ್ಮ ಶತಮಾನೋತ್ಸವ ಸಮಿತಿಯಿಂದ &lsq...

‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಸಮಾರಂಭ

21-10-2024 ಬೆಂಗಳೂರು

ಬೆಂಗಳೂರು: ಶ್ರೀಮಧ್ವ ಜಯಂತಿ ಅಂಗವಾಗಿ ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಿಗೆ ...