‘ಸಾಹಿತ್ಯ ಬಂಗಾರ ಪ್ರಶಸ್ತಿ’ ಗೆ ಕುಂ.ವಿ, ಸುಶೀಲಮ್ಮ, ಪ್ರತಿಭಾ ಆಯ್ಕೆ

Date: 22-10-2024

Location: ಬೆಂಗಳೂರು


ಬೆಂಗಳೂರು: ಎಸ್. ಬಂಗಾರಪ್ಪ ವಿಚಾರ ವೇದಿಕೆಯಿಂದ ಕೊಡಮಾಡುವ 2024ನೇ ಸಾಲಿನ ’ಸೇವಾ ಬಂಗಾರ ಪ್ರಶಸ್ತಿ’ ಗೆ ಸಮಾಜ ಸೇವಾ ಕ್ಷೇತ್ರದ ಸಾಧಕಿ ಸುಮಂಗಲಿ ಸೇವಾಶ್ರಮದ ಎಚ್.ಜಿ. ಸುಶೀಲಮ್ಮ ಅವರಿಗೆ “ಸೇವಾ ಬಂಗಾರ” ಪ್ರಶಸ್ತಿ, 2024ನೇ ಸಾಲಿನಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಸಾಹಿತಿ ಕುಂ. ವೀರಭದ್ರಪ್ಪ ಅವರಿಗೆ “ಸಾಹಿತ್ಯ ಬಂಗಾರ” ಪ್ರಶಸ್ತಿ ಹಾಗೂ ರಂಗಭೂಮಿಯಲ್ಲಿನ ಸೇವೆಗಾಗಿ ಗ್ರಾಮೀಣ ರಂಗಭೂಮಿಯ ಪೌರಾಣಿಕ ನಾಟಕದ ಕಲಾವಿದೆ ಪ್ರತಿಭಾ ನಾರಾಯಣ್ ಅವರು “ಕಲಾಬಂಗಾರ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಬಂಗಾರಪ್ಪನವರ ಹುಟ್ಟು ಹಬ್ಬದ ದಿನವಾದ ಅ. 26, 2024ರಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆಯಲಿದೆ. ಗೃಹಮಂತ್ರಿಗಳಾದ ಡಾ. ಜಿ.ಪರಮೇಶ್ವರ್ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಚಿವ ಮಧುಬಂಗಾರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಎಸ್ ಬಂಗಾರಪ್ಪ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ವಿ ನಾಗರಾಜ ಮೂರ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

MORE NEWS

ಆಮೂರ ಅವರು ಬರವಣಿಗೆಯ ಬದುಕನ್ನು ತಪಸ್ಸಿನಂತೆ ಸಾಗಿಸಿದರು; ರಾಘವೇಂದ್ರ

21-10-2024 ಬೆಂಗಳೂರು

ಧಾರವಾಡ: ಜಿ.ಬಿ. ಜೋಶಿ ಮೆಮೊರಿಯಲ್‌ ಟ್ರಸ್ಟ್‌ ಹಾಗೂ ಡಾ.ಜಿ.ಎಸ್ ಆಮೂರ ಜನ್ಮ ಶತಮಾನೋತ್ಸವ ಸಮಿತಿಯಿಂದ &lsq...

‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಸಮಾರಂಭ

21-10-2024 ಬೆಂಗಳೂರು

ಬೆಂಗಳೂರು: ಶ್ರೀಮಧ್ವ ಜಯಂತಿ ಅಂಗವಾಗಿ ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಿಗೆ ...

ಮಲರ್ ವಿಳಿ. ಕೆ ಅವರಿಗೆ 2024ನೇ ಸಾಲಿನ ‘ಕೆ.ಎನ್. ವಿಜಯಲಕ್ಷ್ಮಿ ಅನುವಾದ ಪ್ರಶಸ್ತಿ’

21-10-2024 ಬೆಂಗಳೂರು

ಬೆಂಗಳೂರು: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಡಾ. ಮಲರ್ ವಿಳಿ. ಕೆ ಅವರು ಪ್ರತಿಷ್ಠಿತ 2024ನೇ ಸಾಲ...