ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ

Date: 15-06-2024

Location: ಬೆಂಗಳೂರು


"ಸಾಮಾನ್ಯರ ಜೊತೆಯಲ್ಲಿಯೆ ಇರುತ್ತಿದ್ದ ಸೂಪಿಗಳಿಗೆ ಸಾಮಾನ್ಯರಿಗೆ ತಲುಪುವುದಕ್ಕೆ ಪರ‍್ಶಿಯನ್ ಒಂದು ಮಹತ್ವದ ದಾರಿಯಾಗಿದ್ದಿತು. ಆದರೆ, ಕ್ರಮೇಣ ಈ ದಾರಿ ಉರ‍್ದುವಾಗಿ ಬೆಳೆಯುತ್ತದೆ. ಹಾಗಾದರೆ, ಈ ಉರ‍್ದು ಎಲ್ಲಿಂದ ಬಂದಿತು? ಇದನ್ನು ತುಸು ಇಲ್ಲಿ ಮಾತನಾಡಬಹುದು," ಎನ್ನುತ್ತಾರೆ ಅಂಕಣಕಾರ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಪರ‍್ಶಿಯನ್ ನಡೆ-ಉರ‍್ದು ಬೆಳವಣಿಗೆ’ ಕುರಿತು ಬರೆದಿರುವ ಲೇಖನ.

ಈಗಾಗಲೆ ನೋಡಿದಂತೆ ಪರ‍್ಶಿಯನ್ ಬಾಶೆ ಸಾಮಾನ್ಯರ ಜೊತೆಗೆ ಹೆಚ್ಚು ಸಂಪರ‍್ಕವನ್ನು ಪಡೆದುಕೊಂಡು ಬಳಕೆಯಲ್ಲಿದ್ದಿತು. ಇದಕ್ಕೆ ಅನಿವರ‍್ಯತೆಯೂ ಇದ್ದಿತು. ಬಹಮನಿ ಸಾಮ್ರಾಜ್ಯದಲ್ಲಿ ದೊಡ್ಡ ಹುದ್ದೆಗಳಿಗೆ ಅರಬ್ ಜಗತ್ತಿನಿಂದ ಬಂದ ಅದಿಕಾರಿಗಳು ಅರಮನೆಯ ಒಳಗೆ ಇದ್ದರೂ ಕಾಯಿಪಲ್ಯೆ ಮೊದಲ್ಗೊಂಡು ಉಪಜೀವನಕ್ಕೆ ಮತ್ತು ಆಡಳಿತ ಕಾರಣಕ್ಕೆ ಸ್ತಳೀಯ ಕನ್ನಡದವರನ್ನು ಮಾತನಾಡಿಸಬೇಕಾಗಿದ್ದಿತು. ಹಾಗೆಯೆ ಸೂಪಿಗಳಿಗೂ ಈ ಅವಶ್ಯಕತೆ ಇತ್ತು. ಸಾಮಾನ್ಯರ ಜೊತೆಯಲ್ಲಿಯೆ ಇರುತ್ತಿದ್ದ ಸೂಪಿಗಳಿಗೆ ಸಾಮಾನ್ಯರಿಗೆ ತಲುಪುವುದಕ್ಕೆ ಪರ‍್ಶಿಯನ್ ಒಂದು ಮಹತ್ವದ ದಾರಿಯಾಗಿದ್ದಿತು. ಆದರೆ, ಕ್ರಮೇಣ ಈ ದಾರಿ ಉರ‍್ದುವಾಗಿ ಬೆಳೆಯುತ್ತದೆ. ಹಾಗಾದರೆ, ಈ ಉರ‍್ದು ಎಲ್ಲಿಂದ ಬಂದಿತು? ಇದನ್ನು ತುಸು ಇಲ್ಲಿ ಮಾತನಾಡಬಹುದು.

ಸಾಮಾನ್ಯವಾಗಿ ಪರಸ್ಪರ ಬಾಶೆ ಗೊತ್ತಿಲ್ಲದ ಎರಡು ಸಮುದಾಯಗಳು ಎದುರಾದಾಗ ಪರಸ್ಪರರ ಬಾಶೆಗಳಿಂದ ಕೆಲಕೆಲವನ್ನು ಎರವಲು ಪಡೆದು ಸಂವಹನ ನಡೆಸುತ್ತಾರೆ. ಇದು, ಸಹಜವಾಗಿ ಎಲ್ಲೆಡೆ ಕಂಡುಬರುವಂತ ಸರ‍್ವತ್ರಿಕ ವಿಚಾರ. ಹೀಗಿರುವ ಸಂರ‍್ಬದಲ್ಲಿ ಬಳಕೆಗೆ ಬರುವ ಮಾತಿನಬಗೆ ಸಹಜವಾಗಿ ಅದಿಕಾರದ ಇಲ್ಲವೆ ಸಾಮಾಜಿಕ ಪ್ರತಿಶ್ಟೆಯ ಬಾಶೆಯ ಪದಕೋಶವನ್ನು ಮತ್ತು ದೊಡ್ಡಸಂಕೆಯ ಸಮುದಾಯದ ಬಾಶೆಯ ವ್ಯಾಕರಣವನ್ನು ಪಡೆದುಕೊಳ್ಳುತ್ತದೆ. ಪರ‍್ಶಿಯನ್ ಅದಿಕಾರದ ಜೊತೆಗೆ ಇದ್ದದ್ದರಿಂದ ಸಹಜವಾಗಿ ಸಾಮಾಜಿಕ ಮಾನ್ಯತೆಯನ್ನೂ ಪಡೆದುಕೊಂಡಿದ್ದಿತು ಮತ್ತು ಕನ್ನಡವು ಇಲ್ಲಿನ ಸಮುದಾಯದ ಬಾಶೆಯಾಗಿದ್ದಿತು. ಹಾಗಾಗಿ ಈ ಪರಸ್ಪರ ಬಾಶೆಗಳ ಪರಿಚಯ ಇಲ್ಲದವರ ಸಂವಹನದಲ್ಲಿ ಕನ್ನಡದ ವ್ಯಾಕರಣ ಮತ್ತು ಪರ‍್ಶಿಯನ್ನಿನ ಪದಕೋಶ ಬೆರೆತುಕೊಳ್ಳುತ್ತವೆ. ಮೊದಮೊದಲು ಸಂವಹನ ಸಾದ್ಯವಾದ ನಂತರ ಅದು ಕ್ರಮೇಣ ತನ್ನದೆ ವ್ಯಾಕರಣ ನಿಯಮಗಳನ್ನು ಪಡೆದುಕೊಳ್ಳುತ್ತದೆ. ಹೀಗೆ ವ್ಯಾಕರಣ ನಿಯಮಗಳನ್ನು ಪಡೆದುಕೊಂಡ ನಂತರ, ತಲೆಮಾರುಗಳವರೆಗೆ ಸಂವಹನ ನಡೆಯುತ್ತಿದ್ದಂತೆ ಇದು ತಾಯ್ಮಾತಿನ ಮಾತುಗರನ್ನು ಪಡೆದುಕೊಳ್ಳುತ್ತದೆ. ಅಂದರೆ, ಈ ಮಾತಿನಬಗೆಯಲ್ಲಿ ಮೊದಮೊದಲು ಮಾತನಾಡಲು ಶುರುಮಾಡಿದವರು ಕ್ರಮೇಣ ಅದನ್ನು ತಮ್ಮ ಮಕ್ಕಳಿಗೂ ಮಾತನಾಡುತ್ತಾರೆ. ಈಗ ಆ ಮಕ್ಕಳಿಗೆ ಇದುವೆ ತಾಯ್ಮಾತು ಆಗುತ್ತದೆ. ಹೀಗೆ ಈ ಮಾತಿನಬಗೆ ಬಾಶೆಯಾಗಿ ಬೆಳೆಯುತ್ತದೆ. ಕನ್ನಡ ಮತ್ತು ಪರ‍್ಶಿಯನ್ನುಗಳ ಸಮಾಗಮದಲ್ಲಿ ಹೀಗೆ ಹೊಸತಾಗಿ ಬೆಳೆದ ಬಾಶೆಯೆ ಉರ‍್ದು.

ಬಹಮನಿ ಕಾಲದಲ್ಲಿಯೆ ಈ ಉರ‍್ದು ತನ್ನ ಸ್ವರೂಪವನ್ನು ಪಡೆದುಕೊಂಡಿದ್ದಿತು. ಈ ಕಾಲದ ಬಹುದೊಡ್ಡ ಸಂತನಾದ ಬಂದೆ ನವಾಜನ ಬರಹಗಳಲ್ಲಿ ಕೆಲವು ಪರ‍್ಶಿಯನ್ನಿಗಿಂತ ಬಿನ್ನವಾದ ಮಾತಿನಬಗೆಯಲ್ಲಿ ಸಿಗುತ್ತವೆ. ಇದಕ್ಕೆ ದಕ್ಕನಿ ಎಂದೂ ಉರ‍್ದು ಎಂದೂ ಕರೆಯುವುದು ರೂಡಿ ಇದೆ. ಆನಂತರ ಆದಿಲ್ ಶಾಹಿಗಳ ಕಾಲದಲ್ಲಿ ಆಡಳಿತ ಬಾಶೆಯಾಗಿ ಪರ‍್ಶಿಯನ್ ಮುಂದುವರೆಯುತ್ತದೆಯಾದರೂ ದಿನಜೀವನದಲ್ಲಿ, ಆಡಳಿತದಲ್ಲಿ, ಆಸ್ತಾನದಲ್ಲಿ ಉರ‍್ದು ಬಳಕೆಯಲ್ಲಿದ್ದಿತು. ಇದು ಅಂದಿನ ಪರ‍್ಶಿಯನ್ನಿನ ಬಳಕೆಯ ಮೇಲೂ ಪ್ರಬಾವವನ್ನು ಬೀರಿದ್ದಿತು. ಕ್ರಮೇಣ ಉರ‍್ದು ಹಯ್ದರಾಬಾದಿನ ನಿಜಾಮರೆಂದು ಹೆಸರಾದ ಆಸಿಪ್ ಶಾಹಿಗಳ ಆಡಳಿತ ಬಾಶೆಯಾಗಿ ಬೆಳೆಯುತ್ತದೆ.

ಇಲ್ಲಿ ಮುಕ್ಯವಾದ ವಿಚಾರವೆಂದರೆ ಬಹುತೇಕ 14-15ನೆ ಶತಮಾನದಿಂದಲೆ ಸೂಪಿ ಸಂತರು ಉರ‍್ದುವನ್ನು ಬಳಸಲು ಶುರು ಮಾಡುತ್ತಾರೆ. ಆ ಮೂಲಕ ಸಮಾಜದ ಬಹುತೇಕರಿಗೆ ತಲುಪಲು ಸಾದ್ಯವಾಗುತ್ತದೆ. ಆಡಳಿತದ ಅವಶ್ಯಕತೆಯನ್ನು ಸಾಮಾನ್ಯರ ಜೊತೆಗೆ ಇದು ಈಡೇರಿಸುತ್ತದೆ. ಸೂಪಿ ಪಂತವು ಸಾಮಾನ್ಯರ ನೋವುಗಳಿಗೆ ಆಗುವ ಮೂಲಕ ಸಾಮಾನ್ಯರಿಗೆ ಅತಿ ಹತ್ತಿರವಾಗುತ್ತದೆ. ಹೀಗೆ ಕನ್ನಡದಿಂದ ಹುಟ್ಟಿದ ಉರ‍್ದು ಬೆಳೆದು ಮುಂದೆ ಕನ್ನಡಕ್ಕೆ ಪದಗಳನ್ನು ಕೊಡುವ ಹಾಗೆ ಬೆಳೆಯುತ್ತದೆ. ಕನ್ನಡ ಸಮಾಜಕ್ಕೆ ಅವಶ್ಯವಾಗಿದ್ದ ಪರ‍್ಶಿಯನ್ ಪದಕೋಶಕ್ಕೆ ಉರ‍್ದು ಒಂದು ರಹದಾರಿಯಾಗಿ ಉಳಿಯುತ್ತದೆ. ಹೀಗಾಗಿ ಇಂದು ಪರ‍್ಶಿಯನ್ ಬಾಶೆಯ ಪದಗಳು ಉರ‍್ದುವಿನ ಮೂಲಕ ಕನ್ನಡಕ್ಕೆ ನಿರಂತರ ಬರುತ್ತಿವೆ.

ಉರ‍್ದು ಬಾರತದ ವಿವಿದ ಪ್ರದೇಶಗಳಲ್ಲಿ ಸಮಕಾಲದಲ್ಲಿ ಆಯಾ ಸ್ತಳೀಯ ಬಾಶೆಗಳ ವ್ಯಾಕರಣವನ್ನು ಪಡೆದುಕೊಂಡು ಬೆಳೆಯುತ್ತದೆ. ಹಾಗಾಗಿ ಇದನ್ನು ಹಿಂದಿ, ಹಿಂದವಿ, ದೆಹಲವಿ, ಉರ‍್ದು, ದಕನಿ ಮೊದಲಾಗಿ ಹಲವಾರು ಹೆಸರುಗಳಿಂದ ಕರೆಯಲಾಗುತ್ತಿದ್ದಿತು. ಕ್ರಮೇಣ ಇದು ಇಡಿಯಾಗಿ ಹಿಂದೂಸ್ತಾನಿ ಎಂಬ ಹೆಸರನ್ನೂ ಪಡೆದುಕೊಂಡಿತು. ಸ್ವತಂತ್ರ ಬರುವ ಕಾಲಕ್ಕೆ ಬಾರತದಲ್ಲಿ ನಡೆದ ಹಿಂದೂ-ಮುಸ್ಲಿಂ ಎಂಬ ವಿಶಮ ಬೆಳವಣಿಗೆಯಲ್ಲಿ ಹಿಂದೂಸ್ತಾನಿ ಎಂಬುದು ಚಲಾವಣೆಯನ್ನು ಕಳೆದುಕೊಂಡು ಉರ‍್ದು ಎಂದರೆ ಮುಸಲ್ಮಾನರಿಗೆ ಮತ್ತು ಹಿಂದಿ ಎಂಬುದು ಹಿಂದೂಗಳಿಗೆ ಎಂಬ ಅರ‍್ತದಲ್ಲಿ ಮುಂದುವರೆಯಿತು ಮತ್ತು ಇವೆರಡೂ ಎರಡು ಬೇರೆ ಬೇರೆ ಬಾಶೆಗಳಾದವು. ಆದುನಿಕ ಕಾಲದ ಪದಕೋಶಕ್ಕೆ ಉರ‍್ದು ಪರ‍್ಶಿಯನ್ ಮೂಲವನ್ನು ಹಾಗೆಯೆ ಉಳಿಸಿಕೊಂಡಿತು, ಆದರೆ ಹಿಂದಿ ಸಂಸ್ಕೃತವನ್ನು ಅವಲಂಬಿಸಿತು.

ಹೀಗೆ ಪರ‍್ಶಿಯನ್ ಮತ್ತು ಇತರ ಬಾರತೀಯ ಬಾಶೆಗಳ ನಡುವಿನ ಸಮಾಗಮದಲ್ಲಿ ಹುಟ್ಟಿದ ಉರ‍್ದುವಿಗೆ ಉತ್ತರದಲ್ಲಿನ ಇಂಡೊ-ರ‍ಶ್ಯನ್ ಬಾಶೆಗಳ ಸಂಪರ‍್ಕದ ಪರಿಗಣನೆ ಹೆಚ್ಚು ಲೆಕ್ಕಕ್ಕೆ ಬಂದದ್ದರಿಂದ ಒಂದು ಇಂಡೊ-ರ‍ಶ್ಯನ್ ಬಾಶೆ ಎಂದು ಪರಿಗಣನೆಗೆ ಒಳಗಾಯಿತು. ಆದರೆ, ದಕ್ಕನದಲ್ಲಿ ಬಳಕೆಯಲ್ಲಿರುವ ಉರ‍್ದುವಿನ ವ್ಯಾಕರಣ ಬಹುತೇಕ ಕನ್ನಡದಂತೆಯೆ ಇದೆ. ಒಂದು ಉದಾಹರಣೆಯನ್ನು ಇಲ್ಲಿ ಮಾತನಾಡಬಹುದು. ಹಿಂದಿಯಲ್ಲಿ ಇಪ್ಪತ್ತಯ್ದು ಎಂಬುದಕ್ಕೆ ಪಚ್ಚೀಸ್ ಎಂಬ ಶಬ್ದ ಬಳಕೆಯಲ್ಲಿದೆ. ಇದನ್ನು ಬಿಡಿಸಿದಾಗ ಪಾಂಚ್+ಬೀಸ್ ಎಂಬ ರಚನೆ ಕಂಡುಬರುತ್ತದೆ. ಅಂದರೆ, ಇದರಲ್ಲಿ ದೊಡ್ಡ ಅಂಕಿಯಾದ ಬೀಸ್ ಇದು ಆನಂತರ ಬಂದಿದೆ ಮತ್ತು ಸಣ್ಣ ಅಂಕಿಯಾದ ಪಾಂಚ್ ಇದು ಮೊದಲು ಬಂದಿದೆ. ಈಗ ಕನ್ನಡದ ರಚನೆಯನ್ನು ಗಮನಿಸಿದರೆ ಇಪ್ಪತ್ತಯ್ದು ಎಂಬ ಶಬ್ದ ಬಳಕೆಯಲ್ಲಿದೆ. ಇದನ್ನು ಬಿಡಿಸಿದಾಗ ಇಪ್ಪತ್ತು+ಅಯ್ದು ಎಂಬ ರಚನೆ ಕಂಡುಬರುತ್ತದೆ. ಇದರಲ್ಲಿ ದೊಡ್ಡ ಅಂಕಿಯಾದ ಇಪ್ಪತ್ತು ಇದು ಮೊದಲು ಬಂದಿದೆ, ಹಿಂದಿಯಲ್ಲಿ ಇದು ನಂತರ ಬಂದಿದೆ. ಸಣ್ಣ ಅಂಕಿಯಾದ ಅಯ್ದು ಇದು ಕನ್ನಡದಲ್ಲಿ ಆನಂತರ ಬಂದಿದೆ, ಹಿಂದಿಯಲ್ಲಿ ಮೊದಲು ಬಂದಿದೆ. ದಕ್ಕನದಲ್ಲಿ ಬಳಕೆಯಲ್ಲಿರುವ ಉರ‍್ದುವಿನಲ್ಲಿ ಪಚ್ಚೀಸ್ ಎಂಬ ಶಬ್ದ ಬಳಕೆಯಲ್ಲಿದೆ. ಅದರಂತೆಯೆ ಬೀಸ್ ಪರ್ ಪಾಂಚ್ ಎಂಬ ಶಬ್ದವೂ ಬಳಕೆಯಲ್ಲಿದೆ. ಮೊದಲ ಪದ ಅಂದರೆ ಪಚ್ಚೀಸ್ ಇದು ಇಂಡೊರ‍ಶ್ಯನ್ ರಚನೆಯನ್ನು ಪ್ರತಿನಿದಿಸಿದರೆ ಆನಂತರದ ಪದ ಬೀಸ್ ಪರ್ ಪಾಂಚ್ ಇದು ಕನ್ನಡದ ರಚನೆಯನ್ನು ಪ್ರತಿನಿದಿಸುತ್ತದೆ. ಹೀಗೆ ಹಲವು ಅಂಶಗಳನ್ನು ಗಮನಿಸಬಹುದು.

ಉರ‍್ದು ಹಯ್ದರಾಬಾದಿನ ನಿಜಾಮರ ಆಡಳಿತ ಬಾಶೆಯಾಗಿದ್ದಿತು ಎಂಬುದು ಎಲ್ಲರಿಗೂ ಪರಿಚಿತ. ಆದರೆ, ಅಶ್ಟು ಮಾತ್ರವಲ್ಲದೆ ಇನ್ನೂ ಹಲವು ಸಮಕಾಲೀನ ರಾಜಮನೆತನಗಳಲ್ಲಿಯೂ ರ‍್ದುವಿಗೆ ಸಮಾನ ಮರ‍್ಯಾದೆ ಇದ್ದಿತು. ಆ ಕಾಲದ ಬಹುದೊಡ್ಡ ಸಾಮಂತ ಮನೆತನವಾಗಿದ್ದ ಸುರಪುರ ಸಂಸ್ತಾನ ಮೊದಲ್ಗೊಂಡು ವಿವಿದ ನಾಯಕ ಮನೆತನಗಳಲ್ಲಿ ಉರ‍್ದು ಕನ್ನಡದ ಜೊತೆಗೆ ಸಮಸಮನಾಗಿ ಆಡಳಿತದಲ್ಲಿ ಬಳಕೆಯಲ್ಲಿದ್ದಿತು. ಮಾತ್ರವಲ್ಲದೆ ಮಯ್ಸೂರು ಸಂಸ್ತಾನದಲ್ಲಿಯೂ ಉರ‍್ದು ಬಳಕೆಯಲ್ಲಿದ್ದಿತು. ಹಯ್ದರ್ ಮತ್ತು ಟಿಪ್ಪು ಕಾಲದಲ್ಲಿ ಮಾತ್ರವಲ್ಲದೆ ಮಯ್ಸೂರಿನ ಮಹಾರಾಜರ ಕಾಲದಲ್ಲಿಯೂ ಉರ‍್ದುವಿಗೆ ಆಸ್ತಾನದಲ್ಲಿ ಸ್ತಾನವಿದ್ದಿತು. ಮಯ್ಸೂರಿನ ಅರಸರ ಕಾಲದಲ್ಲಿ, ರಾಜರು ಹಾಕಿದ ಉರ‍್ದು ಶಾಸನಗಳು ಸಾಕಶ್ಟು ಇವೆ.

ಉರ‍್ದು ಕನ್ನಡದೊಂದಿಗೆ ವ್ಯಾಕರಣವನ್ನು ಮಾತ್ರವಲ್ಲದೆ ತಾನವನ್ನೂ ಹಂಚಿಕೊಳ್ಳುತ್ತದೆ. ಮುಕ್ಯವಾಗಿ ಕಲಬುರಗಿಯ ಪರಿಸರಕ್ಕೆ ಬಂದಾಗ ಇಲ್ಲಿ ಕನ್ನಡ ಮತ್ತು ರ‍್ದು ಸಮತಾನದಲ್ಲಿ ನಡೆಯುವುದನ್ನು ಕೇಳಬಹುದು. ನಿನ್ನೆಮೊನ್ನೆಯವರೆಗೆ ಉರ‍್ದು ಶ್ರೀಮಂತ ಮುಸಲ್ಮಾನರು, ಲಿಂಗಾಯತರು ಮತ್ತು ಬ್ರಾಹ್ಮಣರು ಅಂದರೆ ಅದಿಕಾರದ ಹತ್ತಿರ ಇದ್ದವರ ಬಾಶೆಯಾಗಿ ಇದ್ದಿತು. ಸ್ವತಂತ್ರ ನಂತರದ ಬೆಳವಣಿಗೆಗಳಿಂದಾಗಿ ಈಗೀಗ ಉರ‍್ದು ಮುಸಲ್ಮಾನರ ಬಾಶೆಯಾಗಿ ಪರಿಗಣಿತವಾಗುತ್ತಿದೆ. ಆದರೆ, ಇಂದಿಗೂ ಉರ‍್ದು ಬಾರದ ಬಡ ಮುಸಲ್ಮಾನರು ಬಹಳಶ್ಟು ಮಂದಿ ಕಾಣಿಸುತ್ತಾರೆ.

ಈ ಅಂಕಣದ ಹಿಂದಿನ ಬರೆಹಗಳು:
ಅರಾಬಿಕ್-ಪರ‍್ಶಿಯನ್ ಕನ್ನಡ ಜಗತ್ತಿನೊಳಗೆ
ಸಕ್ಕದದ ಉಬ್ಬರವಿಳಿತ
ಅಸೋಕನ ಬರಹ-ಪಾಗದ-ಪಾಲಿ-ಪ್ರಾಕ್ರುತ ಮತ್ತು ಕನ್ನಡ

ಕನ್ನಡಮುಂ ಸಕ್ಕದಮುಂ
ಕನ್ನಡಮುಂ ಪಾಗದಮುಂ
ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?
ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?

ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?
ವಿಶ್ವ ತಾಯ್ಮಾತಿನ ದಿವಸ
ಬಾಶೆಗಳ ನಡುವಿನ ನಂಟನ್ನು ಪರಿಬಾವಿಸುವುದು
ಕಲ್ಲು ಕಲ್ಲು ಹೇಗಾಯಿತು, ಯಾಕಾಯಿತು, ಇನ್ನೇನಾಯಿತು?

ಪ್ರತಿ ಪದಕೂ ಒಂದು ಚರಿತೆ ಇದೆ, ಮನುಶ್ಯರಿಗೆ ಮಾತ್ರವಲ್ಲ
ಹೊಲದಲ್ಲಿ ಕನ್ನಡ ಮತ್ತು ಇತಿಹಾಸದ ಅರಿವು
ಅಡುಗೆಮನೆಯ ಬಾಶಿಕ ಜಗತ್ತು ಇಲ್ಲವೆ ಅಡುಗೆಮನೆ ಕನ್ನಡ
ಮನೆಯೊಳಗೆ ಬಾಶಿಕ ಅನುಸಂದಾನ

ಪದಕೋಶದ ಬದುಕು
ಕನ್ನಡ ಪದಕೋಶ ಎಶ್ಟು ದೊಡ್ಡದು?
ಪದಕೋಶ: ಶಬ್ದಪಾರಮಾರ‍್ಗಮಶಕ್ಯಂ
ಕನ್ನಡ ಒಳನುಡಿಗಳು ಹೇಗೆ ಬಿನ್ನ?
ಕನ್ನಡ ಒಳನುಡಿಗಳ ಪಸರಿಕೆ ಅರಿಯುವುದು ಹೇಗೆ?

ಕನ್ನಡ ಒಳನುಡಿಗಳು ಎಶ್ಟು ಹಳೆಯವು?
ದರುಶನ-ನೋಡು/ನೋಡು-ದರುಶನ
ಬಕ್ತ-ಬಕುತ: ಕನ್ನಡ ಮತ್ತು ಸಂಸ್ಕ್ರುತಗಳ ನಡುವಿನ ಗುದುಮುರಿಗಿ
ಒಡೆ-ಅಡೆ-ಅರೆ
ವಾಕ್ಯಪ್ರಕಾರಗಳು
ವಿವಿದ ಬಗೆಯ ವಾಕ್ಯಗಳು

ಪೂರ‍್ಣ ಮತ್ತು ಅಪೂರ‍್ಣ ಕ್ರಿಯಾಪದಗಳು
ವಾಕ್ಯದಲ್ಲಿನ ಗಟಕಗಳ ನಡುವಿನ ಒಪ್ಪಂದ
ವಾಕ್ಯದ ಅನುಕ್ರಮ
ವಾಕ್ಯದ ಗಟಕಗಳ ನಡುವಿನ ಸಂಬಂದ

ವಾಕ್ಯದ ಗಟಕಗಳು
ಕಿರುವಾಕ್ಯಗಳು
ವಾಕ್ಯವೆಂಬ ಮಾಯಾಜಾಲ
ಕನ್ನಡ ಸಂದಿಗಳು
ಸಂದಿಯ ಕೂಟ
‘ಮನಿ’, ’ಮನೆ’, ‘ಮನ’, ‘ಮನಯ್’
ಕನ್ನಡದ ವಿಬಕ್ತಿಗಳು
ಕಾರಕ-ವಿಬಕ್ತಿ
ಕನ್ನಡದಲ್ಲಿ ವಚನ ವ್ಯವಸ್ತೆ
ಬಹು-ವಚನ
ಕನ್ನಡದಲ್ಲಿ ಲಿಂಗವು ತೆರತೆರ
ಲಿಂಗಮೆನಿತು ತೆರಂ
ಲಿಂಗವೆಂದರೆ

ಕಾಲದ ಕಟ್ಟಳೆ
ತೋರುಗವೆಂಬ ಮಾಯಕ
ಕನ್ನಡದಾಗ ಕಾಲನಿರ‍್ವಹಣೆ
ಏನೇನನ್ನು ಪ್ರಶ್ನಿಸುವುದು?
ಕನ್ನಡದಾಗ ಪ್ರಶ್ನಿಸುವುದು
ಕನ್ನಡದ ಅಂಕಿಗಳು
ಎಣಿಸುವ ಕಲೆ
ಕನ್ನಡದಾಗ ಎರಡು ಜೋಡಿ ಪ್ರತಮ ಪುರುಶ ಸರ‍್ವನಾಮಗಳು
ಸರ‍್ವನಾಮಗಳು
ವಿಶೇಶಣಗಳು
ಬೇರೆ ಭಾಷೆಗಳಿಂದ ಪಡೆದುಕೊಳ್ಳುವುದು ಮತ್ತು ಪದಕೋಶದ ಬೆಳವಣಿಗೆ
ದ್ವನಿ ಬದಲಾವಣೆ ಮತ್ತು ಪದಕೋಶದ ಬೆಳವಣಿಗೆ

ಸಾಮಾಜಿಕ ಬೆಳವಣಿಗೆ ಮತ್ತು ಪದಕೋಶದ ಬೆಳವಣಿಗೆ
ಪದಕೋಶದ ಬೆಳವಣಿಗೆ: ಸಮಾಸ ಪ್ರಕ್ರಿಯೆ
ಪದಕೋಶದ ಬೆಳವಣಿಗೆ: ಪ್ರತ್ಯಯಗಳ ಸೇರುವಿಕೆ
ಪದಕೋಶದ ಬೆಳವಣಿಗೆ: ಕೆಲವು ಹಳೆಯ ಪ್ರಕ್ರಿಯೆಗಳು
ಕನ್ನಡದಾಗ ಹೊಸಪದಗಳನ್ನು ಹುಟ್ಟಿಸುವುದು
ಪದರಚನೆಯಲ್ಲಿ ಗಿಡ್ಡ ಸ್ವರ ಮತ್ತು ಉದ್ದ ಸ್ವರದ ಪಾತ್ರ
ಕ್ರಿಯಾಪದಗಳು
ನಾಮಪದಗಳು
ಪದ ರಚನೆಯ ಗಟಕಗಳು

ಪದಗಳು-ಯಾವಯಾವ ಬಗೆಯವು?
ಎಶ್ಟು ಅಕ್ಶರಗಳ ಪದಗಳು?
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ಕನ್ನಡದಾಗ ಗ್ ಜ್ ಡ್ ದ್ ಬ್ ದ್ವನಿಗಳು - ಇತ್ತೀಚಿನ ಬೆಳವಣಿಗೆ

ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ

ಅಪರೂಪದ ವರ‍್ತ್ಸ-ತಾಲವ್ಯ ದ್ವನಿಗಳು : ‘ಚ್’ ಮತ್ತು ‘ಜ್’
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ

ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1

ಬಾಶೆಯ ಬೆಳವಣಿಗೆ-ಬದಲಾವಣೆ
ಮೂಲಕನ್ನಡ

ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಕನ್ನಡದಾಗ ದ್ವನಿವಿಗ್ನಾನ

ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...