ಪರೋಪಕಾರ ಗುಣ ಇಲ್ಲದ ವ್ಯಕ್ತಿ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಲು ಸಾಧ್ಯವಿಲ್ಲ; ಶ್ರೀನಾಥ್​ ಜೋಶಿ

Date: 02-10-2024

Location: ಬೆಂಗಳೂರು


ಬೆಂಗಳೂರು: ಭಾರತ ಭೋಗ ಭೂಮಿಯಲ್ಲ, ತ್ಯಾಗ ಭೂಮಿ. ಇಂತಹ ಪುಣ್ಯ ದೇಶದಲ್ಲಿ ನಾವು ಎಷ್ಟು ತ್ಯಾಗ ಮಾಡುತ್ತೇವೆಯೋ, ಅಷ್ಟು ಒಳ್ಳೆಯ ಹೆಸರು ಗಳಿಸುತ್ತೇವೆ ಎಂದು ಲೋಕಾಯುಕ್ತ ಪೊಲೀಸ್​ ವರಿಷ್ಠಾಧಿಕಾರಿ ಶ್ರೀನಾಥ್​ ಜೋಶಿ ತಿಳಿಸಿದರು.

ಬೆಂಗಳೂರು ಕಿಡ್ನಿ ಫೌಂಡೇಶನ್​ ಕೆ.ಆರ್​.ರಸ್ತೆಯ ಗಾಯನ ಸಮಾಜದಲ್ಲಿ ಶನಿವಾರ ಆಯೋಜಿಸಿದ್ದ 19ನೇ "ಧ್ವನಿ' &ಬಿಕೆಎಫ್​ ಪಂಡಿತ್​ ಮಲ್ಲಿಕಾರ್ಜುನ ಮನ್ಸೂರ್​ ಹಿಂದೂಸ್ತಾನಿ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರೋಪಕಾರ ಗುಣ ಇಲ್ಲದ ವ್ಯಕ್ತಿ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಲು ಸಾಧ್ಯವಿಲ್ಲ. ತ್ಯಾಗ ಭಾರತೀಯರ ರಕ್ತದಲ್ಲಿದೆ. ಉತ್ತಮ ವಿದ್ಯೆ ಇದೆ, ಉತ್ತಮ ನೌಕರಿಯಲ್ಲಿದ್ದೇನೆ ಎಂಬ ಅಹಂ ಅನೇಕರಲ್ಲಿದೆ. ಮಾಡುತ್ತಿರುವ ಕೆಲಸದ ಮೂಲಕ ಸಮಾಜದ ಕಷ್ಟಗಳಿಗೆ ಎಷ್ಟು ನೆರವಾಗಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಬಹಳಷ್ಟು ಜನರು ತ್ಯಾಗ ಜೀವಿಗಳಾಗಿ ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿದ್ದಾರೆ. ನಮ್ಮಲ್ಲಿರುವ "ಧನ'ಕ್ಕೆ "ತ್ಯಾಗ'ದಿಂದ ಬೆಲೆ ಬರುತ್ತದೆ.

ಬೆಂಗಳೂರು ಕಿಡ್ನಿ ಫೌಂಡೇಶನ್ ಉತ್ತಮ ಕೆಲಸಗಳ ಮೂಲಕ ಸಮಾಜದಲ್ಲಿರುವ ಅಶಕ್ತರಿಗೆ ನೆರವಾಗುತ್ತಿದೆ. ಎಷ್ಟೇ ವರ್ಷಗಳು ಕಳೆದರೂ ಸಮಾಜದ ನೀತಿ&ನಿಯಮಗಳು ಬದಲಾಗುವುದಿಲ್ಲ. ಪ್ರತಿಯೊಬ್ಬರೂ ಸಮಯ ವ್ಯರ್ಥ ಮಡದೆ, ಸಾಧ್ಯವಾದಷ್ಟು ಪರೋಪಕಾರಕ್ಕೆ ತೊಡಿಗಿಸೋಣ ಎಂದು ಹೇಳಿದರು.

ಅಕಾಡೆಮಿ ಫಾರ್​ ಕ್ರಿಯೇಟಿವ್​ ಟೀಚಿಂಗ್​ ಅಧ್ಯಕ್ಷ ಗುರುರಾಜ ಕರ್ಜಗಿ ಮಾತನಾಡಿ, ಇಂದಿನ ಕಾಲಟ್ಟದಲ್ಲಿ ಒಂದೆರಡು ಪ್ರಶಸ್ತಿ ಬರುತ್ತಿದ್ದಂತೆ ವ್ಯಕ್ತಿತ್ವ ಬದಲಾಗುತ್ತದೆ. ಆದರೆ ಪಂಡಿತ್​ ಮಲ್ಲಿಕಾರ್ಜುನ ಮನ್ಸೂರ್​ ಅವರ ಶ್ರೇಷ್ಠ ಗಾಯಕರಾಗಿದ್ದರು. ಹಲವು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದರು. ಅವರು ಉನ್ನತ ಶಿಖರದಲ್ಲಿದ್ದರೂ, ಮಣ್ಣಿನ ವಾಸನೆ ಮರೆತಿರಲಿಲ್ಲ ಎಂದು ಹೇಳೀದರು.

ಕಾರ್ಯಕ್ರಮದಲ್ಲಿ ಪಂಡಿತ್​ ವೆಂಕಟೇಶ ಕುಮಾರ್​ ಕುಮಾರ್​ ಅವರಿಗೆ ಬಿಕೆಎ್​ ಪಂ.ಮಲ್ಲಿಕಾರ್ಜುನ ಮನ್ಸೂರ್​ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೈದ್ಯ ಡಾ.ವಿವೇಕ ಜವಳಿ, ಬಿಕೆಎಫ್ ​ನ ಚೇರ್​ಮನ್​ ಡಾ.ಶ್ರೀರಾಮ್​, ಟ್ರಸ್ಟಿ ಡಾ.ಶ್ರೀನಿವಾಸ್​ ಇತರರಿದ್ದರು.

ಕಲಿತ ವಿದ್ಯೆಯನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ಪ್ರತಿಯೊಬ್ಬನ ಬದುಕಿನಲ್ಲಿ ಗುರುವಿನ ಪಾತ್ರ ಮುಖ್ಯವಾಗುತ್ತದೆ. ಇಂದು ನನ್ನ ಗುರುಗಳ ಆಶೀರ್ವಾದಿಂದ ಪಂ.ಮಲ್ಲಿಕಾರ್ಜುನ್​ ಮನ್ಸೂರ್​ ಪ್ರಶಸ್ತಿ ಲಭಿಸಿದೆ.

MORE NEWS

‘ಸಂಗೀತ ವಿದ್ವಾನ್ ಪ್ರಶಸ್ತಿ’ಗೆ ಬಸವರಾಜ್ ಭಜಂತ್ರಿ ಆಯ್ಕೆ

03-10-2024 ಬೆಂಗಳೂರು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನಾ ಸಂದರ್ಭದಲ್ಲಿ ಪ್ರತಿ ವರ್ಷ ರಾಜ್ಯ ಸಕಾರದಿಂದ ಕೊಡಮಾಡಲಾಗುವ 2024-25ನ...

ಮೈಸೂರು ಅಂದರೆ ದಸರಾ, ದಸರಾ ಅಂದರೆ ಮೈಸೂರು: ಹಂಪ ನಾಗರಾಜಯ್ಯ

03-10-2024 ಬೆಂಗಳೂರು

ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಇಂದು ಉದ್ಘಾಟನೆ ಮಾಡಲಾಯಿತು. ಬೆಳಗ್ಗೆ 9:15 ರಿಂದ 9:40ರ ಶುಭ ವೃಶ್ಚ...

ನ್ಯಾಯಾಂಗ ಕ್ಷೇತ್ರದಲ್ಲಿ ಬರೆದಿರುವ ಬಹಳ ಅಪರೂಪದ ಬರವಣಿಗೆಯಿದು; ಮಲ್ಲೇಪುರಂ

02-10-2024 ಬೆಂಗಳೂರು

ಬೆಂಗಳೂರು: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕ...