ಮೈಸೂರು ಅಂದರೆ ದಸರಾ, ದಸರಾ ಅಂದರೆ ಮೈಸೂರು: ಹಂಪ ನಾಗರಾಜಯ್ಯ

Date: 03-10-2024

Location: ಬೆಂಗಳೂರು


ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಇಂದು ಉದ್ಘಾಟನೆ ಮಾಡಲಾಯಿತು. ಬೆಳಗ್ಗೆ 9:15 ರಿಂದ 9:40ರ ಶುಭ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರು ನಾಡದೇವಿ ಚಾಮುಂಡೇಶ್ವರಿಗೆ ಪುಪ್ಪಾರ್ಚನೆ ಮಾಡುವ ಮುಖೇನ ವಿಶ್ವ ವಿಖ್ಯಾತ ಮೈಸೂರು ದಸರಾಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಕುರಿತು ಮಾತನಾಡಿದ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರು, ಚಾಮುಂಡೇಶ್ವರಿ ದೇವಿಯನ್ನು ಲೋಕಮಾತೆ ಎಂದು ಕರೆದ ಅವರು, ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರನ್ನು ಮೊದಲಿಗೆ ಸ್ಮರಿಸಿದರು. ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಹೆಣ್ಣು ದೇವತೆಗಳು ತೆಪ್ಪಗಿರುವುದು ಕಂಡು ಅಚ್ಚರಿಯಾಗುತ್ತದೆ. ದೇವರುಗಳಿಗೂ ಬಲಿಷ್ಠರನ್ನು ಕಂಡರೆ ಭಯ, ಅಮಾಯಕ ಮುಗ್ಧರಿಗೆ ಕಷ್ಟ ಕೊಡುವರು. ಈ ದೇವರುಗಳು ಕೂಡ ಕೋಳಿ, ಕುರಿ, ಮೇಕೆ ಬಲಿ ಬೇಡುವರೆ ಹೊರತು ಹುಲಿ, ಸಿಂಹ, ಚಿರತೆ ಕಿರುಬ ಬಲಿ ಕೊಡಿ ಎಂದು ಕೇಳಲು ಹೆದರಿಕೆ ಎಂದರು. ಪ್ರಜಾಪ್ರಭುತ್ವದಲ್ಲಿ ಮುಡಿಯ ಮಾಣಿಕ್ಯ ನಮ್ಮ ಪ್ರಜಾಪ್ರಭುತ್ವ. ಸಾಮಾನ್ಯ ಪ್ರಜೆಯೊಬ್ಬರು ಈ ನಾಡ ಹಬ್ಬದ ಸಡಗರದ ಸರಣಿಯನ್ನು ಉದ್ಘಾಟಿಸುತ್ತಿರುವುದು ಆ ಪ್ರಜಾಪ್ರಭುತ್ವದ ಪರಿಕಲ್ಪನೆಯ ಮುಂದುವರಿಕೆಯಾಗಿದೆ. ಇದು ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು ಎಂಬ ಸಿದ್ದಾಂತವನ್ನು ಮಾನ್ಯ ಮಾಡಿದಂತೆ ಹಾಗೂ ಜನ ಮುಖೆ ಕಾಳಜಿಯನ್ನು ಎತ್ತಿ ಹಿಡಿದಂತೆ. ಈ ಪವಿತ್ರ ದಸರಾ ಉತ್ಸವ ಸರಣಿ ಕಾರ್ಯಕ್ರಮದ ಉದ್ಘಾಟನೆಯನ್ನು ನಮ್ಮ ನಾಡಿನ ಪ್ರಜೆಗಳ ಪರವಾಗಿ ವಿನಯ ಹಾಗೂ ಧನ್ಯತಾಭಾವದಿಂದ ನೆರವೇರಿಸುತ್ತಿದ್ದೇನೆ. ಮೈಸೂರು ಅಂದರೆ ದಸರಾ, ದಸರಾ ಅಂದರೆ ಮೈಸೂರು ಎನ್ನುತ್ತ ಆಶಯ ನುಡಿಗಳನ್ನಾಡಿದರು.

ಇದೇ ಸಂದರ್ಭದಲ್ಲಿ ದಿ. ಕಮಲಾ‌ ಹಂಪನಾ ಅವರಿಗೆ ನಮನ ಸಲ್ಲಿಕೆ ಮಾಡಲಾಯಿತು. ಹಂಪ ನಾಗರಾಜಯ್ಯ ಅವರ 88 ವರ್ಷದ ಸುಧೀರ್ಘ ಜೀವನದ ನೆನಪು ಮಾಡಿಕೊಂಡು ಭಾವುಕರಾದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ ಸೇರಿದಂತೆ ಹಲವರು ದಸರಾ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕ ಜಿ.ಟಿ. ದೇವೇಗೌಡ ಅವರು ವಹಿಸಿದ್ದರು.

MORE NEWS

‘ಸಂಗೀತ ವಿದ್ವಾನ್ ಪ್ರಶಸ್ತಿ’ಗೆ ಬಸವರಾಜ್ ಭಜಂತ್ರಿ ಆಯ್ಕೆ

03-10-2024 ಬೆಂಗಳೂರು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನಾ ಸಂದರ್ಭದಲ್ಲಿ ಪ್ರತಿ ವರ್ಷ ರಾಜ್ಯ ಸಕಾರದಿಂದ ಕೊಡಮಾಡಲಾಗುವ 2024-25ನ...

ನ್ಯಾಯಾಂಗ ಕ್ಷೇತ್ರದಲ್ಲಿ ಬರೆದಿರುವ ಬಹಳ ಅಪರೂಪದ ಬರವಣಿಗೆಯಿದು; ಮಲ್ಲೇಪುರಂ

02-10-2024 ಬೆಂಗಳೂರು

ಬೆಂಗಳೂರು: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕ...

ಪರೋಪಕಾರ ಗುಣ ಇಲ್ಲದ ವ್ಯಕ್ತಿ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಲು ಸಾಧ್ಯವಿಲ್ಲ; ಶ್ರೀನಾಥ್​ ಜೋಶಿ

02-10-2024 ಬೆಂಗಳೂರು

ಬೆಂಗಳೂರು: ಭಾರತ ಭೋಗ ಭೂಮಿಯಲ್ಲ, ತ್ಯಾಗ ಭೂಮಿ. ಇಂತಹ ಪುಣ್ಯ ದೇಶದಲ್ಲಿ ನಾವು ಎಷ್ಟು ತ್ಯಾಗ ಮಾಡುತ್ತೇವೆಯೋ, ಅಷ್ಟು ಒಳ...