ಲೇಖಕಿಯರ ಸಂಘದ ದತ್ತಿ ಪ್ರಶಸ್ತಿಗೆ ಕೃತಿಗಳ ಆಹ್ವಾನ

Date: 11-06-2024

Location: ಬೆಂಗಳೂರು


ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದಿಂದ ಪ್ರತೀ ಸಾಲಿನಲ್ಲಿ ಕೊಡಮಾಡುವ ‘ಲೇಖಕಿ ಎಚ್.ವಿ. ಸಾವಿತ್ರಮ್ಮ ದತ್ತಿ ಪ್ರಶಸ್ತಿ’ಗೆ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ.

2020ನೇ ಸಾಲಿಗೆ ‘ಕಥಾ ಸಂಕಲನ’, 2021ನೇ ಸಾಲಿಗೆ ‘ಅನುವಾದ ಸಾಹಿತ್ಯ’(ಯಾವುದೇ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರಬೇಕು), 2022ನೇ ಸಾಲಿಗೆ ‘ಕಾದಂಬರಿ’ ಹಾಗೂ 2023ನೇ ಸಾಲಿಗೆ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ.

ಆಯಾ ಪ್ರಕಾರಗಳಲ್ಲಿ ಮೂರು ಪ್ರತಿಗಳನ್ನು ಕಳುಹಿಸಬೇಕು. ಕೃತಿಗಳನ್ನು ಕಳುಹಿಸಲು ಜೂನ್ 26 ಕೊನೆಯ ದಿನ. ಪ್ರಶಸ್ತಿಯು 25,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ತಿಳಿಸಿದ್ದಾರೆ.

ಲೇಖಕಿಯರ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಕಳಿಸಬೇಕು. ಈಗಾಗಲೇ ಸಾವಿತ್ರಮ್ಮ ಮತ್ತು ಅನುಪಮಾ ಪ್ರಶಸ್ತಿಗಳನ್ನು ಪಡೆದವರು ಇದರಲ್ಲಿ ಭಾಗವಹಿಸುವಂತಿಲ್ಲ.

ಕೃತಿಗಳನ್ನು ಕಳುಹಿಸುವ ವಿಳಾಸ: ಕರ್ನಾಟಕ ಲೇಖಕಿಯರ ಸಂಘ, #206, 2ನೇ ಮಹಡಿ, ವಿಜಯ ಮ್ಯಾನ್ ಶನ್, 2ನೇ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು- 560018. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9480051222 ಅಥವಾ 8073765665 ಅನ್ನು ಸಂಪರ್ಕಿಸಬಹುದು.

MORE NEWS

ಸಮಗ್ರ ಕರ್ನಾಟಕದ ಕಲೆಯೊಂದಿದ್ದರೆ ಅದು ಯಕ್ಷಗಾನ ಮಾತ್ರ: ನರಹಳ್ಳಿ

16-09-2024 ಬೆಂಗಳೂರು

ಬೆಂಗಳೂರು: ಯಕ್ಷವಾಹಿನಿ ಪ್ರತಿಷ್ಠಾನ ಮತ್ತು ಹೆಗ್ಗೋಡಿನ ಯಕ್ಷ ದುರ್ಗ ಕಲಾ ಬಳಗ ಜಂಟಿಯಾಗಿ ಹಮ್ಮಿಕೊಂಡಿದ್ದ ಪಿ. ಚಂದ್ರಿ...

ಎಸ್.ಎಲ್.ಭೈರಪ್ಪ ಅವರಿಗೆ ‘ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ’

16-09-2024 ಬೆಂಗಳೂರು

ಬೀದರ್: ಹಾರಕೂಡ ಹಿರೇಮಠ ಸಂಸ್ಥಾನದ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿಗೆ ನಾಡಿನ ಹಿರಿಯ ...

ಸಣ್ಣ ಕತೆಗಾರ್ತಿ, ರಂಗಕಲಾವಿದೆ ಮನೋರಮಾ ಎಂ.ಭಟ್ ಇನ್ನಿಲ್ಲ

16-09-2024 ಬೆಂಗಳೂರು

ಬೆಂಗಳೂರು: ಸಣ್ಣ ಕತೆಗಾರ್ತಿ, ಆಕಾಶವಾಣಿ ಕಲಾವಿದೆ, ಅಂಕಣಗಾರ್ತಿ, ರಂಗಕಲಾವಿದೆ, ಕವಯಿತ್ರಿ, ಲೇಖಕಿಯಾಗಿ ಗುರುತಿಸಿಕೊಂಡ...