ಕನ್ನಡ ಸಾಹಿತ್ಯದಲ್ಲಿ ವಿಮರ್ಶೆಯ ಅಭಾವ ಇದೆ: ಎಲ್‌.ಎನ್. ಮುಕುಂದರಾಜ್‌

Date: 21-12-2024

Location: ಮಂಡ್ಯ


ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾಜಮುಖಿ ಪ್ರಕಾಶನದ ತೇಜಸ್ವಿ ಸಾಹಿತ್ಯ ಕುರಿತ ವಿಮರ್ಶಾ ಸಂಕಲನ ವಿಸ್ಮಯ ವಿಮರ್ಶೆ ಕೃತಿ ಹಾಗೂ ಲೋಹಿಯಾ ಪ್ರಕಾಶನದ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ: ಏಕೆ ಬೇಕು? ಹೇಗೆ ಸಾಧ್ಯ? ಪುಸ್ತಕಗಳನ್ನು ಜನಾರ್ಪಣೆ ಮಾಡಲಾಯಿತು. 

ಪುಸ್ತಕಗಳನ್ನು ಬಿಡುಗಡೆ ಮಾಡಿದ ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರು ವಿಮರ್ಶೆಯ ಅಭಾವವನ್ನು ಎದುರಿಸಿತ್ತಿರುವ ಕನ್ನಡ ಸಾಹಿತ್ಯ ಸಂದರ್ಭದಲ್ಲಿ, ಅದರಲ್ಲೂ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಕುರಿತು ಹೊರ ಬಂದಿರುವ 'ವಿಸ್ಮಯ ವಿಮರ್ಶೆ' ಕೃತಿಗೆ ವಿಶೇಷ ಮಹತ್ವ ಇದೆ ಎಂದು ತಿಳಿಸಿದರು.

ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ ಅವರು ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಅನುಷ್ಠಾನ ಎದುರಿಸುತ್ತಿರುವ ಸವಾಲುಗಳನ್ನು ಪ್ರಸ್ತಾಪಿಸಿದರು. ನಾಟಕಕಾರ  ನಾಡುನುಡಿ ಚಿಂತಕ ಜಯರಾಮ್ ರಾಯಪುರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಎರಡು ಕೃತಿಗಳ ಪ್ರಸ್ತುತತೆ ಬಗ್ಗೆ ವಿವರಿಸಿದರು. ಹಿರಿಯ ಪತ್ರಕರ್ತ ಚಂದ್ರಕಾಂತ ವಡ್ಡು ಉಪಸ್ಥಿತರಿದ್ದರು

MORE NEWS

ನಿಜವಾದ ಓದುಗರು ಅದೃಷ್ಯ ಓದುಗರು : ವಿಕ್ರಂ ವಿಸಾಜಿ

22-12-2024 ಮಂಡ್ಯ

ಮಂಡ್ಯ: ಕಳೆದ ೧೫, ೨೦ ವರ್ಷಗಳಲ್ಲಿ ಪೃವರ್ತಮಾನಕ್ಕೆ ಬರುತ್ತಿರುವಂತಹ ಲೇಖಕರು ಲೇಖಕಿಯರನ್ನು ಹೊಸತಲೆಮಾರು ಎಂದು ನಾವು ಪರ...

ಕನ್ನಡ ಆತ್ಮ ಕಥನಗಳ ಒಳನೋಟ ನಮಗೆ ದಕ್ಕಿಲ್ಲ: ಅರುಣ್ ಜೋಳದಕೂಡ್ಲಿಗಿ

22-12-2024 ಮಂಡ್ಯ

ಮಂಡ್ಯ: ಆತ್ಮ ಕಥನಗಳ ಮೂಲಕ ನಮ್ಮ ಸಂಸ್ಕೃತಿಯನ್ನ ಮರು ಕಟ್ಟಲು ಯಾಕೆ ಸಾಧ್ಯವಾಗುತ್ತಿಲ್ಲ. ಅಲ್ಲದೇ ಹೆಣ್ಣು ಮಕ್ಕಳ ಆತ್ಮಕ...

ಲಿಂಗ, ಲಿಂಗತ್ವ, ಲೈಂಗಿಕತೆಯ ಮಡಿಯನ್ನು ಮನೆಯಲ್ಲೇ ಬಿಡಿ: ಅಕ್ಕೈ ಪದ್ಮಶಾಲಿ

22-12-2024 ಮಂಡ್ಯ

ಮಂಡ್ಯ:  ಲಿಂಗ, ಲಿಂಗತ್ವ, ಲೈಂಗಿಕತೆಯ ಮಡಿಯನ್ನು ಮನೆಯಲ್ಲೇ ಬಿಡಿಬೇಕು. ಆಗ ಮಾತ್ರ ಮುಕ್ತವಾಗಿರಲು ಸಾಧ್ಯ. ಸ್ತ್ರ...