ಕನ್ನಡ ಸಂಘದ ಉದ್ಘಾಟನೆ, ಬಹುಮಾನ ವಿತರಣೆ ಮತ್ತು ಪ್ರೊ.ಎಲ್.ಎಸ್. ಶೇಷಗಿರಿರಾವ್ ಶತಮಾನೋತ್ಸವ ಉಪನ್ಯಾಸ

Date: 25-07-2024

Location: ಬೆಂಗಳೂರು


ಬೆಂಗಳೂರು: ಜ್ಯೋತಿ ನಿವಾಸ್ ಕಾಲೇಜು ಸ್ವಾಯತ್ತದಿಂದ ಕನ್ನಡ ಗೆಳೆಯರ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ ಸಂಘದ ಉದ್ಘಾಟನೆ, ಬಹುಮಾನ ವಿತರಣೆ ಮತ್ತು ಪ್ರೊ.ಎಲ್.ಎಸ್. ಶೇಷಗಿರಿರಾವ್ ಶತಮಾನೋತ್ಸವ ಉಪನ್ಯಾಸ’ ಕಾರ್ಯಕ್ರಮವು 2024 ಜುಲೈ 25 ಗುರುವಾರದಂದು ಕೋರಮಂಗಲದ ಜ್ಯೋತಿನಿವಾಸ್ ಕಾಲೇಜಿನ ಜ್ಯೋತಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ನಿವಾಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಸೋ. ಮೇರಿ ಲೂಯಿಸಾ ಸೆಬಾಸ್ಟಿಯನ್ ಅವರು ವಹಿಸಿಕೊಂಡಿದ್ದರು. ಕನ್ನಡ ಸಂಘದ ಉದ್ಘಾಟನೆಯನ್ನು ಕನ್ನಡ ಹೋರಾಟಗಾರ ರಾ.ನಂ. ಚಂದ್ರಶೇಖರ್ ಅವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯಕ್ಕೆ ಪ್ರೊ.ಎಲ್.ಎಸ್.ರ ಕೊಡುಗೆ ಡಾ.ಎಸ್.ಎಲ್. ಶ್ರೀನಿವಾಸಮೂರ್ತಿ ವಿಚಾರದ ಕುರಿತು ವಿಜಯ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಸ್.ಎಲ್. ಶ್ರೀನಿವಾಸಮೂರ್ತಿ ಮಾತನಾಡಿದರು.

ಜ್ಯೋತಿ ನಿವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಗೂಳಪ್ಪ ವಕ್ಕುಂದ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಭಾರತಿ ಶೇಷಗಿರಿರಾವ್, ಡಾ. ಲೀಲಾವತಿ ಎಚ್.ಎಸ್, ಡಾ. ಮಂಜುನಾಥ ಜಿ. ಗೌರವ ಉಪಸ್ಥಿತಿಯನ್ನು ವಹಿಸಿಕೊಂಡಿದ್ದರು.

 

MORE NEWS

ಸಮಗ್ರ ಕರ್ನಾಟಕದ ಕಲೆಯೊಂದಿದ್ದರೆ ಅದು ಯಕ್ಷಗಾನ ಮಾತ್ರ: ನರಹಳ್ಳಿ

16-09-2024 ಬೆಂಗಳೂರು

ಬೆಂಗಳೂರು: ಯಕ್ಷವಾಹಿನಿ ಪ್ರತಿಷ್ಠಾನ ಮತ್ತು ಹೆಗ್ಗೋಡಿನ ಯಕ್ಷ ದುರ್ಗ ಕಲಾ ಬಳಗ ಜಂಟಿಯಾಗಿ ಹಮ್ಮಿಕೊಂಡಿದ್ದ ಪಿ. ಚಂದ್ರಿ...

ಎಸ್.ಎಲ್.ಭೈರಪ್ಪ ಅವರಿಗೆ ‘ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ’

16-09-2024 ಬೆಂಗಳೂರು

ಬೀದರ್: ಹಾರಕೂಡ ಹಿರೇಮಠ ಸಂಸ್ಥಾನದ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಶ್ರೀ ಚೆನ್ನ ರೇಣುಕ ಬಸವ ಪ್ರಶಸ್ತಿಗೆ ನಾಡಿನ ಹಿರಿಯ ...

ಸಣ್ಣ ಕತೆಗಾರ್ತಿ, ರಂಗಕಲಾವಿದೆ ಮನೋರಮಾ ಎಂ.ಭಟ್ ಇನ್ನಿಲ್ಲ

16-09-2024 ಬೆಂಗಳೂರು

ಬೆಂಗಳೂರು: ಸಣ್ಣ ಕತೆಗಾರ್ತಿ, ಆಕಾಶವಾಣಿ ಕಲಾವಿದೆ, ಅಂಕಣಗಾರ್ತಿ, ರಂಗಕಲಾವಿದೆ, ಕವಯಿತ್ರಿ, ಲೇಖಕಿಯಾಗಿ ಗುರುತಿಸಿಕೊಂಡ...