ಇಂದಿನ ಕವಿಗಳು ಸಾಮಾಜಿಕ ಜವಾಬ್ದಾರಿಯ ಬಗ್ಗೆ ಗಮನಹರಿಸಬೇಕಿದೆ: ನಾರಾಯಣ ಸ್ವಾಮಿ ಘಟ್ಟ

Date: 28-08-2022

Location: ಬೆಂಗಳೂರು


ಅಲ್ಲಮ ಪ್ರಕಾಶನದಿಂದ ಆಯೋಜಿಸಲಾದ ' ಅಲ್ಲಮ ಕಾವ್ಯ ಪುರಸ್ಕಾರ' ವನ್ನು ಸೂರ್ಯಕೀರ್ತಿ ಅವರ ' ಮೀನು ಕುಡಿದ ಕಡಲು ' ಕೃತಿ ಪಡೆದುಕೊಂಡಿತ್ತು. ಇಂದು ಕೃತಿಯ ಬಿಡುಗಡೆಯ ಜೊತೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ನಾಡಿನ ಕವಿಗಳಾದ ಡಾ. ಎಲ್ ಎನ್ ಮುಕುಂದ ರಾಜ್, ಡಾ. ಎಲ್ ಜಿ ಮೀರಾ , ಪ್ರೊ. ನಾರಾಯಣ ಸ್ವಾಮಿ ಘಟ್ಟ ಮುಂತಾದವರು ಇದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೊ. ನಾರಾಯಣ ಸ್ವಾಮಿ ಘಟ್ಟ ಅವರು ಮಾಡುತ್ತಾ 'ಇಂದಿನ ಕವಿಗಳು ಜಾತಿ, ಮತ, ಗುಂಪುಗಳ ಬಿಟ್ಟು ಸಾಮಾಜಿಕ ಜವಾಬ್ದಾರಿಯ ಬಗ್ಗೆ ಗಮನಹರಿಸಬೇಕಿದೆ. ಮಾನವೀಯ ಮೌಲ್ಯಗಳನ್ನು ತಮ್ಮ ತಮ್ಮ ಕೃತಿಗಳಲ್ಲಿ ಬರೆದು, ಸಮಾಜವನ್ನು ರೂಪಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು ' ಎಂದರು.

ಮೀನು ಕುಡಿದ ಕಡಲು ಕೃತಿಯ ಬಗ್ಗೆ ಮಾತನಾಡುತ್ತಾ ಡಾ. ಎಲ್ ಜಿ ಮೀರಾ ಅವರು ' ಸೂರ್ಯ ಕೀರ್ತಿ ಅವರ ಕವಿತೆಗಳಲ್ಲಿ ಪ್ರಭುತ್ವವನ್ನು ಧಿಕ್ಕರಿಸುವ, ರಾಜಕೀಯವಾಗಿ ಟೀಕಿಸುವ ಕವಿಯಾಗಿದ್ದಾರೆ. ಇಂದು ಅಡಿಗರಂತೆ ರಾಜಕೀಯವನ್ನು ಟೀಕಿಸುವಲ್ಲಿ ಯುವಕವಿಗಳು ಗಮನ ಹರಿಸುವುದು ಮುಖ್ಯ. ಸೂರ್ಯ ಕೀರ್ತಿ ಅವರ ಕವಿತೆಗಳಲ್ಲಿ ತಾತ್ವಿಕತೆ, ಸ್ತ್ರೀ ಸಂವೇದನೆ, ಸಾಮಾಜಿಕ, ರಾಜಕೀಯ, ಪ್ರೇಮದ ಬಗ್ಗೆ ಬಹಳ ಅರ್ಥ ಪೂರ್ಣವಾಗಿ ಬರೆದಂತಹ ಪದ್ಯಗಳನ್ನು ಈ ಸಂಕಲನದಲ್ಲಿ ನೋಡಬಹುದು. ಆಧುನಿಕತೆಯ ದುರಂತ ಜೀವನಗಳನ್ನು ಕಾವ್ಯದ ಮೂಲಕ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸೂರ್ಯ ಕೀರ್ತಿ ಅವರು ಪ್ರಬುದ್ಧ ಕವಿಯಾಗಿ ಬರೆದಿರುವ ಕವಿತೆಗಳು ಈ ಮೀನು ಕುಡಿದ ಕಡಲು ಪುಸ್ತಕದಲ್ಲಿವೆ ಎಂದು ಹೇಳಿದರು.

ಡಾ. ಎಲ್ ಎನ್ ಮುಕುಂದ ರಾಜ್ ಅವರು ಕೂಡಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಕಾರ್ಯಕ್ರಮವು ಕುವೆಂಪು ಸಭಾಂಗಣ , ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರಿನಲ್ಲಿ ನಡೆಯಿತು.

MORE NEWS

ಹಿ.ಶಿ. ರಾಮಚಂದ್ರೇಗೌಡ ಹಾಗೂ ಬಿ.ಎನ್. ಸುಮಿತ್ರಾಬಾಯಿಗೆ ಮನು ಬಳಿಗಾರ್ ಸ್ಥಾಪಿಸಿರುವ ಕಸಾಪ ಗೌರವ ದತ್ತಿ

07-05-2025 ಬೆಂಗಳೂರು

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಾಡೋಜ ಡಾ. ಮನು ಬಳಿಗಾರ್ ಸ್ಥಾಪಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಗ...

‘ಹೊಂಗಿರಣ’ ರಾಜ್ಯ ಮಟ್ಟದ ಕವನ ಸ್ಪರ್ಧೆ ಮತ್ತು ಕವಿಗೋಷ್ಠಿ

07-05-2025 ಬೆಂಗಳೂರು

ಬೆಂಗಳೂರು: “ಹೊಂಗಿರಣ”ವು ರಾಜ್ಯ ಮಟ್ಟದ ಕವನ ಸ್ಪರ್ಧೆ ಹಾಗೂ ಕವಿಗೋಷ್ಠಿಗೆ ಆಹ್ವಾನ ನೀಡಿದೆ. ಸ್ಪರ್ಧೆ...

ಸಾಹಿತಿ, ವಿಮರ್ಶಕ ಜಿ.ಎಸ್.ಸಿದ್ದಲಿಂಗಯ್ಯ ಇನ್ನಿಲ್ಲ

07-05-2025 ಬೆಂಗಳೂರು

ಬೆಂಗಳೂರು: ಸಾಹಿತಿ, ವಿಮರ್ಶಕ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕ್ರೀಯಾಶೀಲವಾಗಿ ಸೇವೆ ಸಲ್ಲಿಸಿದ್ದ ಜಿ.ಎಸ...