"ಇತಿಹಾಸದಲ್ಲಿ ದಾಖಲಾಗುವ ಈ ಶತಮಾನದ ಮಹಾ ತಲ್ಲಣಗಳಲ್ಲಿ ಒಂದಾದ ಕರೋನಾ ಮಹಾಮಾರಿಯನ್ನು ಒಬ್ಬ ಗುತ್ತಿಗೆ ವೈದ್ಯನ ಪರಿಮಿತಿಯಲ್ಲಿ ಕವಲುಗುಡ್ಡವೆಂಬ ಸೀಮಿತ ವಲಯದಲ್ಲಿ ದಾಖಲಿಸಿದ್ದಾರೆ," ಎನ್ನುತ್ತಾರೆ ರೇವಣಸಿದ್ಧಪ್ಪ ಜಿ.ಆರ್. ಅವರು ಲಕ್ಷ್ಮಣ ವಿ.ಎ ಅವರ ‘ಕವಲುಗುಡ್ಡ 24/7' ಕೃತಿ ಕುರಿತು ಬರೆದ ಅನಿಸಿಕೆ.
"ಸುಹಾಸ್ ಆ ಸತ್ತವರ ಹಾಳೆಗಳನ್ನು ಒಂದೊಂದಾಗಿ ಆರಿಸಿ ಮತ್ತೆ ಫೈಲಿಗೆ ಜೋಡಿಸಿಡುವಾಗ ಈಗ ಸತ್ತವರ ಮೂಳೆಗಳನ್ನು ಸ್ಮಶಾನದಲ್ಲಿ ಹೆಕ್ಕಿ ಆರಿಸಿ ಮತ್ತೆ ಇಟ್ಟಂತೆ ಭಾಸವಾಯಿತು"- ಇದು ಡಾ.ವಿ.ಎ.ಲಕ್ಷ್ಮಣರ ಕಾದಂಬರಿಯಲ್ಲಿ ಬರುವ ಒಂದು ಸಾಲು.
ಈಗಾಗಲೇ ಕವಿತೆ, ಕತೆ, ಪ್ರಬಂಧ ಇತ್ಯಾದಿಗಳಲ್ಲಿ ಕೃಷಿ ಮಾಡಿ ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿರುವ ಮಿತ್ರ ಡಾ.ಲಕ್ಷ್ಮಣ್ ವಿ.ಎ. "ಪಿ.ಎಚ್. ಸಿ. ಕವಲುಗುಡ್ಡ 24/7" ಮೂಲಕ ಕಾದಂಬರಿಕಾರರಾಗಿ ಹೊರಹೊಮ್ಮಿದ್ದಾರೆ.
ಇತಿಹಾಸದಲ್ಲಿ ದಾಖಲಾಗುವ ಈ ಶತಮಾನದ ಮಹಾ ತಲ್ಲಣಗಳಲ್ಲಿ ಒಂದಾದ ಕರೋನಾ ಮಹಾಮಾರಿಯನ್ನು ಒಬ್ಬ ಗುತ್ತಿಗೆ ವೈದ್ಯನ ಪರಿಮಿತಿಯಲ್ಲಿ ಕವಲುಗುಡ್ಡವೆಂಬ ಸೀಮಿತ ವಲಯದಲ್ಲಿ ದಾಖಲಿಸಿದ್ದಾರೆ.
ಸ್ವತಃ ವೈದ್ಯರಾಗಿ ಕರೋನಾ ಕಾಲದ ಸಂಕಷ್ಟಗಳನ್ನು ಹತ್ತಿರದಿಂದ ಗಮನಿಸಿರುವ ಅನುಭವಿಸಿರುವ ಕಾದಂಬರಿಕಾರ ಡಾ.ಲಕ್ಷ್ಮಣ್ ವಿ.ಎ.ಅವರಿಂದ ಈ ಕಾದಂಬರಿ ಅನಾಯಾಸವಾಗಿ ಬರೆಸಿಕೊಂಡಿದೆ. ಕಾದಂಬರಿಯ ಪ್ರೊಟಗಾನಿಸ್ಟ್ ಡಾ.ಸುಹಾಸನಿಗೂ ಕಾದಂಬರಿಕಾರ ಡಾ.ಲಕ್ಷ್ಮಣ ವಿ.ಎ.ಅವರಿಗೂ ಅಭೇದ ವೇದ್ಯವಾಗುತ್ತದೆ.
ಆಪತ್ತುಗಳು ಮನುಷ್ಯನಿಗೆ ಬರುತ್ತವೆ. ಮತ್ತು ಈ ಆಪತ್ತುಗಳು ಮನುಷ್ಯನ ವರ್ತನೆಯನ್ನು ಒರೆಗೆ ಹಚ್ಚುತ್ತವೆ.ಕೊರೋನಾದ ಕುರಿತು ಬರೆಯಲ್ಪಟ್ಟ ಕಾದಂಬರಿಯಾದರೂ ಇಲ್ಲಿ ಅದಕ್ಕಿನ್ನ ಹೆಚ್ಚು ಫೋಕಸ್ ಇರುವುದು ಕರೋನಾ ಸನ್ನಿವೇಶದಲ್ಲಿ ವಿವಿಧ ಸ್ತರದ ವ್ಯಕ್ತಿಗಳ ಮೃಗೀಯ ವರ್ತನೆಯ ಮೇಲೆ ಮತ್ತು ಅಮಾಯಕರೂ ಪ್ರಾಮಾಣಿಕರೂ ದುಷ್ಟ ಭ್ರಷ್ಟ ವ್ಯವಸ್ಥೆಯ ಕಬಂಧ ಬಾಹುಗಳಲ್ಲಿ ಹೇಗೆ ಬಲಿಪಶುಗಳಾಗುತ್ತಾರೆಂಬುದರ ಮೇಲೆ.
ಕಾದಂಬರಿಯ ಆರಂಭದಿಂದ ಕೊನೆಯವರೆಗೆ ವಿಷಾದದ ಛಾಯೆಯಿದೆ. ಇಂಥದ್ದೊಂದು ಭಯಂಕರ ಸಾಂಕ್ರಾಮಿಕ ರೋಗದ ಸುತ್ತ ಹೆಣಿದಿರುವ ಕಾದಂಬರಿಯಲ್ಲಿ ಅದು ಸಹಜವೂ ಆಗಿದೆ.
ಡಾ.ಲಕ್ಷ್ಮಣ್ ವಿ.ಎ. ಲೇಖಕರಾಗಿ ಹೊಸಬರಲ್ಲ; ಕಾದಂಬರಿಕಾರರಾಗಿ ಹೊಸಬರು. ಹೊಸಬರೆಂಬ ರಿಯಾಯಿತಿಯನ್ನು ಬೇಡದೆ ಕಾದಂಬರಿ ಓದಿಸಿಕೊಂಡು ಹೋಗುತ್ತದೆ. ಕಾದಂಬರಿಯ ಕೆಲವು ಪಾತ್ರಗಳಿಗೆ ಇನ್ನಷ್ಟ ಸ್ಕೋಪ್ ಕೊಟ್ಟಿದ್ದರೆ ಕೆಲವು ಸನ್ನಿವೇಶಗಳಿಗೆ ಮತ್ತಷ್ಟು ಸ್ಪೇಸ್ ನೀಡಿದ್ದರೆ ಇನ್ನೂ ಚೆನ್ನಾಗಿರುತ್ತಿದ್ದೆಂದು ಅನಿಸಿದರೂ ಈಗ ಇರುವಂತೆಯೇ ಅದರ ಒಟ್ಟಂದಕ್ಕೆ ಧಕ್ಕೆ ಇಲ್ಲ.
ಇಂಥ ಕಾದಂಬರಿಯನ್ನು ಮೊದಲ ಸಲವೇ ಕೊಟ್ಟ ಮಿತ್ರ ಡಾ.ಲಕ್ಷ್ಮಣ್. ವಿ.ಎ.ಅವರ ಲೇಖನಿಯಿಂದ ಇನ್ನಷ್ಟು ಅದ್ಭುತ ಕೃತಿಗಳು ಮೂಡಲೆಂದು ತುಂಬು ಹೃದಯದಿಂದ ಹಾರೈಸುತ್ತೇನೆ.
"ಎಲ್ಲೊ ಒಂದು ಮಾತು ಕೇಳಿದ್ದೆ 'ಈಗಿನ ಕಾಲದಲ್ಲಿ ಯಾರಾದರೂ ಏನಾದರೂ ಬರೆದರೆ ಅದು ಹಿಂದೆ ಎಂದೋ ಯಾರೋ ಬರೆದು ಸೈ...
"ಕಥಾ ನಾಯಕಿಯ ಜೀವನ ಯಾವ ರೀತಿ ಬದಲಾಗುತ್ತದೆ? ಅವಳು ಇಷ್ಟಪಟ್ಟ ಜೀವನ ಅವಳಿಗೆ ಸಿಗುತ್ತದೆಯೋ? ಎನ್ನುವ ಪ್ರಶ್ನೆಗಳೊ...
"ಈ ಮುನ್ನುಡಿಯ ಆರಂಭದಲ್ಲೇ ಸೂಚಿಸಿದಂತೆ ಮ ಸ್ವಾಮಿ ಕಪ್ಪಸೋಗೆ ಅವರಿಗೆ ಕತೆ ಹೇಳುವ ಕಲೆ ಗೊತ್ತಿದೆ. ಸುಲಲಿತವಾಗಿ ನ...
©2025 Book Brahma Private Limited.