ಡಯಾಬಿಟಿಸ್ ಗೆ ಕಾರಣಗಳೇನು? ಅದರ ನಿವಾರಣೆಗಿರುವ ಪರಿಹಾರಗಳೇನು?


“ಸಕ್ಕರೆ ಪ್ರಮಾಣದ ಹೆಚ್ಚಳದ‌‌ ದೈಹಿಕ ಏರುಪೇರುಗಳನ್ನು ಹೊಸತೊಂದು ಸಂಶೋಧನೆ Diabetes Reversal ಎಂಬ ಪದ್ಧತಿಯಿಂದ ಸಂಪೂರ್ಣ ನಿಯಂತ್ರಣಕ್ಕೆ ತರಬಹುದು ಎಂಬ ವಿಚಾರವನ್ನು ಈ ಪುಸ್ತಕದಲ್ಲಿ ಸರಳಾತಿಸರಳವಾಗಿ ನಿರೂಪಿಸಿದ್ದಾರೆ‌” ಎನ್ನುತ್ತಾರೆ ಉದಯ ಕುಮಾರ್ ಹಬ್ಬು. ಅವರು ಡಾ. ಪ್ರೀತಂ ಜಿ. ಅವರ ‘ಡಯಾಬಿಟಿಸ್ ರಿವರ್ಸಲ್’ ಕೃತಿ ಗೆ ಬರೆದ ವಿಮರ್ಶೆ.

ಶಿವಮೊಗ್ಗ ಜಿಲ್ಲೆಯ ಸಾಮಾಜಿಕ ಸೇವಾನಿರತ ಮಾನ್ಯ ಅರುಣ್ ಪ್ರಸಾದ್ ಅವರು ಈ ಅತ್ಯಮೂಲ್ಯ ಪುಸ್ತಕವನ್ನು ನನ್ನ ಕೋರಿಕೆಯ ಮೇರೆಗೆ ಕಳಿಸಿದ್ದಾರೆ‌. ಈ ಅಮೂಲ್ಯ ಕೃತಿಯ ಲೇಖಕರು ಡಾ ಪ್ರೀತಂ ಡಯಬೆಟಿಕ್ ಸೆಂಟರಿನ ಡಾ ಪ್ರೀತಂ ಅವರು. ಡಯಾಬಿಟಿಸ್ ಅಥವಾ ಸಕ್ಕರೆ ಪ್ರಮಾಣದ ಹೆಚ್ಚಳದ‌‌ ದೈಹಿಕ ಏರುಪೇರುಗಳನ್ನು ಹೊಸತೊಂದು ಸಂಶೋಧನೆ Diabetes Reversal ಎಂಬ ಪದ್ಧತಿಯಿಂದ ಸಂಪೂರ್ಣ ನಿಯಂತ್ರಣಕ್ಕೆ ತರಬಹುದು ಎಂಬ ವಿಚಾರವನ್ನು ಈ ಪುಸ್ತಕದಲ್ಲಿ ಸರಳಾತಿಸರಳವಾಗಿ ನಿರೂಪಿಸಿದ್ದಾರೆ‌.

ಡಯಾಬಿಟಿಸ್ ಗೆ ಕಾರಣಗಳೇನು? ಅದರ ನಿವಾರಣೆಗಿರುವ ಪರಿಹಾರಗಳೇನು?

ಈ ಪುಸ್ತಕಕ್ಕೆ ಪ್ರಸಿದ್ಧ ಕವಿ ಮತ್ತು ಚಿಂತಕ ಎಚ್.‌ಎಸ್. ಶಿವಪ್ರಕಾಶ ಮುನ್ನುಡಿ ಬರೆದಿದ್ದಾರೆ. ಅವರ ಮಾತುಗಳಲ್ಲಿ" ಡಾ ಪ್ರೀತಂ ಅವರ ವೈದ್ಯಕೀಯ ಕೌಶಲ ಮತ್ತು ಅವರ ಸ್ನೇಹಕ್ಕೆ ಮಾರು ಹೋಗಿರುವ ನಾನು ಈ ಪುಸ್ತಕಕ್ಕೆ ಮುನ್ನುಡಿ ಬರೆಯಿರಿ ಎಂದು ಕೇಳಿಕೊಂಡಾಗ ಹೇಗೆ ಇಲ್ಲವೆನ್ನಲಿ? ಅಲ್ಲದೆ ಅವರು ನನ್ನ ಸಕ್ಕರೆ ಮಟ್ಟವನ್ನು 5-6 ದಿನಗಳಲ್ಲಿ 575 ರಿಂದ 130ಕ್ಕೆ ಇಳಿಸಿದ ಪವಾಡ ಪುರುಷರೂ ಕೂಡ‌ "ನನ್ನಂಥ ಸಾವಿರಾರು, ಲಕ್ಷಾಂತರ ಸಕ್ಕರೆ ಕಾಯಿಲೆ ಪೀಡಿತ ಜನರಿಗೆ ಸರಳವಾದ, ಕುರ್ತೇಟಾದ ದಾರಿ ತೋರಿಸುವ ಈ ಪುಸ್ತಕ ಬೆಲೆಗಟ್ಟಲಾಗದ್ದು. ಸುಲಿದ ಬಾಳೆ ಹಣ್ಣಿನ‌ ಥರ ತಿಳಿಗನ್ನಡದಲ್ಲಿ ಗೊಂದಲಗಳನ್ನು ನಿವಾರಿಸಿ ಮಾಹಿತಿ ಮತ್ತು ಪರಿಹಾರವನ್ನು ಸೂಚಿಸುವುದು ಈ ಪುಸ್ತಕದ ವಿಶೇಷ ಪ್ರಸ್ತುತತೆ.

ಮೊದಲಿಗೆ ಸಕ್ಕರೆ ಖಾಯಿಲೆಯ ವ್ಯಾಪಕತೆ ಮತ್ತು ಅಪಾಯಗಳನ್ನು ಬರಹಗಾರರು ಬಿಡಿಸಿ ಬಿಡಿಸಿ ನಮಗೆ ಹೇಳುತ್ತಾರೆ. ಆ ನಂತರ ಖಾಯಿಲೆಯ ಕಾರಣಗಳನ್ನು ತಿಳಿಸಿ ಅದರ ವಿರೋಧದ ಜರೂರಿಯನ್ನು ಒತ್ತಿ ಹೇಳಿ ಕೊನೆಗೆ ವಿರೋಧದ ಮಾರ್ಗೋಪಾಯಗಳನ್ನು ವಿವರಿಸುತ್ತಾರೆ.

ಪ್ರೀತಂ ಡಾಕ್ಟ್ರು ಪರಿಹಾರವನ್ನು ಚುಟುಕಾಗಿ ಮೂರು ನಿಮಿಷಗಳಲ್ಲಿ ಮೂರು ನಾಲ್ಕು ವಾಕ್ಯಗಳಲ್ಲಿ ತಿಳಿಸಿದರು‌ ಗುಟ್ಟು ಇಷ್ಟೇ; ನಿಮ್ಮ ಮಾಮೂಲಿ ಊಟದಲ್ಲಿರುವ ಶೇಕಡಾ 80 ಕಾರ್ಬೋಹೈಡ್ರೇಟ್ ಶೇಕಡಾ 40ಕ್ಕೆ ಇಳಿಸಿ ಮಿಕ್ಕಂತೆ ಪ್ರೋಟೀನ್ ಕೊಬ್ಬು ನಾರುಗಳನ್ನು ಸೇರಿಸಿಕೊಳ್ಳಿರಿ. ಮದ್ದು ಇನ್ನೂ ಹದಗೆಡುವುದನ್ನು ತಡೆಯಬಲ್ಲುದೇ ಹೊರತು ಸರಿಪಡಿಸಲಾರದು.

ನನಗೆ ನಂಬಿಕೆ ಬರಲಿಲ್ಲ‌ ಇಷ್ಟು ಸುಲಭಾನಾ? ಗಂಟೆಗಟ್ಟಲೆ ಯೋಗಾಭ್ಯಾಸ, ವರ್ಷಗಟ್ಟಲೆ ಗುಳಿಗೆ, ಚುಚ್ಚುಮದ್ದು ಯಾವುದಕ್ಕೂ ಜಗ್ಗದ ಜಾಡ್ಯ ಇಷ್ಟು ಸುಲಭವಾಗಿ ಕುಗ್ಗುತ್ತದಾ? ನನ್ನ ಅನುಮಾನಗಳು ಎಷ್ಟೇ ಬಲವಾಗಿದ್ದರೂ ನಾನವರ ಸೂಚನೆಗಳನ್ನು ಪಾಲಿಸಲು ಕಟಿಬದ್ಧನಾದೆ. 5 ದಿವಸದಲ್ಲಿ ನನ್ನ ಸಕ್ಕರೆ 575ರಿಂದ 130ಕ್ಕೆ ಇಳಿಯಿತು ಎನ್ನುತ್ತಾರೆ ಡಾ ಎಚ್ ಎಸ್ ಶಿವಪ್ರಕಾಶ್.

‌ಡಯಾಬಿಟಿಸ್ ರಿವರ್ಸಲ್ ಮಾಡಿಕೊಳ್ಳಲು ಈ ಕೆಳಗಿನ ಸರಳ ಉಪಾಯಗಳನ್ನು ಡಾ‌ ಪ್ರೀತಂ‌ ಸೂಚಿಸುತ್ತಾರೆ‌.

* ನೀವು ಡಯಾಬಿಟಿಸ್ ಹಿಮ್ಮೆಟ್ಟಿಸಬೇಕೆಂದು ನಿರ್ಧಾರ ಮಾಡಿದ ದಿನದಿಂದ 21 ದಿನಗಳವರೆಗೆ ನಿಮ್ಮ ಗುರಿ ಖಚಿತವಾಗಿಡಿ‌.

* ನಿಮ್ಮ ದಿನಚರಿಯ ಒಂದು ಟೈಮ್ ಟೇಬಲ್ ಹಾಕಿಕೊಳ್ಳಿ

* ನಿಮ್ಮ‌ಊಟ ಉಪಹಾರದ ಸಮಯ ನಿಗದಿಪಡಿಸಿಕೊಳ್ಳಿ

* ಬೆಳಿಗ್ಗೆ 45 ನಿಮಿಷ ಯಾವುದೆ ಒಂದು ವ್ಯಾಯಾಮದಲ್ಲಿ ತೊಡಗಿ: ವಾಕ್ ಮಾಡಬಹುದು, ಯೋಗ ಮಾಡಬಹುದು, ಅಥವಾ ಇನ್ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳಬಹುದು‌

* ಮನೆಯಲ್ಲಿ ಗ್ಲುಕೊಮೀಟರ್ ಮತ್ತು ರಕ್ತದೊತ್ತಡ ಪರೀಕ್ಷಿಸುವ ಸಾಧನಗಳನ್ನು ಇಟ್ಟುಕೊಳ್ಳಿ‌

* ಊಟ ಉಪಾಹಾರಕ್ಕೆ ಕುಳಿತಾಗ ಮೊದಲು ಎಲ್ಲ ರೀತಿಯ ತರಕಾರಿಗಳು, ಮೊಟ್ಟೆ, ಚಿಕನ್, ಫಿಶ್ ಮುಂತಾದವುಗಳನ್ನು ಮೊದಲು ತಿನ್ನಿರಿ. ಅಲ್ಲಿಗೆ ನಿಮಗೆ ಹೊಟ್ಟೆ ತುಂಬಿದ ಭಾವನೆ ಬರುತ್ತದೆ‌ ನಂತರ ಅಕ್ಕಿ, ರಾಗಿ, ಗೋಧಿ ಮುಂತಾದವುಗಳನ್ನು ಮಿತವಾಗಿ ಬಳಸಿ‌

*ರಾತ್ರಿ ಊಟವನ್ನು ಸಾಧ್ಯವಾದಷ್ಟು ಬೇಗ ಅಂದರೆ ಸೂರ್ಯಾಸ್ತದ ಸಮಯದ ಹೊತ್ತಿಗೆ ಮುಗಿಸಿ‌

*'ಪ್ರತಿ ದಿನ ಖಾಲಿ ಹೊಟ್ಟೆಯಲ್ಲಿ ಮತ್ತು ತಿಂಡಿ ತಿಂದ ನಂತರ ರಕ್ತ ಪರೀಕ್ಷೆ ಮಾಡಿಕೊಳ್ಳಿ‌. ಇದರಿಂದ ನಿಮಗೆ ಯಾವ ಆಹಾರದಲ್ಲಿ ರಕ್ತದಲ್ಲಿಯ ಸಕ್ಕರೆ ಪ್ರಮಾಣ ಏನಾಗುತ್ತದೆ ಎಂಬ ತಿಳಿವಳಿಕೆ ಬರುತ್ತದೆ. ಸಾಧ್ಯವಾದರೆ Continuous Glucose Monitoring System ಉಪಯೋಗಿಸಿ.

*ನಿಮ್ನ ಊಟದ ತಟ್ಟೆ ಚಿಕ್ಕದಾಗಿರಲಿ‌ ತಟ್ಟೆ ಚಿಕ್ಕದಾದಷ್ಟು ನಮಗೆ ಹೆಚ್ಚು ತಿಂದ ಅನುಭವ ಆಗುತ್ತದೆ‌

* ಪ್ರತಿ ದಿನ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಕಡಿಮೆ ಆಗುತ್ತಾ ಹೋದಂತೆ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ‌ ಮಾತ್ರೆ ಅಥವಾ ಇನ್ಸುಲಿನ್ ಪ್ರಮಾಣ ತಗ್ಗಿಸುತ್ತಾ ಬನ್ನಿ. ಕೇವಲ 21 ದಿನ ಇದನ್ನು ಮಾಡುವುದರಿಂದ ನಿಮಗೆ ಈ ಜೀವನಶೈಲಿ ಅಭ್ಯಾಸವಾಗುತ್ತದೆ‌. ಇದನ್ನು ಮೂರು ತಿಂಗಳು ಮಾಡಿದರೆ ಇದು ನಿಮ್ಮ ಜೀವನ ಶೈಲಿ ಆಗುತ್ತದೆ‌.

ಡಯಾಬಿಟಿಸ್ ಮತ್ತು ಮಾನಸಿಕ ಒತ್ತಡ: ಇಂದು ಪ್ರತಿಯೊಬ್ಬನೂ ಅತಿ ಹೆಚ್ಚು ಮಾನಸಿಕ ಒತ್ತಡದಲ್ಲಿ ಬದುಕುತ್ತಿದ್ದಾನೆ. ಇದಕ್ಕೆ ಕಾರಣಗಳು ಹಲವು ‌ಹೆಚ್ಚುತ್ತಿರುವ ಕೊಳ್ಳುಬಾಕ ಸಂಸ್ಕೃತಿ, ಶಿಥಿಲಗೊಳ್ಳುತ್ತಿರುವ ಸಾಮಾಜಿಕ ಮೌಲ್ಯಗಳು, ಕುಸಿಯುತ್ತಿರುವ ಕೌಟುಂಬಿಕ ‌ಸಂಬಂಧಗಳು, ಹೆಚ್ಚುತ್ತಿರುವ ಆರ್ಥಿಕ ಮುಗ್ಗಟ್ಟು..‌ಹೀಗೆ ಅನೇಕ ಕಾರಣಗಳಿವೆ‌ ಪ್ರತಿ ಬಾರಿಯೂ ನಮ್ಮ ಮನಸ್ಸು ಒತ್ತಡಕ್ಕೊಳಗಾದಾಗ ಅಡ್ರಿನಲ್ ಎಂಬ ಹಾರ್ಮೋನ್ ಬಿಡುಗಡೆಯಾಗಿ ರಕ್ತದಲ್ಲಿಯೇ ಸಕ್ಕರೆ ಪ್ರಮಾಣ ಹೆಚ್ಚಿಸುತ್ತದೆ ‌ ಅಡ್ರಿನಲ್ ನಮ್ಮ ಉಳಿವಿಗಾಗಿ ಇರುವ ಅತ್ಯವಶ್ಯಕ ಹಾರ್ಮೋನ್ ‌ ದುರದೃಷ್ಟವಶಾತ್ ಜನರು ದೈಹಿಕ ಆರೋಗ್ಯಕ್ಕೆ ಕೊಟ್ಟಷ್ಟು ಮಹತ್ವವನ್ನು ಮಾನಸಿಕ ಆರೋಗ್ಯಕ್ಕೆ ಕೊಡುತ್ತಿಲ್ಲ. ಈ ನಿಟ್ಟಿನಲ್ಲಿ ತೀರ್ಥರಾಮ ಒಳಲಂಬೆ ಅವರ ಪುಸ್ತಕ ಧ್ಯಾನ, ನಾವು ನಮ್ಮ ಮನಸ್ಸನ್ನು ಅರಿಯುವಲ್ಲಿ ಸಹಕಾರಿ ಆಗಿದೆ. ತಂತ್ರಜ್ಞಾನ ಮುಂದುವರಿದಷ್ಟು ತಾತ್ಕಾಲಿಕ ಸುಖ ಅರಸಿ ದೀರ್ಘಕಾಲೀನ ಶಾಂತಿ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಹ್ಯಾಪಿ ಹಾರ್ಮೋನ್ ದೇಹದಲ್ಲಿ ಬಿಡುಗಡೆಯಾಗಬೇಕಾದರೆ ನಮ್ಮ ಜೀವನವೂ ಅಷ್ಟೇ ಸುಂದರವಾಗಿರಬೇಕಾಗುತ್ತದೆ‌.

*ಪ್ರತಿ ದಿನ ಬೆಳಿಗ್ಗಿನ‌ ದೈಹಿಕ ಚಟುವಟಿಕೆಗಳು ಇನ್ಸುಲಿನ್ ರೆಸಿಸ್ಟೆನ್ಸ್ ಕಡಿಮೆ ಮಾಡಲು ಸಹಾಯಕಾರಿಯಾಗಿದೆ‌

*Sound mind in a Sound body" ಇದುವೆ ಮನುಷ್ಯನ ಪರಿಪೂರ್ಣ ಆರೋಗ್ಯ ಎನ್ನಲಾಗುತ್ತದೆ

*ಡಯಾಬಿಟಿಸ್ ನವರು ಅಪರೂಪಕ್ಕೆಸಿಹಿಯನ್ನು ತಿನ್ನುವುದರಿಂದ ಅಷ್ಟೇನು ಸಮಸ್ಯೆಯಾಗುವುದಿಲ್ಲ‌

*ಸಿಹಿ ಪದಾರ್ಥವನ್ನು ತಿನ್ನುವ ಮುನ್ನ ಸಾಕಷ್ಟು ಪ್ರಮಾಣದಲ್ಲಿ ತರಕಾರಿಗಳನ್ನು ‌ಸೇವಿಸಿ ಮತ್ತು ಒಂದು ಚಮಚೆ ತುಪ್ಪ ಅಥವಾ ಬೆಣ್ಣೆಯನ್ನು ಸೇವಿಸಿ‌

*ಡಯಾಬಿಟಿಸ್ ನವರು ಕಿತ್ತಳೆ ಮೋಸಂಬಿ,ಅಷ್ಟೊಂದು ಮಾಗಿಲ್ಲದ ಪಪಾಯಿ, ಕಿವಿ ಹಣ್ಣುಗಳು, ನೇರಳೆ ಹಣ್ಣುಗಳು ಮತ್ತು ಪೇರಳೆ ಇತ್ಯಾದಿಗಳನ್ನು ನಿಗದಿತ ಪ್ರಮಾಣದಲ್ಲಿ ಸೇವಿಸಬಹುದು‌.‌ ಮಾವು, ಹಲಸು, ಚಿಕ್ಕು, ಸೀತಾಫಲ, ಮುಂತಾದವುಗಳನ್ನು ತ್ಯಜಿಸುವುದು ಒಳ್ಳೆಯದು

Keto Diet ಅಂದರೇನು?.

ಕಿಟೋಜನಿಕ್ ಅಂದರೆ ಕಾರ್ಬೋಹೈಡ್ರೇಟ್ ಗಳನ್ನು ತುಂಬಾ ಕಡಿಮೆ ಮಾಡಿ ಕೊಬ್ಬು ಇರುವ ಆಹಾರ ಪದಾರ್ಥಗಳನ್ನು ಜಾಸ್ತಿ ಸೇವಿಸುವುದಾಗಿದೆ‌‌. ಹೀಗೆ ಮಾಡುವುದರಿಂದ ಲಿವರ್ ನಲ್ಲಿರುವ ಕೊಬ್ಬು ಕರಗಿ ಕೀಟೋನ್ ಬಾಡಿಸ್ ಆಗಿ ನಮ್ಮ ಮೆದುಳು ಅದನ್ನು ಶಕ್ತಿಯಾಗಿ ಉಪಯೋಗಿಸುತ್ತದೆ. ಕೀಟೋ ಡಯಟ್ ಮಾಡುವುದರಿಂದ ರಕ್ತದೊತ್ತಡ, ಬೊಜ್ಜು, ಕ್ಯಾನ್ಸರ್ ಮತ್ತು ಅಲ್ಝೈಮೀರ್ ಕಾಯಿಲೆಗಳನ್ನು ತಕ್ಕಮಟ್ಟಿಗೆ ಸರಿಪಡಿಸಿಕೊಳ್ಖಬಹುದು.

ಡಾ ಪ್ರೀತಂ ಪ್ರತಿ ಶನಿವಾರ ಡಯಾಬಿಟಿಸ್ ರಿವರ್ಸಲ್ ಬಗ್ಗೆ ಮಾಹಿತಿ ನೀಡಿ ಸಲಹೆಗಳನ್ನು ಕೊಡುತ್ತಾರೆ‌.

ಅವರ ವಿಳಾಸ

Dr. Preetham, Dr. Preetham's Diabetes Centre, Durgigudi, 1st parallel Road, Shivamogga, 577201

Mobile number 7899838546

Wats App 9449138546

ಮೊದಲೆ ಆಸ್ಪತ್ರೆಯಿಂದ Appointment ತೆಗೆದುಕೊಳ್ಳಬೇಕು‌

- ಉದಯಕುಮಾರ ಹಬ್ಬು

MORE FEATURES

ಓದಿಯೇ ಅನುಭವಿಸಬಹುದಾದ ಒಂದೊಳ್ಳೆಯ ಶುದ್ಧವಾದ ಪ್ರೇಮ

16-10-2024 ಬೆಂಗಳೂರು

"ವಿರಹದ ತಕ್ಕಡಿ ಹಿಡಿದು ತೂಗಲು, ಸಂಜೆಯ ಹೊತ್ತಿಗೆ ನೆನಪು ಮಾಡಿಕೊಂಡು ಕನಸು ಕಾಣಲು, ಎಷ್ಟು ಪ್ರೀತಿಸ್ತೀನಿ ಅಂತ ಅ...

ವೈಚಾರಿಕತೆಗಿಂತ ಕವಿಗೆ ಭಾಷೆಯೇ ಮುಖ್ಯ

16-10-2024 ಬೆಂಗಳೂರು

"ಅಡಿಗರ ಕಾವ್ಯದಲ್ಲಿ ಆದ ಈ ಬದಲಾವಣೆಗೆ ಸಾಧಾರವಾಗಿ, ನವ್ಯಕಾವ್ಯದ ಸಂದರ್ಭದಲ್ಲಿ ಅವರು ಬರೆದ ಕಾವ್ಯದಲ್ಲಿ ಅವರ rat...

ಕನ್ನಡದ ಕೊರತೆಯಿರುವ ಪ್ರದೇಶದಲ್ಲಿ, ಕನ್ನಡವನ್ನು ಎತ್ತಿ ಹಿಡಿದವರು ಭಾಲಚಂದ್ರ ಜಯಶೆಟ್ಟಿ

15-10-2024 ಬೆಂಗಳೂರು

“ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಲೋಕದಲ್ಲಿ ತಮ್ಮದೆಯಾದ ವ್ಯಕ್ತಿತ್ವದ ಛಾಪು ಮೂಡಿಸಿದ್ದಾರೆ...