Date: 11-10-2024
Location: ಬೆಂಗಳೂರು
ಬೆಂಗಳೂರು: ಕೃಷ್ಣ ಸಂಕುಲ ಬ್ರಾಂಡಿಂಗ್ ಪಿಕ್ಚರ್ಸ್ ಪ್ರಸ್ತುತಪಡಿಸುತ್ತಿರುವ ಹೆಚ್.ವೆಂಕಟೇಶ್ ರಾವ್ ನಿರ್ಮಾಣದ, ವ್ಯಾನ ವರ್ಣ ಜಮ್ಮುಲ ನಿರ್ದೇಶನದ ‘ಮಾಂತ್ರಿಕ’ ಸಿನಿಮಾದ ಪತ್ರಿಕಾಗೋಷ್ಠಿಯು ಗುರುವಾರದಂದು ರೇಣುಕಾಂಬ ಪ್ರೀ ಥಿಯೇಟರ್‌ನಲ್ಲಿ ನಡೆಯಿತು.
ನಿರ್ಮಾಪಕ ಹೆಚ್. ವೆಂಕಟೇಶ್ ರಾವ್ ಮಾತನಾಡಿ, "ಮಾಂತ್ರಿಕ ಸಿನಿಮಾದಲ್ಲಿ ಮಹಾರಾಷ್ಟ್ರದ ಮಬ್ಬಿರದ ಮಾರ್ನುಡಿಯನ್ನು ಕಾಣಬಹುದು. ಈ ಸಿನಿಮಾ ನಡೆಯುವಂತಹದ್ದು ಮಹಾರಾಷ್ಟ್ರದಲ್ಲಿ. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಪ್ರದೇಶವೇ ಮಬ್ಬಿರ. ಮಬ್ಬಿರದಲ್ಲಿ ಮಾರ್ನುಡಿ ಅನ್ನುವಂತಹ ಸ್ಥಳವಿದೆ. ಶಬ್ಧ ಅನ್ನುವಂತಹ ತಂತ್ರಜ್ಞಾನವನ್ನು ನಾವು ಈ ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದು, ಮಾರ್ನುಡಿಯಲ್ಲಿ ನಡೆಯುವಂತಹ ಅನೇಕ ಘಟನೆಗಳನ್ನು ಇಲ್ಲಿ ಕಾಣಬಹುದು. ಈ ಸಿನಿಮಾದ ಮೂಲ ಧ್ಯೇಯ ಮೂಢನಂಬಿಕೆಗಳಿಂದ ದೂರವಾಗಿ ಎನ್ನುವುದು. 20 ಮೂವತ್ತು ವರ್ಷಗಳ ಹಿಂದೆ ಇದ್ದಂತಹ ಮೂಢನಂಬಿಕೆಗಳಿಂದ ದೂರವಾಗಿ ಅನ್ನುವಂತಹ ಸಮಾಜಕ್ಕೆ ಬೇಕಾಗಿರುವಂತಹ ಸಂದೇಶವನ್ನು ಈ ಸಿನಿಮಾ ನೀಡುತ್ತಿದೆ," ಎಂದರು.
ಪತ್ರಿಕಾಗೋಷ್ಠಿಯಲ್ಲಿ ವ್ಯಾನ ವರ್ಣ ಜಮ್ಮುಲ, ಮೈಥಿಲಿ ನಾಯಕ್, ರಾಧಿಕಾ ಮಾಲಿಪಾಟೀಲ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.
ಬೆಂಗಳೂರು: ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನವು 2024ರಲ್ಲಿ ಪ್ರಕಟವಾದ ಅತ್ಯುತ್ತಮ ಕಾದಂಬರಿಗೆ ರಾಜ್ಯ ಮಟ್ಟದ 'ದ್...
ಬೆಂಗಳೂರು: ಸೈಯದ್ ಮುಜ್ತಾಬಾ ಹುಸೇನ್ ಕಿರ್ಮಾನಿ ಅವರ ಆತ್ಮಚರಿತ್ರೆ ‘ಸ್ಟಂಪ್ಡ್ –ಲೈಫ್ ಬಿಹ್ಯಾಂಡ್...
ಸುದೀಪ್ ಅಭಿನಯದ ‘ಮ್ಯಾಕ್ಸ್’ ಚಿತ್ರವು ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದೆ. ಚಿತ್ರದಲ್ಲಿ ಒಂದು ರ...
©2024 Book Brahma Private Limited.