Date: 01-01-2025
Location: ಬೆಂಗಳೂರು
ಮೊದಲು ಹಿರಿಯ ನಟ ದತ್ತಣ್ಣ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತಂತೆ. ಆದರೆ, ಅವರಿಗೆ ಬೇರೆ ಕೆಲಸವಿದ್ದರಿಂದ, ಅವರ ಬದಲು ನವೀನ್ ಶಂಕರ್, ತಿಲಕ್, ರಾಕೇಶ್ ಅಡಿಗ ಮತ್ತು ವಿಕ್ಕಿ ವರುಣ್ ಅವರನ್ನು ಮುಖ್ಯ ಅತಿಥಿಗಳನ್ನಾಗಿ ಕರೆಸಿ, ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ. ಇವರನ್ನೇ ಕರೆಸಿ ಹಾಡು ಬಿಡುಗಡೆ ಮಾಡಿಸುವುದಕ್ಕೂ ಕಾರಣವಿದೆ. ಇವರೆಲ್ಲಾ ಕನ್ನಡ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‍ಗಳು. ಬ್ರಹ್ಮಚಾರಿಗಳ ಕುರಿತಾದ ಹಾಡನ್ನು ಅವರೇ ಬಿಡುಗಡೆ ಮಾಡಿದರೆ ಚೆನ್ನ ಎಂದು ಅವರನ್ನೆಲ್ಲ ಕರೆಸಿ ಹಾಡು ಬಿಡುಗಡೆ ಮಾಡಲಾಗಿದೆ.
ವಿಕಾಸ್ ಉತ್ತಯ್ಯ ಅಭಿನಯದ ‘ಅಪಾಯವಿದೆ ಎಚ್ಚರಿಕೆ’ ಚಿತ್ರವು ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಮಧ್ಯೆ, ಚಿತ್ರದ ‘ಬ್ಯಾಚುಲರ್ಸ್ ಬದುಕು’ ಎಂಬ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಅವರೇ ಬರೆದಿದ್ದಾರೆ.
‘ಅಪಾಯವಿದೆ ಎಚ್ಚರಿಕೆ’ ಚಿತ್ರವನ್ನು ವಿ.ಜಿ.ಮಂಜುನಾಥ್ ಹಾಗು ಪೂರ್ಣಿಮಾ ಎಂ. ಗೌಡ ನಿರ್ಮಾಣ ಮಾಡಿದ್ದಾರೆ. ಸುನಾದ್ ಗೌತಮ್ ಚಿತ್ರಕ್ಕೆ ಸಂಗೀತ ಸಂಯೋಜಿಸಿವುದರ ಜೊತೆಗೆ ಛಾಯಾಗ್ರಹಣವನ್ನು ಮಾಡಿದ್ದಾರೆ. ಚಿತ್ರದಲ್ಲಿ ವಿಕಾಶ್ ಉತ್ತಯ್ಯ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ರಾಧಾ ಭಗವತಿ ಮುಂತಾದವರು ನಟಿಸಿದ್ದಾರೆ.
ಈ ಹಾಡಿನ ಕುರಿತು ಮಾತನಾಡಿದ ಅಭಿಜಿತ್, ’10 ವರ್ಷಗಳಿಂದ ಕನ್ನಡ ಚಿತ್ರರಂಗದ ವಿವಿಧ ಆಯಾಮಗಳಲ್ಲಿ ಕೆಲಸ ಮಾಡಿರುವ ನನಗೆ ಇದು ಮೊದಲ ನಿರ್ದೇಶನದ ಚಿತ್ರ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾದರೂ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳುಳ್ಳ ಚಿತ್ರ. ನಾನು ಕೂಡ ಊರಿನಿಂದ ಬೆಂಗಳೂರಿಗೆ ಬಂದು ಬ್ಯಾಚುಲರ್ ಜೀವನ ಕಳೆದವನು. ಆ ಅನುಭವಗಳೇ ಈ ಹಾಡು ಬರೆಯಲು ಸ್ಪೂರ್ತಿ’ ಎಂದರು.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಅಣ್ಣಯ್ಯ’ ಧಾರಾವಾಹಿಯಲ್ಲಿ ನಟಿಸುತ್ತಿರುವ ವಿಕಾಸ್ ಉತ್ತಯ್ಯ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಚಿತ್ರವಿದು. ಈ ಚಿತ್ರದ ಕುರಿತು ಮಾತನಾಡುವ ವಿಕಾಸ್ ಉತ್ತಯ್ಯ, ‘ನಮ್ಮ ಚಿತ್ರದ ಮೋಷನ್ ಪೋಸ್ಟರ್ ನೋಡಿದಾಗ ಇದೊಂದು ಹಾರಾರ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಅಂದುಕೊಂಡರು. ಈಗ ಈ ಹಾಡನ್ನು ನೋಡಿದಾಗ ಇದೊಂದು ಪಕ್ಕಾ ಮನರಂಜನಾತ್ಮಕ ಚಿತ್ರ ಅನಿಸಬಹುದು. ಎಲ್ಲಾ ಜಾನರ್‍ಗಳು ಸಹ ಇರುವ ಶುದ್ಧ ಕೌಟುಂಬಿಕ ಚಿತ್ರವಿದು. ಈ ಹಾಡನ್ನು ಪ್ರತಿದಿನ ಚಿತ್ರೀಕರಣ ಮಾಡಿದ್ದಾರೆ. ಪ್ರತಿದಿನ ಒಂದಿಷ್ಟು ದೃಶ್ಯಗಳನ್ನು ಚಿತ್ರಕ್ಕೆ ಶೂಟ್ ಮಾಡಲಾಗಿದೆ’ ಎಂದು ತಿಳಿಸಿದರು.
‘ಅವಳ ಅಂದಕ್ಕೆ ಸೋತವರು, ಮಾತಿಗೆ ಮರುಳಾದವರು, ನಡಿಗೆಗೆ ನಡುಗಿದವರಾರೂ, ಭೂಮಿ ಮೇಲೆ ಉಳಿದೇ ಇಲ್ಲ. ...
ಕೆಲವು ವರ್ಷಗಳಿಂದ ಯಶ್ ತಮ್ಮ ಹುಟ್ಟುಹಬ್ಬವನ್ನು (ಜನವರಿ 08) ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದನ್ನು ಬಿಟ್ಟಿದ...
ನಟ-ನಿರ್ಮಾಪಕ ಧನಂಜಯ್ ಮದುವೆ ತಯಾರಿಯಲ್ಲಿದ್ದಾರೆ. ಫೆಬ್ರವರಿ 16ರಂದು ಅವರು ಮೈಸೂರಿನಲ್ಲಿ ಧನ್ಯತಾ ಜೊತೆಗೆ ವಿವಾಹ...
©2025 Book Brahma Private Limited.